'ದಿ ವಿಲನ್' ಬೆಳಿಗ್ಗೆ 6 ಗಂಟೆ ಶೋ ಎಲ್ಲೆಲ್ಲಿದೆ ನೋಡಿ
Recommended Video

ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ದಿ ವಿಲನ್' ಸಿನಿಮಾ ಅಕ್ಟೋಬರ್ 18 ರಂದು ಬಿಡುಗಡೆಯಾಗಿತ್ತಿದೆ. ಇಬ್ಬರು ಸ್ಟಾರ್ ಒಟ್ಟಿಗೆ ಅಭಿನಯಿಸಿರುವುದರಿಂದ ಮೊದಲ ಶೋನೇ ಸಿನಿಮಾ ನೋಡ್ಬೇಕು ಎಂದು ಅಭಿಮಾನಿಗಳು ಕಾಯ್ತಿದ್ದಾರೆ.
ಅದರಲ್ಲೂ ಮಿಡ್ ನೈಟ್ ಶೋ ಇದಿಯಾ, ಬೆಳಿಗ್ಗೆ ಎಷ್ಟು ಗಂಟೆಗೆ ಮೊದಲ ಶೋ ಆರಂಭವಾಗುತ್ತೆ, ಯಾವ ಥಿಯೇಟರ್ ನಲ್ಲಿ ಮುಂಜಾನೆ ಶೋ ಎಂದು ಪ್ರೇಕ್ಷಕರು ಬುಕ್ ಮೈ ಶೋ ನಲ್ಲಿ, ಪತ್ರಿಕೆಗಳಲ್ಲಿ, ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಹುಡುಕಾಡ್ತಿದ್ದಾರೆ.
ಇದೀಗ, ದಿ ವಿಲನ್ ಚಿತ್ರದ ಫಸ್ಟ್ ಶೋ ಎಲ್ಲಿದೆ ಎಂಬುದು ಸಂಪೂರ್ಣವಾಗಿ ಬಹಿರಂಗವಾಗಿದೆ. ಬೆಂಗಳೂರಿನಲ್ಲಿ ಯಾವ ಯಾವ ಚಿತ್ರಮಂದಿರದಲ್ಲಿ ಪ್ರೇಮ್ ಸಿನಿಮಾ ಫಸ್ಟ್ ಶೋ ಆರಂಭಿಸುತ್ತಿದೆ. ಆ ಚಿತ್ರಮಂದಿರದಲ್ಲಿ ಟಿಕೆಟ್ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ.....

ಬಾಲಾಜಿ ಚಿತ್ರಮಂದಿರ
ಬೆಂಗಳೂರಿನ ತಾವರೆಕೆರೆಯಲ್ಲಿರುವ ಬಾಲಾಜಿ ಚಿತ್ರಮಂದಿರದಲ್ಲಿ ಬೆಳಿಗ್ಗೆ 6 ಗಂಟೆಗೆ ವಿಲನ್ ಮೊದಲ ಶೋ ಆರಂಭವಾಗುತ್ತಿದೆ. ಮೊದಲ ದಿನ ಆರು ಶೋ ಇದ್ದು, ಈಗಾಗಲೇ 6 ಗಂಟೆ ಮತ್ತು 10.30ರ ಶೋ ಸೋಲ್ಡ್ ಔಟ್ ಆಗಿದೆ. ಇಲ್ಲಿ ಟಿಕೆಟ್ ಬೆಲೆ ಬಾಲ್ಕನಿ 200, ಸಾಮಾನ್ಯ ವರ್ಗ 150 ರೂಪಾಯಿ ಇದೆ.

ಗೋಪಾಲನ್ ಸಿನಿಮಾಸ್
ಮೈಸೂರು ರಸ್ತೆಯಲ್ಲಿರುವ ಗೋಪಾಲನ್ ಸಿನಿಮಾಸ್ ನಲ್ಲಿ ಮೊದಲ ಶೋ 7 ಗಂಟೆಗೆ ಆರಂಭವಾಗ್ತಿದೆ. ಮೊದಲ ದಿನ ಆರು ಶೋಗಳು ಪ್ರದರ್ಶನವಾಗ್ತಿದ್ದು, ಟಿಕೆಟ್ ಬೆಲೆ 400 ರೂಪಾಯಿ ಇದೆ. 7ಗಂಟೆ ಬಹುತೇಕ ಟಿಕೆಟ್ ಭರ್ತಿಯಾಗಿದೆ.

ನರಸಿಂಹ ಚಿತ್ರಮಂದಿರ
ಹೊಸೂರು ರಸ್ತೆಯ ಕೂಡ್ಲುಗೇಟ್ ನಲ್ಲಿರುವ ನರಸಿಂಹ ಚಿತ್ರಮಂದಿರದಲ್ಲಿ ಬೆಳಿಗ್ಗೆ 6 ಗಂಟೆಗೆ ಮೊದಲ ಶೊ ಆರಂಭವಾಗ್ತಿದೆ. ಇಲ್ಲಿ ಕೇವಲ ನಾಲ್ಕು ಶೋ ಮಾತ್ರ ವಿಲನ್ ಪ್ರದರ್ಶನವಾಗ್ತಿದೆ. ಟಿಕೆಟ್ ಬೆಲೆ 300, 200, 118 ರೂಪಾಯಿ ಇದೆ.

ರವಿ ಥಿಯೇಟರ್
ಈಜಿಪುರದಲ್ಲಿರುವ ರವಿ ಚಿತ್ರಮಂದಿರದಲ್ಲಿ ದಿ ವಿಲನ್ ಸಿನಿಮಾ ನಾಲ್ಕು ಶೋ ಪ್ರದರ್ಶನವಾಗ್ತಿದೆ. ಮೊದಲ ಶೋ ಬೆಳಿಗ್ಗೆ 6 ಗಂಟೆಗೆ ವಿಲನ್ ಶೋ ನಡೆಯಲಿದ್ದು, ಇಲ್ಲಿ ಟಿಕೆಟ್ ಬೆಲೆ 200 ಮತ್ತು 150ಗೆ ಸಿಗಲಿದೆ.

ಶ್ರೀ ವಿನಾಯಕ
ವರ್ತೂರಿನ ಶ್ರೀ ವಿನಾಯಕ ಚಿತ್ರಮಂದಿರದಲ್ಲಿ ವಿಲನ್ ಬಿಡುಗಡೆಯಾಗುತ್ತಿದ್ದು, ಬೆಳಿಗ್ಗೆ 6 ಗಂಟೆಗೆ ಮೊದಲ ಶೋ ಪ್ರದರ್ಶನವಾಗ್ತಿದೆ. ಇಲ್ಲಿ ಟಿಕೆಟ್ ಬೆಲೆ 300, 210, 200, 118 ರೂಪಾಯಿಗೆ ಸಿಗಲಿದೆ.

ತಿರುಮಲ ಚಿತ್ರಮಂದಿರ
ಅಗರದಲ್ಲಿರುವ ತಿರುಮಲ ಚಿತ್ರಮಂದಿರದಲ್ಲಿ ನಾಲ್ಕು ಶೋ ವಿಲನ್ ಸಿನಿಮಾ ಪ್ರದರ್ಶನವಾಗ್ತಿದೆ. ಬೆಳಿಗ್ಗೆ 6 ಗಂಟೆಗೆ ಮೊದಲ ಪ್ರದರ್ಶನ ಶುರುವಾಗಲಿದ್ದು, ಟಿಕೆಟ್ ಬೆಲೆ 200 ಮತ್ತು 150 ರೂಪಾಯಿಗೆ ಸಿಗಲಿದೆ.

ತುಳಸಿ ಚಿತ್ರಮಂದಿರ
ಮಾರತ್ ಹಳ್ಳಿಯಲ್ಲಿರುವ ತುಳಸಿ ಚಿತ್ರಮಂದಿರದಲ್ಲಿ ಬೆಳಿಗ್ಗೆ 7 ಗಂಟೆಗೆ ವಿಲನ್ ತೆರೆಕಾಣಲಿದೆ. ಮೊದಲ ದಿನ ಒಟ್ಟು ಐದು ಶೋ ಪ್ರದರ್ಶನವಾಗಲಿದ್ದು, ಇಲ್ಲಿ ಟಿಕೆಟ್ ಬೆಲೆ 200, 150, 100ಗೆ ಟಿಕೆಟ್ ಸಿಗಲಿದೆ.

ವೈನಿಧಿ ಚಿತ್ರಮಂದಿರ
ಸಿಂಗಾಪುರದಲ್ಲಿರುವ ವೈನಿಧಿ ಚಿತ್ರಮಂದಿರಲ್ಲಿ ಬೆಳಿಗ್ಗೆ 6 ಗಂಟೆಗೆ ವಿಲನ್ ಮೊದಲ ಶೋ ಪ್ರದರ್ಶನವಾಗಲಿದೆ. ಮೊದಲ ಒಟ್ಟು ಐದು ಶೋಗಳು ನಡೆಯಲಿದ್ದು, ಇಲ್ಲಿ ಟಿಕೆಟ್ ಬೆಲೆ 200, 150 ರೂಪಾಯಿಗೆ ಟಿಕೆಟ್ ಸಿಗಲಿದೆ.

ಶ್ರೀವೆಂಕಟೇಶ್ವರ ಥಿಯೇಟರ್
ಗಿರಿನಗರದಲ್ಲಿರುವ ಶ್ರೀವೆಂಕಟೇಶ್ವರ ಥಿಯೇಟರ್ ಮೊದಲ ಐದು ಶೋಗಳು ವಿಲನ್ ಸಿನಿಮಾಗೆ ನೀಡಿದ್ದು, ಬೆಳಿಗ್ಗೆ 7 ಗಂಟೆಗೆ ಮೊದಲ ಶೋ ಆರಂಭವಾಗಲಿದೆ. ಆದ್ರೆ, ಮೊದಲ ಶೋ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಇಲ್ಲಿ ಟಿಕೆಟ್ ಬೆಲೆ 200 ರೂಪಾಯಿ

ವೈಭವ ಚಿತ್ರಮಂದಿರ
ಸಂಜಯ್ ನಗರದಲ್ಲಿರುವ ವೈಭವ ಚಿತ್ರಮಂದಿರದಲ್ಲಿ ಒಟ್ಟು ಆರು ಶೋ ಪ್ರದರ್ಶನವಾಗಲಿದ್ದು, ಮೊದಲ ಶೋ ಬೆಳಿಗ್ಗೆ 6 ಗಂಟೆಗೆ ಆರಂಭವಾಗಲಿದೆ. ಇಲ್ಲಿ ಟಿಕೆಟ್ ಬೆಲೆ 300 ಮತ್ತು 200 ರೂಪಾಯಿಯಾಗಿದೆ.


Click it and Unblock the Notifications











