'ವಿಲನ್' ಮೊದಲ ರಿವ್ಯೂ: ಫಸ್ಟ್ ಹಾಫ್ ಚಿಂದಿ, ಸೆಕೆಂಡ್ ಹಾಫ್.?
Recommended Video

ಕಿಚ್ಚ ಸುದೀಪ್ ಮತ್ತು ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷೆಯ ಸಿನಿಮಾ ದಿ ವಿಲನ್ ಇಂದು ರಾಜ್ಯಾದ್ಯಂತ ತೆರೆಕಂಡಿದೆ. ರಾಜ್ಯದ ಹಲವು ಕಡೆ ಮಧ್ಯರಾತ್ರಿಯಿಂದಲೇ ಪ್ರದರ್ಶನ ಆರಂಭವಾಗಿದ್ದು, ಮುಂಜಾನೆ 5, 6 ಮತ್ತು 7 ಗಂಟೆಗೆ ಮೊದಲ ಶೋ ಆರಂಭವಾಗಿದೆ.
ಈಗಾಗಲೇ ಫಸ್ಟ್ ಶೋ ಸಿನಿಮಾ ನೋಡಿದ ಪ್ರೇಕ್ಷಕರು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಪ್ರೇಮ್ ನಿರ್ದೇಶನದ ಬಗ್ಗೆ ಥ್ರಿಲ್ ಆಗಿದ್ದಾರೆ. ಇನ್ನು ಶಿವಣ್ಣ ಮತ್ತು ಸುದೀಪ್ ಎಂಟ್ರಿಗೆ ಇಡೀ ಚಿತ್ರಮಂದಿರ ಘರ್ಜಿಸುತ್ತಿದೆ ಎಂಬ ಅಭಿಪ್ರಾಯಗಳು ಸಿಕ್ಕಿದೆ.
ಇನ್ನು ಸಿನಿಮಾ ನೋಡಿದ ಮತ್ತು ಸದ್ಯ ನೋಡುತ್ತಿರುವ ಪ್ರೇಕ್ಷಕರು, ಥಿಯೇಟರ್ ಆದ ಅನುಭವ ಮತ್ತು ಸಿನಿಮಾ ಬಗ್ಗೆ ತಮ್ಮ ಅನಿಸಿಕೆಯನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಹಾಗಿದ್ರೆ, ಸಿನಿಮಾ ಬಗ್ಗೆ ಪ್ರೇಕ್ಷಕರ ಮೊದಲ ರಿವ್ಯೂ ಏನು.? ಮುಂದೆ ಓದಿ.....

ಫಸ್ಟ್ ಹಾಫ್ ಚಿಂದಿ, ಸೆಕೆಂಡ್ ಹಾಫ್.?
'ಪ್ರೇಮ್ ಅವರ ವಿಲನ್ ಸಖತ್ ಎಂಟರ್ ಟೈನಿಂಗ್ ಆಗಿದೆ. ಸುದೀಪ್ ಮತ್ತು ಎಸ್ ಆರ್ ಕೆ ರಾಕಿಂಗ್. ಒಟ್ಟಾರೆ ಫಸ್ಟ್ ಹಾಫ್ ಮನರಂಜನೆಯಿಂದ ಕೂಡಿದೆ. ಸೆಕೆಂಡ್ ಹಾಫ್ ಗಾಗಿ ಕಾಯ್ತಿದ್ದೀನಿ'' ಎಂದು ಸಿನಿಮಾ ನೋಡುತ್ತಿರುವ ಅಭಿಮಾನಿ ಟ್ವೀಟ್ ಮಾಡಿದ್ದಾರೆ.

ಶಿವಣ್ಣ, ಸುದೀಪ್ ಎಂಟ್ರಿ ಚಿಂದಿ
ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಮೊದಲ ಶೋ ನೋಡ್ತಿರುವ ಅಭಿಮಾನಿಯೊಬ್ಬರು ಹೀಗೆ ಟ್ವೀಟ್ ಮಾಡಿದ್ದಾರೆ. 'ಮೊದಲಾರ್ಧ ಪರವಾಗಿಲ್ಲ. ಸುದೀಪ್ ಅವರಿಗಿಂತ ಶಿವಣ್ಣ ಅವರ ದೃಶ್ಯಗಳು ಕಮ್ಮಿ. ಆದ್ರೆ, ಶಿವಣ್ಣ ಮತ್ತು ಸುದೀಪ್ ಎಂಟ್ರಿ ಸೀನ್ ಅದ್ಭುತ. ಇಡೀ ಥಿಯೇಟರ್ ರಾಜ್ ಅಭಿಮಾನಿಗಳಿಂದ ತುಂಬಿದೆ.

ಫಸ್ಟ್ ಹಾಫ್ ಮುಗಿತು
.ದಿ ವಿಲನ್ ಮೊದಲಾರ್ಧ ಚೆನ್ನಾಗಿದೆ. ಶಿವಣ್ಣ ಮತ್ತು ಸುದೀಪ್ ಎಂಟ್ರಿ ಸೀನ್ ಇಷ್ಟವಾಗುತ್ತೆ. ಇಂಟರ್ ವಲ್ ಸೂಪರ್ ಆಗಿ ಪ್ರಸೆಂಟ್ ಮಾಡಲಾಗಿದೆ. ಸೆಕೆಂಡ್ ಹಾಫ್ ಗಾಗಿ ನಿರೀಕ್ಷೆ ಹೆಚ್ಚಿದೆ'' ಎಂದು ಸಿನಿಮಾ ನೋಡಿದವರು ಟ್ವೀಟ್ ಮಾಡಿದ್ದಾರೆ.

ದೃಶ್ಯವೈಭವ ಚೆನ್ನಾಗಿದೆ
ಇಂಟರ್ ವಲ್ ಮುಗಿದಿದೆ. ಅದಕ್ಕೂ ಮುಂಚಿನ ದೃಶ್ಯಗಳು ಅದ್ಭುತವೆನಿಸುವಂತಿದೆ. ಸೆಕೆಂಡ್ ಹಾಫ್ ಗೆ ಒಳ್ಳೆಯ ಲೀಡ್ ಸಿಕ್ಕಿದೆ'' ಎಂದು ಟ್ವೀಟ್ ಮಾಡಿದ್ದಾರೆ.

ರಾಮ-ರಾವಣ ಕಾದಾಟಕ್ಕೆ ಸಜ್ಜು
ಸಸ್ಪೆನ್ಸ್, ಟ್ವಿಸ್ಟ್, ಬಿಲ್ಡಪ್ ಮೊದಲಾರ್ಧದಲ್ಲಿ ಎದ್ದು ಕಾಣಿಸಿದೆ. ಈಗ ರಾಮ ಮತ್ತು ರಾವಣನ ಕಾದಾಟಕ್ಕೆ ವೇದಿಕೆ ಸಜ್ಜಾಗಿದೆ'' ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ.

ಸ್ವಲ್ಪ ಎಳಿಯೋತರ ಇದೆ
ಫಸ್ಟ್ ಹಾಫ್ ಸಿನಿಮಾ ಸೂಪರ್ ಆಗಿದೆ. ಆದ್ರೆ, ಸ್ವಲ್ಪ ಎಳಿಯೋತರ ಇದೆ. ಸುದೀಪ್ ರಾಕ್ಸ್. ಶಿವಣ್ಣನ ಆಟ ಈಗ ಶುರು ಅನಿಸುತ್ತೆ. ಇಂಟರ್ ವಲ್ ಅಂತೂ ಅದ್ಭುತ'' ಎಂದು ಅಭಿಯಾನಿ ಟ್ವೀಟ್ ಮಾಡಿದ್ದಾರೆ.


Click it and Unblock the Notifications











