»   » ಅಭಿಮಾನಿಗಳಿಗೆ 'ದಿ ವಿಲನ್' ಚಿತ್ರತಂಡದಿಂದ ಸಿಹಿ ಸುದ್ದಿ

ಅಭಿಮಾನಿಗಳಿಗೆ 'ದಿ ವಿಲನ್' ಚಿತ್ರತಂಡದಿಂದ ಸಿಹಿ ಸುದ್ದಿ

Posted By:
Subscribe to Filmibeat Kannada
ದಿ ವಿಲನ್ ಸಿನಿಮಾದ ಟೀಸರ್ ಇದೇ ವಾರದಲ್ಲಿ ರಿಲೀಸ್ | Filmibeat Kannada

ಸೆಟ್ಟೇರೋ ಮುಂಚಿನಿಂದಲೂ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿರೋ ಏಕೈಕ ಸಿನಿಮಾ 'ದಿ ವಿಲನ್'. ಇಬ್ಬರು ಸ್ಟಾರ್ ನಟರ ಅಭಿಮಾನಿಗಳಿಗೆ ಹಂತ ಹಂತವಾಗಿ ಸರ್ ಪ್ರೈಸ್ ನೀಡುತ್ತಾ ಬರುತ್ತಿರುವ ನಿರ್ದೇಶಕ ಜೋಗಿ ಪ್ರೇಮ್ ಅಭಿಮಾನಿಗಳಿಗೆ ಹಬ್ಬ ಮಾಡಲು ತಯಾರಿ ಮಾಡಿಕೊಳ್ಳಿ ಎಂದು ಸೂಚನೆ ನೀಡಿದ್ದಾರೆ. ಅದ್ದೂರಿಯಾಗಿ ಟೈಟಲ್ ಲಾಂಚ್ ಮಾಡಿ ಫಸ್ಟ್ ಲುಕ್ ಬಿಡುಗಡೆ ಮಾಡಿದ ಪ್ರೇಮ್ ಅಭಿಮಾಗಳಿಗಾಗಿ ಭರ್ಜರಿ ಗಿಫ್ಟ್ ರೆಡಿ ಮಾಡಿದ್ದಾರೆ.

ಚಿತ್ರೀಕರಣದ ಪ್ರತಿ ಹಂತದ ಅಪ್ಡೇಟ್ ಗಳನ್ನೂ ಅಭಿಮಾನಿಗಳಿಗೆ ಮೊದಲಿನಿಂದಲೂ ತಿಳಿಸುತ್ತಾ ಬರುತ್ತಿರುವ 'ದಿ ವಿಲನ್' ಚಿತ್ರತಂಡ ಈ ಬಾರಿಯೂ ಸಂತಸದ ಸುದ್ದಿಯನ್ನ ಅಭಿಮಾನಿಗಳಿಗೆ ಮೊದಲು ತಿಳಿಸಿದೆ. ಇದೇ ವಾರದಲ್ಲಿ 'ದಿ ವಿಲನ್' ಸಿನಿಮಾದ ಟೀಸರ್ ಬಿಡುಗಡೆಗೆ ಸಿದ್ದತೆ ನಡೆದಿದ್ದು, ಪ್ರೇಮ್ ತಮ್ಮ ಟ್ವಿಟ್ಟರ್ ಮೂಲಕ ಈ ವಿಚಾರವನ್ನ ಹಂಚಿಕೊಂಡಿದ್ದಾರೆ.

ಇದೇ ವಾರ ಬಿಡುಗಡೆ ಆಗಲಿರುವ ಟೀಸರ್

ಮೋಷನ್ ಪೋಸ್ಟರ್ ಮೂಲಕ ಅಭಿಮಾನಿಗಳ ಕುತೂಹಲ ಕೆರಳಿಸಿದ್ದ ನಿರ್ದೇಶಕ ಪ್ರೇಮ್, ದಿ ವಿಲನ್ ಚಿತ್ರದ ಟೀಸರ್ ಬಿಡುಗಡೆಗೆ ಸಿದ್ದತೆ ಮಾಡಿಕೊಂಡಿದ್ದಾರೆ. ಇದೇ ವಾರಾಂತ್ಯದಲ್ಲಿ ಟೀಸರ್ ರಿಲೀಸ್ ಮಾಡಲಿದ್ದು ನಾಳೆ(ಡಿಸೆಂಬರ್ 6) ಅಧಿಕೃತವಾಗಿ ದಿನಾಂಕ ಅನೌನ್ಸ್ ಮಾಡಲಿದ್ದಾರೆ.

ಅಭಿಮಾನಿಗಳಿಗೆ ಗಿಫ್ಟ್

ಸಿನಿಮಾದ ಆರಂಭದಿಂದಲೂ ಅಭಿಮಾನಿಗಳ ಸಮ್ಮುಖದಲ್ಲೇ ಚಿತ್ರದ ಎಲ್ಲಾ ಸಮಾರಂಭಗಳನ್ನ ಆಯೋಜನೆ ಮಾಡಿದ್ದ ನಿರ್ದೇಶಕ ಪ್ರೇಮ್, ಟೀಸರ್ ಕೂಡ ಅಭಿಮಾನಿಗಳ ಜೊತೆಯಲ್ಲೇ ಬಿಡುಗಡೆ ಮಾಡುವ ಸಾಧ್ಯತೆಗಳು ಹೆಚ್ಚಾಗಿದೆ.

ಎರಡು ಟೀಸರ್ ರಿಲೀಸ್ ಮಾಡಲು ಸಜ್ಜು

ಶಿವರಾಜ್ ಕುಮಾರ್ ಅಭಿನಯದ ಟೀಸರ್ ಹಾಗೂ ಸುದೀಪ್ ಅಭಿನಯದ ಮತ್ತೊಂದು ಟೀಸರ್ ಬಿಡುಗಡೆಗೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಇಬ್ಬರು ಅಭಿಮಾನಿಗಳಿಗೂ ಬಿಗ್ ಗಿಫ್ಟ್ ಇದಾಗಲಿದೆ.

ಪ್ರೇಮ್ ಟ್ವಿಟ್ಟರ್ ಹ್ಯಾಕ್

ದಿ ವಿಲನ್ ಸಿನಿಮಾದ ಚಿತ್ರೀಕರಣ ಕೊನೆಯ ಹಂತ ತಲುಪಿದೆ. ಇತ್ತೀಚಿಗಷ್ಟೇ ಸಿನಿಮಾತಂಡ ಮೈಸೂರಿನಲ್ಲಿ ಹಾಡಿನ ಚಿತ್ರೀಕರಣ ಮಾಡಿ ಮುಗಿಸಿದೆ. ಸದಾ ಟ್ವಿಟ್ಟರ್ ನಲ್ಲಿ ದಿ ವಿಲನ್ ಸಿನಿಮಾ ಬಗ್ಗೆ ಮಾಹಿತಿ ನೀಡುತ್ತಿದ್ದ ಪ್ರೇಮ್ 15 ದಿನಗಳಿಂದ ಸೈಲೆಂಟ್ ಆಗಿದ್ರು. ಕಾರಣ ಏನಪ್ಪಾ ಅಂದ್ರೆ ಪ್ರೇಮ್ ಅವರ ಟ್ವಿಟ್ಟರ್ ಅಕೌಂಟ್ ನ ಯಾರೋ ಹ್ಯಾಕ್ ಮಾಡಿದ್ದಾರೆ. ಸದ್ಯ ಹೊಸ ಅಕೌಂಟ್ ನಲ್ಲಿ ಪ್ರೇಮ್ ಅಭಿಮಾನಿಗಳಿಗೆ ಅಪ್ಡೇಟ್ ನೀಡುತ್ತಿದ್ದಾರೆ.

English summary
Teaser of Shivarajkumar and Sudeep's The Villain movie will be out this week, Director Prem ready to release two separate teaser.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada