»   » ಬ್ಯಾಂಕಾಕ್, ಲಂಡನ್ ನಂತರ 'ದಿ ವಿಲನ್' ಹೋಗಿರುವುದು ಎಲ್ಲಿಗೆ?

ಬ್ಯಾಂಕಾಕ್, ಲಂಡನ್ ನಂತರ 'ದಿ ವಿಲನ್' ಹೋಗಿರುವುದು ಎಲ್ಲಿಗೆ?

Posted By:
Subscribe to Filmibeat Kannada

ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಬಹುನಿರೀಕ್ಷಿತ ಚಿತ್ರ 'ದಿ ವಿಲನ್' ವಿದೇಶಗಳಲ್ಲಿ ಚಿತ್ರೀಕರಣ ಮಾಡುತ್ತಿದೆ. ಇಷ್ಟು ದಿನ ಬ್ಯಾಂಕಾಕ್ ಮತ್ತು ಲಂಡನ್ ನಲ್ಲಿ ಶೂಟಿಂಗ್ ಮಾಡಿದ್ದ ಪ್ರೇಮ್ ತಂಡ, ಅಲ್ಲಿ ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿತ್ತು. ನಂತರ 'ದಿ ವಿಲನ್' ಚಿತ್ರತಂಡ ಎಲ್ಲಿ ಹೋದರು ಎಂಬುದರ ಬಗ್ಗೆ ಮಾಹಿತಿಯೇ ಸಿಕ್ಕಿರಲಿಲ್ಲ.

ಈಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಬ್ಯಾಂಕಾಕ್ ಮತ್ತು ಲಂಡನ್ ನಂತರ 'ದಿ ವಿಲನ್' ಚಿತ್ರತಂಡ ಭಾರತಕ್ಕೆ ವಾಪಸ್ ಆಗಿದೆ. ಆದ್ರೆ, ಕರ್ನಾಟಕಕ್ಕೆ ಬಂದಿಲ್ಲ. ಬದಲಾಗಿ, ಮುಂಬೈಗೆ ತಲುಪಿದೆ. ಮುಂಬೈನಲ್ಲಿ ನಿರ್ದೇಶಕ ಪ್ರೇಮ್ ಮತ್ತು ತಂಡ ಇರುವ ಫೋಟೋವನ್ನ ಸ್ವತಃ ಪ್ರೇಮ್ ಅವರೇ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

'ಲಂಡನ್'ನಿಂದ ವಾಪಸ್ ಆಗ್ತಿರುವ 'ದಿ ವಿಲನ್'

The villain Movie Team in Mumabi

ಹೀಗಾಗಿ, 'ದಿ ವಿಲನ್' ಚಿತ್ರತಂಡ ಶೂಟಿಂಗ್ ಗಾಗಿ ಮುಂಬೈಗೆ ಹೋಗಿರಬಹುದು ಎಂಬ ಅನುಮಾನ ಕಾಡಿದೆ. ಆದ್ರೆ, ಈ ಬಗ್ಗೆ ಸ್ಪಷ್ಟನೆ ಇಲ್ಲ. ಲಂಡನ್ ಚಿತ್ರೀಕರಣ ಮುಗಿದ ತಕ್ಷಣ ಸುದೀಪ್ ಮತ್ತು ಶಿವಣ್ಣ ಭಾರತಕ್ಕೆ ವಾಪಸ್ ಆಗಿದ್ದರು. ನಟಿ ಆಮಿ ಜಾಕ್ಸನ್ ರಮೇಶ್ ಅರವಿಂದ್ ನಿರ್ದೇಶನ ಮಾಡುತ್ತಿರು 'ಬಟರ್ ಫ್ಲೈ' ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡರು. ಆದ್ರೆ, ಪ್ರೇಮ್ ಮತ್ತು ತಂಡದ ಸುಳಿವು ಸಿಕ್ಕಿರಲಿಲ್ಲ.

ಚಿತ್ರಗಳು: ಲಂಡನ್ ನಲ್ಲಿ 'ದಿ ವಿಲನ್' ಕಾರುಬಾರು

The villain Movie Team in Mumabi

'ದಿ ವಿಲನ್' ಚಿತ್ರ ಅಂಡರ್ ವರ್ಲ್ಡ್ ಕಥೆಯಾಗಿದ್ದು, ಮುಂಬೈನಲ್ಲೂ ಚಿತ್ರದ ಶೂಟಿಂಗ್ ನಡೆಯುವ ನಿರೀಕ್ಷೆ ಇದೆ. ಹೀಗಾಗಿ, ವಿಲನ್ ಚಿತ್ರದ ಮುಂದಿನ ಶೆಡ್ಯೂಲ್ ಎಲ್ಲಿ ಎಂಬುದರ ಬಗ್ಗೆ ನಿರ್ದೇಶಕ ಪ್ರೇಮ್ ಅವರೇ ಉತ್ತರಿಸಿಬೇಕಿದೆ.

'ದಿ ವಿಲನ್' ರಿಮೇಕ್: ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟ ಕನ್ನಡದ ಹೆಬ್ಬುಲಿ ಸುದೀಪ್!

English summary
After Bangkok And Londen Shooting, Now The Villain Movie Arrived To Mumabi For next schedule.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada