»   » 'ದಿ ವಿಲನ್' : ರಾಮನೊಳಗೊಬ್ಬ ರಾವಣ... ರಾವಣನೊಳಗೊಬ್ಬ ರಾಮ..!

'ದಿ ವಿಲನ್' : ರಾಮನೊಳಗೊಬ್ಬ ರಾವಣ... ರಾವಣನೊಳಗೊಬ್ಬ ರಾಮ..!

Posted By:
Subscribe to Filmibeat Kannada
Sudeep And Shivanna Will Fight In The Villain ? | Filmibeat Kannada

ಪ್ರೇಮ್ ನಿರ್ದೇಶನದ 'ದಿ ವಿಲನ್' ಸಿನಿಮಾ ಸೃಷ್ಟಿ ಮಾಡಿರುವ ಕ್ರೇಜ್ ತುಂಬನೇ ದೊಡ್ಡದಿದೆ. ಮೊದಲ ಬಾರಿಗೆ ಶಿವಣ್ಣ ಮತ್ತು ಸುದೀಪ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಸಿನಿಮಾದ ಕಥೆ ಮೇಲೆ ಎಲ್ಲರಿಗೂ ನಿರೀಕ್ಷೆ ಇದೆ.

ಸುದೀಪ್ ಹುಟ್ಟುಹಬ್ಬಕ್ಕೆ 'ದಿ ವಿಲನ್' ತಂಡ ಕೊಡ್ತಿರುವ ಗಿಫ್ಟ್ ಏನು?

ಸದ್ಯ ಸುದೀಪ್ ಹುಟ್ಟುಹಬ್ಬದ ವಿಶೇಷವಾಗಿ ಚಿತ್ರದ ಒಂದು ಪೋಸ್ಟರ್ ರಿಲೀಸ್ ಆಗಿದೆ. ಈ ಪೋಸ್ಟರ್ ಸರಿಯಾಗಿ ಗಮನಿಸಿದರೆ ಚಿತ್ರದ ಕಥೆ ಬಗ್ಗೆ ಒಂದು ಸುಳಿವು ಸಿಗುತ್ತದೆ. 'ದಿ ವಿಲನ್' ಚಿತ್ರದ ಅಡಿ ಬರಹ 'ರಾಮ್ OR ರಾವಣ್' ಎಂದು ಇದ್ದು, ಚಿತ್ರದಲ್ಲಿ ಯಾರು ರಾಮ? ಯಾರು ರಾವಣ? ಎಂಬುದು ಎಲ್ಲರ ಪ್ರಶ್ನೆಯಾಗಿತ್ತು.

'The Villain' movie new poster released

ಇದೀಗ 'ದಿ ವಿಲನ್' ಚಿತ್ರದ ಈ ಹೊಸ ಪೋಸ್ಟರ್ ನೋಡಿದರೆ 'ರಾಮನೊಳಗೊಬ್ಬ ರಾವಣ... ರಾವಣನೊಳಗೊಬ್ಬ ರಾಮ' ಎಂಬ ಕಾನ್ಸೆಪ್ಟ್ ಮೇಲೆ ಪ್ರೇಮ್ ಸಿನಿಮಾ ಮಾಡುತ್ತಿದ್ದಾರೆ ಎಂಬ ಅನುಮಾನ ಮೂಡುತ್ತದೆ. ಪ್ರತಿಯೊಬ್ಬರಲ್ಲಿಯೂ ಒಳ್ಳೆಯದು ಹಾಗೂ ಕೆಟ್ಟದು.. ಎರಡೂ ಇರುತ್ತದೆ. ಪ್ರತಿ ವ್ಯಕ್ತಿ ಕೂಡ ರಾಮ ಹಾಗೂ ರಾವಣ ಎರಡು ಆಗಿರುತ್ತಾನೆ... ಎಂಬ ಥೀಮ್ ಮೇಲೆ ಚಿತ್ರದ ಕಥೆ ಇದ್ದರೂ ಇರಬಹುದು.

ಸುದೀಪ್ ಅಭಿಮಾನಿ ಮಾಡಿದ 'ದಿ ವಿಲನ್' ಟೀಸರ್ ನೋಡಿ

'ದಿ ವಿಲನ್' ಚಿತ್ರದ ಪೋಸ್ಟರ್ ನೋಡಿ ಯಾರು ಏನೇ ಅಂದುಕೊಳಬಹುದು. ಆದರೆ ಪೋಸ್ಟರ್ ನಲ್ಲಿಯೇ ಕಥೆ ಬಿಟ್ಟುಕೊಡುವ ನಿರ್ದೇಶಕ ಪ್ರೇಮ್ ಅಲ್ಲ. ನಾವು ನೀವು ಏನೇ ಲೆಕ್ಕ ಹಾಕಿದರೂ ಸಿನಿಮಾ ರಿಲೀಸ್ ಆದ ಮೇಲೆ ಇದಕ್ಕೆಲ್ಲ ಉತ್ತರ ಸಿಗಲಿದೆ.

English summary
Kannada Actor Shivarajkumar and Sudeep staring 'The Villain' movie new poster is out. The movie is directed by prem.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada