'ನಿನ್ನೆ ಮೊನ್ನೆ ಬಂದವ್ರೆಲ್ಲಾ ನಂಬರ್ 1 ಅಂತಾರೋ' ಏನಿದು ಹೊಸ ವಿವಾದ?

By Naveen

Recommended Video

The villain Kannada movie :ವಿವಾದಕ್ಕೆ ಗುರಿಯಾಗ್ತಿದೆ ಶಿವಣ್ಣನ ದಿ ವಿಲನ್ ಸಾಂಗ್ ..! | Filmibeat Kannada

ವಿವಾದ ಎನ್ನುವುದು ಸಿನಿಮಾದ ಒಂದು ಭಾಗ. ಆದರೆ ಈಗೀಗ ಸಿನಿಮಾಗಿಂತ ವಿವಾದಗಳೆ ಹೆಚ್ಚು ಸುದ್ದಿ ಮಾಡುತ್ತಿವೆ. ಇತ್ತೀಚಿಗಷ್ಟೆ 'ಬಾಸ್' ಎಂಬ ವಿವಾದ ಕನ್ನಡ ಚಿತ್ರರಂಗದಲ್ಲಿ ದೊಡ್ಡದಾಗಿ ಸದ್ದು ಮಾಡಿತ್ತು. ದರ್ಶನ್ ಅಭಿಮಾನಿಗಳು, ಯಶ್ ಅಭಿಮಾನಿಗಳು ಹಾಗೂ ಶಿವರಾಜ್ ಕುಮಾರ್ ಅಭಿಮಾನಿಗಳು ತಮ್ಮ ಮೆಚ್ಚಿನ ನಟನಿಗೆ 'ಬಾಸ್' ಪಟ್ಟ ಸಿಗಬೇಕು ಎಂದು ಪರಸ್ಪರ ತಿಕ್ಕಾಟ ನಡೆಸಿದ್ದರು.

'ಬಾಸ್' ವಿವಾದ ತಣ್ಣಗಾಗುವ ಮುನ್ನವೇ ಈಗ ಹೊಸದೊಂದು ವಿವಾದ ಸೃಷ್ಟಿಯಾಗಿದೆ. ಅದು 'ದಿ ವಿಲನ್' ಸಿನಿಮಾದ ಮೂಲಕ. 'ನಿನ್ನೆ ಮೊನ್ನೆ ಬಂದವ್ರೆಲ್ಲಾ ನಂಬರ್ 1 ಅಂತಾರೋ' ಎಂಬ ಒಂದು ಹಾಡಿನ ಸಾಲು ಈಗ ಬಿಸಿ ಬಿಸಿ ಚರ್ಚೆಗೆ ಕಾರಣ ಆಗಿದೆ. 'ಬಾಸ್' ಬಳಿಕ 'ನಂಬರ್ 1' ಸ್ಥಾನಕ್ಕಾಗಿ ಅಭಿಮಾನಿಗಳ ಮಧ್ಯೆ ಮಾತಿಗೆ ಮಾತು ಶುರು ಆಗಿದೆ.

ಅಂದಹಾಗೆ ಏನಿದು 'ದಿ ವಿಲನ್' ಸಿನಿಮಾದ ಈ 'ನಂಬರ್ 1' ವಿವಾದ ಎಂಬುದು ಮುಂದಿದೆ ಓದಿ...

'ದಿ ವಿಲನ್' ಸಿನಿಮಾದ ಹಾಡಿನ ಸಾಹಿತ್ಯ

'ದಿ ವಿಲನ್' ಸಿನಿಮಾದ ಹಾಡಿನ ಸಾಹಿತ್ಯ

ನಿರ್ದೇಶಕ ಪ್ರೇಮ್ ನಿನ್ನೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ 'ದಿ ವಿಲನ್' ಸಿನಿಮಾದ ಹಾಡಿನ ಮೇಕಿಂಗ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಆ ಹಾಡಿನ ಸಾಹಿತ್ಯದ ಮೊದಲ ಸಾಲನ್ನು ಬರೆದುಕೊಂಡಿದ್ದಾರೆ. 'ನಿನ್ನೆ ಮೊನ್ನೆ ಬಂದವ್ರೆಲ್ಲಾ ನಂಬರ್ 1 ಅಂತಾರೋ' ಎಂಬುದು ಈ ಮಾಸ್ ಹಾಡಿನ ಸಾಹಿತ್ಯ ಆಗಿದೆ.

ಪ್ರೇಮ್ ಟ್ವೀಟ್ ನಲ್ಲಿ ಏನಿದೆ?

''ದಿ ವಿಲನ್' ಚಿತ್ರದ ಮಾಸ್ ಗೀತೆ 'ನಿನ್ನೆ ಮೊನ್ನೆ ಬಂದವ್ರೆಲ್ಲಾ ನಂಬರ್ 1 ಅಂತಾರೋ' ಹಾಡಿನ ಶೂಟಿಂಗ್ ಮುಗಿದಿದೆ. ಯಂಗ್ ಅಂಡ್ ಎನೆರ್ಜಿಟಿಕ್ ಶಿವಣ್ಣ ಸೂಪರ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ತಮ್ಮ ಕೆಲಸವನ್ನು ಶಿವಣ್ಣ ಅದ್ಬುತವಾಗಿ ನಿರ್ವಹಿಸಿದ್ದಾರೆ. ಅವರ ಭಾಗದ ಚಿತ್ರೀಕರಣ ಮುಗಿದಿದೆ. ನಾಗೇಶ್ ಮಾಸ್ಟರ್ ಈ ಹಾಡಿನ ನೃತ್ಯ ನಿರ್ದೇಶನ ಮಾಡಿದ್ದಾರೆ. ಈ ಹಾಡು ಎಲ್ಲರಿಗು ಇಷ್ಟ ಆಗುತ್ತದೆ ಎಂದು ಭಾವಿಸಿದ್ದೇವೆ.'' ಎಂದು ಪ್ರೇಮ್ ಟ್ವೀಟ್ ಮಾಡಿದ್ದಾರೆ.

ವಿವಾದ ಶುರು ಆಗಿದ್ದು ಎಲ್ಲಿ?

ವಿವಾದ ಶುರು ಆಗಿದ್ದು ಎಲ್ಲಿ?

ಸದ್ಯ ಕನ್ನಡದಲ್ಲಿ 'ಬಾಸ್' ಯಾರು ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿತ್ತು. ಅದೇ ಟೈಂ ನಲ್ಲಿ ಈಗ 'ನಿನ್ನೆ ಮೊನ್ನೆ ಬಂದವ್ರೆಲ್ಲಾ ನಂಬರ್ 1 ಅಂತಾರೋ' ಎಂಬ ಸಾಲು ಬಂದಿದೆ. ಇದು ಮತ್ತೊಂದು ವಿವಾದ ಆಗುವಂತೆ ಮಾಡಿದೆ. ಈ ಸಾಲು ಉಳಿದ ನಟರ ಅಭಿಮಾನಿಗಳಿಗೆ ಬೇಸರ ತಂದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ

ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ

ಪ್ರೇಮ್ ಅವರ ಟ್ವಿಟ್ಟರ್ ಖಾತೆ ಹಾಗೂ 'ದಿ ವಿಲನ್' ಸಿನಿಮಾ ಫೇಸ್ ಬುಕ್ ಪೇಜ್ ನಲ್ಲಿ ಕೆಲ ಅಭಿಮಾನಿಗಳು ಈ ಹಾಡಿನ ಸಾಹಿತ್ಯದ ಬಗ್ಗೆ ತಮ್ಮ ಬೇಸರವನ್ನು ವ್ಯಕ್ತ ಪಡಿಸಿದ್ದಾರೆ. ಹಾಡಿನ ಸಾಹಿತ್ಯ ಬದಲು ಮಾಡಿ, 'ನಿನ್ನೆ ಮೊನ್ನೆ ಬಂದವ್ರೆಲ್ಲಾ ನಂಬರ್ 1 ಅಂತಾರೋ' ಎಂಬುದು ವಿವಾದ ಹುಟ್ಟಿಸುತ್ತದೆ ಎಂದು ಮನವಿ ಮಾಡಿದ್ದಾರೆ.

ಆಗ 'ಹವಾ' ಈಗ 'ಬಾಸ್'

ಆಗ 'ಹವಾ' ಈಗ 'ಬಾಸ್'

ಈ ಹಿಂದೆ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಸಿನಿಮಾದ ಯಶ್ ಅವರ 'ಹವಾ' ಡೈಲಾಗ್ ದೊಡ್ಡ ಮಟ್ಟದ ವಿವಾದಕ್ಕೆ ಕಾರಣ ಆಗಿತ್ತು. ಈಗ ಅದೇ ರೀತಿ 'ಬಾಸ್' ವಿವಾದ ಆಗುತ್ತಿದೆ. ಇದರ ಜೊತೆಗೆ ಇತ್ತೀಚಿಗಷ್ಟೆ ಸುದೀಪ್ ಹಾಗೂ ದುನಿಯಾ ವಿಜಯ್ ಫ್ಯಾನ್ಸ್ ಮಧ್ಯೆ 'ಪೈಲ್ವಾನ್' ವಿವಾದ ಕೂಡ ನಡೆದಿತ್ತು.

More from Filmibeat

English summary
Kannada director Prem's 'The Villain' movie song lyrics creating new controversy. 'The Villain' is a kannada movie starring actor Sudeep and Shivarajkumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X