ಬಿಡುಗಡೆ ಮುನ್ನವೇ ಚಿತ್ರಮಂದಿರದಲ್ಲಿ 'ದಿ ವಿಲನ್' ಕ್ರೇಜ್
Recommended Video

'ದಿ ವಿಲನ್' ಕಳೆದ ಒಂದು ವರ್ಷದಿಂದಲೂ ಕನ್ನಡ ಸಿನಿಮಾರಂಗದಲ್ಲಿ ಮಾತ್ರವಲ್ಲದೆ ಅಕ್ಕ ಪಕ್ಕದ ಚಿತ್ರರಂಗದಲ್ಲಿಯೂ ಸುದ್ದಿ ಮಾಡಿರುವ ಸಿನಿಮಾ. ಸಾಕಷ್ಟು ಕಾರಣಗಳಿಂದ ಸದ್ದು ಮಾಡುತ್ತಿರುವ 'ದಿ ವಿಲನ್' ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಹಾಡುಗಳಿಂದ, ಪೋಸ್ಟರ್ ನಿಂದ ಪದೇ ಪದೇ ಪ್ರೇಕ್ಷಕರ ಗಮನವನ್ನು ಸೆಳೆಯುತ್ತಿರುವ 'ದಿ ವಿಲನ್' ಸಿನಿಮಾ ಯಾವಾಗ ಬಿಡುಗಡೆ ಆಗಲಿದೆ ಎನ್ನುವ ಕುತೂಹಲ ಎಲ್ಲರಲ್ಲಿಯೂ ಹೆಚ್ಚಾಗಿದೆ. ಆರಂಭದಲ್ಲಿ ವರಮಹಾಲಕ್ಷ್ಮೀ ಹಬ್ಬಕ್ಕೆ ಸಿನಿಮಾ ರಿಲೀಸ್ ಎಂದಿದ್ದ ನಿರ್ದೇಶಕರು ಈಗ ಗೌರಿ ಗಣೇಶ ಹಬ್ಬಕ್ಕೆ ಚಿತ್ರ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದಿದ್ದಾರೆ.
ಇದೇ ದಿನಾಂಕ ಚಿತ್ರ ಬಿಡುಗಡೆ ಎನ್ನುವುದನ್ನು ಇನ್ನು ಪಕ್ಕಾ ಮಾಡಿಲ್ಲ ಸಿನಿಮಾತಂಡ. ಆದರೆ ಚಿತ್ರ ಬಿಡುಗಡೆ ತಡವಾಗುತ್ತಿದ್ದ ಹಾಗೇ ಸಿನಿಮಾ ಬಗ್ಗೆ ಕ್ರೇಜ್ ಹೆಚ್ಚಾಗುತ್ತಿದೆ. ಹಾಗಾದರೆ ಹೇಗಿದೆ ಶಿವರಾಜ್ ಕುಮಾರ್ ಮತ್ತು ಕಿಚ್ಚ ಅಭಿನಯದ 'ದಿ ವಿಲನ್' ಸಿನಿಮಾ ಕ್ರೇಜ್ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ. ಮುಂದೆ ಓದಿ

ಕುತೂಹಲ ಮೂಡಿಸುತ್ತಿರುವ ಸಿನಿಮಾ
'ದಿ ವಿಲನ್' ಕಿಚ್ಚ ಸುದೀಪ್ ಹಾಗೂ ಶಿವರಾಜ್ ಕುಮಾರ್ ಅಭಿನಯದ ಸಿನಿಮಾ. ಆರಂಭದಿಂದಲೂ ಕುತೂಹಲವನ್ನು ಹುಟ್ಟುಹಾಕಿರುವ 'ದಿ ವಿಲನ್' ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಬಿಡುಗಡೆ ದಿನಾಂಕ ನಿಗದಿ ಆಗುವ ಮುನ್ನವೇ ಥಿಯೇಟರ್ ಬಳಿ ಪೋಸ್ಟರ್, ಬ್ಯಾನರ್ ರಾರಾಜಿಸುತ್ತಿವೆ.

ಬಿಡುಗಡೆ ನಿಗದಿ ಮುನ್ನವೇ ಶೋ ಬಗ್ಗೆ ಮಾಹಿತಿ
ಮಾಹಿತಿಗಳ ಪ್ರಕಾರ 'ದಿ ವಿಲನ್' ಸಿನಿಮಾ ಗೌರಿ-ಗಣೇಶ ಹಬ್ಬಕ್ಕೆ ಬಿಡುಗಡೆ ಆಗುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಬಗ್ಗೆ ಚಿತ್ರತಂಡ ಚಿತ್ರ ರಿಲೀಸ್ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. ಆದರೆ ರಾಜ್ಯದ ಅನೇಕ ಥಿಯೇಟರ್ ಗಳಲ್ಲಿ ಸಿನಿಮಾ ಪೋಸ್ಟರ್ ಗಳನ್ನು ಹಾಕಿ ಪ್ರದರ್ಶನದ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.

ಸುದೀಪ್-ಶಿವರಾಜ್ ಕುಮಾರ್ ಅಭಿನಯ
'ದಿ ವಿಲನ್' ಸಿನಿಮಾ ಬಗ್ಗೆ ಇಷ್ಟೆಲ್ಲಾ ಕ್ರೇಜ್ ಹುಟ್ಟಿಕೊಳ್ಳಲು ಸಾಕಷ್ಟು ಕಾರಣಗಳಿವೆ. ಸುದೀಪ್ ಮತ್ತು ಶಿವರಾಜ್ ಕುಮಾರ್ ಇದೇ ಮೊದಲ ಬಾರಿಗೆ ಒಟ್ಟಿಗೆ ಅಭಿನಯ ಮಾಡುತ್ತಿದ್ದು, ಇಬ್ಬರು ಸ್ಟಾರ್ ಗಳನ್ನು ಒಟ್ಟಿಗೆ ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.

ಗೌರಿ-ಗಣೇಶ ಹಬ್ಬಕ್ಕೆ ರಿಲೀಸ್
ಸದ್ಯ 'ದಿ ವಿಲನ್' ಸಿನಿಮಾ ಸೆನ್ಸಾರ್ ಮಂಡಳಿ ಮುಂದಿದ್ದು ಈ ವಾರದಲ್ಲಿಯೇ ಸೆನ್ಸಾರ್ ಪ್ರಮಾಣ ಪತ್ರವನ್ನು ನಿರೀಕ್ಷೆ ಮಾಡುತ್ತಿದೆ ಚಿತ್ರತಂಡ. ಎಲ್ಲವೂ ಅಂದುಕೊಂಡಂತೆ ಆದರೆ 'ದಿ ವಿಲನ್' ಚಿತ್ರವನ್ನು ಗೌರಿ-ಗಣೇಶ ಹಬ್ಬಕ್ಕೆ ನಿರೀಕ್ಷೆ ಮಾಡಬಹುದಾಗಿದೆ.


Click it and Unblock the Notifications











