For Quick Alerts
  ALLOW NOTIFICATIONS  
  For Daily Alerts

  'ಏಡ್ಸ್'ಗಿಂತ ದೊಡ್ಡ ರೋಗಕ್ಕೆ 'ವಿಲನ್' ಬಲಿ: ಸುದ್ದಿ ಮುಟ್ಟಿಸಿದ ಪ್ರಥಮ್

  |

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಅಭಿನಯಿಸಿದ್ದ 'ದಿ ವಿಲನ್' ಸಿನಿಮಾ ಬಿಡುಗಡೆಯಾಗಿ ಒಂದು ತಿಂಗಳು ಆಗಿದೆ. ಈಗಲೂ ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗ್ತಿದೆ. ಸಿನಿಮಾಗೆ ಮಿಶ್ರಪ್ರತಿಕ್ರಿಯೆ ಸಿಕ್ಕಿದ್ದರೂ ಜನ ಸುದೀಪ್-ಶಿವಣ್ಣನ ಕಾಂಬಿನೇಷನ್ ನೋಡ್ಬೇಕು ಅಂತ ಥಿಯೇಟರ್ ಕಡೆ ಹೋಗ್ತಿದ್ದಾರೆ.

  ಆದ್ರೆ, 'ವಿಲನ್' ಚಿತ್ರಕ್ಕೆ ಈಗ ನಿಜವಾದ ವಿಲನ್ ಎದುರಾಗಿದ್ದಾರೆ. ಸಿನಿಮಾ ರಿಲೀಸ್ ಆಗುವ ವೇಳೆಯಲ್ಲೇ ದಯವಿಟ್ಟು ಸಿನಿಮಾದ ದೃಶ್ಯಗಳನ್ನ ಯಾರೂ ಲೀಕ್ ಮಾಡಬೇಡಿ, ಮೊಬೈಲ್ ನಲ್ಲಿ ಸೆರೆಹಿಡಿದು ಯೂಟ್ಯೂಬ್, ಫೇಸ್ ಬುಕ್ ಗೆ ಹಾಕಬೇಡಿ ಎಂದು ಮನವಿ ಮಾಡಿಕೊಂಡಿದ್ದರು.

  ಆಗ ಸುಮ್ಮನಿದ್ದ ಕಡಿಗೇಡಿಗಳು, ಈಗ ಇಡೀ ಸಿನಿಮಾವನ್ನೇ ಲೀಕ್ ಮಾಡಿದ್ದಾರೆ. ಅದು ಥಿಯೇಟರ್ ಪ್ರಿಂಟ್ ಅಲ್ಲ, HD ಪ್ರಿಂಟ್ ಮಾದರಿಯಲ್ಲಿರುವ ಚಿತ್ರವನ್ನ ಅಕ್ರಮವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಈ ವಿಷ್ಯ ಗೊತ್ತಿದ್ದರೂ ವಿಲನ್ ತಂಡ ಸುಮ್ಮನಿದೆ. ಈ ಬಗ್ಗೆ ಸುದೀಪ್ ಕೂಡ ಪ್ರತಿಕ್ರಿಯಿಸಿದ್ದು, ಚಿತ್ರತಂಡದ ಕಡೆ ಬೆರಳು ತೋರಿಸಿದ್ದಾರೆ. ಅಷ್ಟಕ್ಕೂ, ಕಿಚ್ಚ ಏನಂದ್ರು.? ಮುಂದೆ ಓದಿ.....

  ಸುದ್ದಿ ಮುಟ್ಟಿಸಿದ ಪ್ರಥಮ್

  ಸುದ್ದಿ ಮುಟ್ಟಿಸಿದ ಪ್ರಥಮ್

  'ದಿ ವಿಲನ್' ಸಿನಿಮಾದ HD ಪ್ರಿಂಟ್ ಲೀಕ್ ಆಗಿರುವ ಬಗ್ಗೆ ಒಳ್ಳೆ ಹುಡುಗ ಪ್ರಥಮ್ ಟ್ವೀಟ್ ಮಾಡಿದ್ದು, ಕಿಚ್ಚ ಸುದೀಪ್ ಅವರಿಗೆ ಈ ವಿಷ್ಯ ತಿಳಿಸಿದ್ದಾರೆ. ಇದಕ್ಕೆ ಹೆಚ್ಚು ಮಾತನಾಡದ ಸುದೀಪ್, ಚಿತ್ರತಂಡದ ಕಡೆ ಬೆರಳು ತೋರಿಸಿದ್ದಾರೆ.

  ಪೈರಸಿ 'ಏಡ್ಸ್'ಗಿಂತ ದೊಡ್ಡ ರೋಗ

  ಪೈರಸಿ 'ಏಡ್ಸ್'ಗಿಂತ ದೊಡ್ಡ ರೋಗ

  'ಡಿಯರ್ ಸುದೀಪ್ ಸರ್ ನಮ್ಮ ಕನ್ನಡ ಸಿನಿಮಾ ವಿಲನ್ HD ಪ್ರಿಂಟ್ ಲೀಕ್ ಆಗಿದೆ. ದಯವಿಟ್ಟು ಈ ಬಗ್ಗೆ ಕಟ್ಟುನಿಟ್ಟಾದ ಕ್ರಮ ತೆಗೆದುಕೊಳ್ಳಿ. ಪೈರಸಿ aidsಗಿಂತ ದೊಡ್ಡ ರೋಗ ಚಿತ್ರರಂಗಕ್ಕೆ'' ಎಂದು ಪ್ರಥಮ್, ಸುದೀಪ್ ಗೆ ಹೇಳಿದ್ದಾರೆ.

  ಸುದೀಪ್ ಏನಂದ್ರು.?

  ಸುದೀಪ್ ಏನಂದ್ರು.?

  'ಅದೇ ಕೆಲಸದಲ್ಲಿ ತಂಡವಿದೆ'....ಎಂದು ಹೇಳಿರುವ ಸುದೀಪ್, ಬಿಗ್ ಬಾಸ್ ಪ್ರಥಮ್ ಅವರ ಕಾಳಜಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದ್ರೆ, ವಿಲನ್ ಸಿನಿಮಾದ ಬಗ್ಗೆ ಬಿಡುಗಡೆಯಾದ ಬಳಿಕ ಸರಿಯಾಗಿ ಪ್ರಚಾರ ಮಾಡದೇ ಇರುವುದಕ್ಕೆ ಸುದೀಪ್ ಬೇಸರ ವ್ಯಕ್ತಪಡಿಸಿದ್ದರು. ಆದ್ರೆ, ಈ ಬಗ್ಗೆ ಹೆಚ್ಚೇನೂ ಹೇಳದ ಕಿಚ್ಚ, ತಂಡವಿದೆ ಎಂದಿದ್ದಾರೆ.

  ಕಲೆಕ್ಷನ್ ಕಮ್ಮಿ ಆಯ್ತು

  ಕಲೆಕ್ಷನ್ ಕಮ್ಮಿ ಆಯ್ತು

  'ವಿಲನ್' ಸಿನಿಮಾ ಬಿಡುಗಡೆಗೂ ಮುಂಚೆ ನೂರು ಕೋಟಿ ಸೇರುತ್ತೆ ಎಂದು ಹೇಳಲಾಗ್ತಿತ್ತು. ಆದ್ರೆ, ಚಿತ್ರಕ್ಕೆ ಬಂದ ಮಿಶ್ರಪ್ರತಿಕ್ರಿಯೆಯಿಂದ ಕಲೆಕ್ಷನ್ ಮೇಲೆ ಪರಿಣಾಮ ಬೀರಿದೆ. ಮೊದಲ ದಿನ 20 ಕೋಟಿ ಕಲೆಕ್ಷನ್ ಎಂದು ಹೇಳಿದ ಚಿತ್ರತಂಡ, ನಂತರ ಸಿನಿಮಾದ ಒಟ್ಟಾರೆ ಹೇಳಿಕೆ ಎಷ್ಟು ಎಂದು ಹೇಳಲೇ ಇಲ್ಲ. ಬಹುಶಃ 50 ಕೋಟಿ ದಾಟಿರಬಹುದು ಎಂಬ ಊಹೆ ಇದೆ.

  English summary
  Hatrick hero shivarajkumar and kiccha sudeep starrer the villain movie hd print leaked.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X