ಪ್ರೇಮ್ ಗೆ ಬೇಕಿತ್ತು U ಅಥವಾ U/A, ಆದ್ರೆ ಸೆನ್ಸಾರ್ ನೀಡುತ್ತಿದೆ A
Recommended Video

'ದಿ ವಿಲನ್' ಸಿನಿಮಾ ಈಗ ಸೆನ್ಸಾರ್ ಅಂಗಳದಲ್ಲಿ ಇದೆ. ಈ ಚಿತ್ರ ಕಳೆದ ಬುದವಾರ ಸೆನ್ಸಾರ್ ಬೋರ್ಡ್ ಗೆ ಹೋಗಿತ್ತು. ಈ ವಿಷಯವನ್ನು ಸ್ವತಃ ನಿರ್ದೇಶಕ ಪ್ರೇಮ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ತಿಳಿಸಿದ್ದರು.
ಇದೀಗ 'ದಿ ವಿಲನ್' ಸಿನಿಮಾಗೆ ಸಂಕಷ್ಟ ಎದುರಾಗಿದೆ. ಚಿತ್ರವನ್ನು ನೋಡಿದ ಸೆನ್ಸಾರ್ ಸಂಸ್ಥೆ A ಸರ್ಟಿಫಿಕೇಟ್ ನೀಡಲು ಮುಂದಾಗಿದೆಯಂತೆ. ಆದರೆ, ನಿರ್ದೇಶಕ ಪ್ರೇಮ್ ತಮ್ಮ ಸಿನಿಮಾಗೆ U ಅಥವಾ U/A ಸರ್ಟಿಫಿಕೇಟ್ ಬೇಕು ಎಂಬ ನಿರೀಕ್ಷೆಯಲ್ಲಿ ಇದ್ದಾರೆ.

ಚಿತ್ರದ ಆಕ್ಷನ್ ನಲ್ಲಿ ಕೆಲವು ರಕ್ತದ ದೃಶ್ಯಗಳು ಇದ್ದು, ಈ ಕಾರಣ ಸೆನ್ಸಾರ್ ಬೋರ್ಡ್ A ಸರ್ಟಿಫಿಕೇಟ್ ನೀಡಲು ಮುಂದಾಗಿತ್ತು. ಆದರೆ, A ಸರ್ಟಿಫಿಕೇಟ್ ಸಿಕ್ಕರೆ ಮಲ್ಟಿಪ್ಲೆಕ್ಸ್ ನಲ್ಲಿ ತುಂಬ ತೊಂದರೆ ಆಗುತ್ತದೆ ಎನ್ನುತ್ತಾರೆ ಪ್ರೇಮ್.
ಎಲ್ಲರೂ ಕೂಡ 'ದಿ ವಿಲನ್' ಸಿನಿಮಾವನ್ನು ನೋಡಬೇಕು ಎಂಬ ಆಸೆ ಹೊಂದಿರುವ ಪ್ರೇಮ್ ಈ ಬಗ್ಗೆ ಸೆನ್ಸಾರ್ ಬೋರ್ಡ್ ಜೊತೆಗೆ ಇನ್ನೊಮ್ಮೆ ಚರ್ಚೆ ನಡೆಸಲಿದ್ದಾರಂತೆ. ಇನ್ನು ಗಣೇಶ ಹಬ್ಬಕ್ಕೆ ಸಿನಿಮಾ ಬರುವುದಿಲ್ಲ ಎಂದು ಪ್ರೇಮ್ ಸ್ಪಷ್ಟ ಪಡಿಸಿದ್ದಾರೆ.
'ದಿ ವಿಲನ್' ಶಿವರಾಜ್ ಕುಮಾರ್ ಮತ್ತು ಸುದೀಪ್ ಮೊದಲ ಬಾರಿಗೆ ಒಟ್ಟಿಗೆ ನಟಿಸಿರುವ ಸಿನಿಮಾವಾಗಿದೆ. ಈ ಚಿತ್ರದ ಮೂಲಕ ಆಮಿ ಜಾಕ್ಸನ್ ಕನ್ನಡಕ್ಕೆ ಕಾಲಿಟ್ಟಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿವೆ.


Click it and Unblock the Notifications











