ಗಾಂಧಿನಗರದ 3 ಚಿತ್ರಮಂದಿರ ಸೇರಿದಂತೆ ಸಾವಿರ ಥಿಯೇಟರ್ ಗಳಲ್ಲಿ ವಿಲನ್ ವಿಶ್ವರೂಪ!
ಅದೇನೇ ಹೇಳಿ..ನಿರ್ದೇಶಕ ಪ್ರೇಮ್ ಅವರಿಗೆ ಇರುವ ಈ ಒಂದು ಕಲೆ ಬೇರೆ ಯಾರಿಗೂ ಇಲ್ಲ. ಒಂದು ಸಿನಿಮಾವನ್ನು ಹೇಗೆ ದೊಡ್ಡ ಮಟ್ಟಿಗೆ ಪ್ರಚಾರ ಮಾಡಬೇಕು, ಜನರಿಗೆ ಹೇಗೆ ಚಿತ್ರವನ್ನು ತಲುಪಿಸಬೇಕು, ಬೇರೆ ಭಾಷೆಯ ಚಿತ್ರಗಳಿಗೂ ಮೀರಿಸುವಂತೆ ಹೇಗೆ ಹೈಪ್ ಕ್ರಿಯೇಟ್ ಮಾಡಬೇಕು ಈ ವಿಚಾರಗಳಲ್ಲಿ ಪ್ರೇಮ್ ಎಂದಿಗೂ ಎತ್ತಿದ ಕೈ.
ಎಲ್ಲರಿಗೂ ತಿಳಿದಿರುವ ಹಾಗೆ ಪ್ರೇಮ್ ಈಗ 'ದಿ ವಿಲನ್' ಸಿನಿಮಾದ ಸಾರಥಿ ಆಗಿದ್ದಾರೆ. ಶಿವರಾಜ್ ಕುಮಾರ್ ಹಾಗೂ ಸುದೀಪ್ ರಂತಹ ತೂಕದ ಕಲಾವಿದರ ಜೊತೆಗೆ ಅವರು ಸಿನಿಮಾ ಮಾಡಿದ್ದಾರೆ. ಈ ಸಿನಿಮಾ ಈಗಾಗಲೇ ದೊಡ್ಡ ನಿರೀಕ್ಷೆ ಹುಟ್ಟುಹಾಕಿದೆ. ಎಲ್ಲರೂ ಸಿನಿಮಾ ರಿಲೀಸ್ ಯಾವಾಗ ಎನ್ನುತ್ತಿದ್ದಾರೆ. ಇಂತಹ ಪ್ರಶ್ನೆಗಳಿಗೆ ಈಗ ಉತ್ತರ ಸಿಕ್ಕಿದೆ.
ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳ ಪೈಕಿ ಅಗ್ರ ಸ್ಥಾನದಲ್ಲಿ ಇರುವ 'ದಿ ವಿಲನ್' ಇದೇ ತಿಂಗಳು ಬಿಡುಗಡೆಯಾಗುತ್ತಿದೆ. ಹೌದು, ಚಿತ್ರಮಂದಿರದಲ್ಲಿ ವಿಲನ್ ವಿಶ್ವರೂಪ ದರ್ಶನಕ್ಕೆ ದಿನಗಣನೆ ಶುರುವಾಗಿದೆ. ಮುಂದೆ ಓದಿ..

ಸೆನ್ಸಾರ್ ನಲ್ಲಿ ಗೆದ್ದ ವಿಲನ್
'ದಿ ವಿಲನ್' ಸಿನಿಮಾಗೆ ಎ ಸರ್ಟಿಫಿಕೇಟ್ ಸಿಗಬಹುದು ಎಂಬ ಅನುಮಾನ ಇತ್ತು. ಆದರೆ, ಅಂತು ಚಿತ್ರಕ್ಕೆ ಪ್ರೇಮ್ ಆಸೆಯಂತೆ ಯು ಎ ಪ್ರಮಾಣ ಪತ್ರ ದೊರೆತಿದೆ. ಜೊತೆಗೆ ಚಿತ್ರವನ್ನು ವೀಕ್ಷಿಸಿರುವ ಸೆನ್ಸಾರ್ ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರಂತೆ. ಇದೆಲ್ಲ ನೋಡಿ ಪ್ರೇಮ್ ಮತ್ತಷ್ಟು ಉತ್ಸುಕರಾಗಿದ್ದಾರೆ.

ಸಪ್ಟೆಂಬರ್ 27ಕ್ಕೆ ರಿಲೀಸ್
ಇಷ್ಟ ದಿನ ಕಾಯುತ್ತಿದ್ದ ಶಿವಣ್ಣ ಹಾಗೂ ಸುದೀಪ್ ಅಭಿಮಾನಿಗಳಿಗೆ ಈಗ ಸಿಹಿ ಸುದ್ದಿ ಸಿಕ್ಕಿದೆ. 'ದಿ ವಿಲನ್' ಸಪ್ಟೆಂಬರ್ 27ಕ್ಕೆ ರಿಲೀಸ್ ಆಗಲಿದೆ. ಇನ್ನು ಸದ್ಯದಲ್ಲಿಯೇ ಚಿತ್ರಮಂದಿರಗಳ ವಿವರ ತಿಳಿಯಲಿದೆ. ಆ ದಿನ ಏನೇ ಕೆಲಸ ಇದ್ದರೂ ಚಿತ್ರಮಂದಿರಕ್ಕೆ ಬನ್ನಿ ಎನ್ನುತ್ತಿದ್ದಾರೆ ಪ್ರೇಮ್. ಸೋ, 27ರ ಗುರುವಾರ ಗಾಂಧಿನಗರ ಹೊಸ ದಾಖಲೆಗೆ ಕಾರಣ ಆಗಬಹುದು.

ಗಾಂಧಿನಗರದ 3 ಚಿತ್ರಮಂದಿರ
ಕೆಲವು ಸಿನಿಮಾಗಳಿಗೆ ಒಂದು ಗಾಂಧಿನಗರದ ಒಂದು ಚಿತ್ರಮಂದಿರ ಸಿಗುವುದು ಕಷ್ಟ ಆಗುತ್ತದೆ. ಆದರೆ, ಮೂರು ಮೈನ್ ಥಿಯೇಟರ್ ಗಳಲ್ಲಿ 'ದಿ ವಿಲನ್' ಸಿನಿಮಾ ರಿಲೀಸ್ ಆಗಲಿದೆ. ಸಂತೋಷ್, ಅದರ ಪಕ್ಕದ ನರ್ತಕಿ ಹಾಗೂ ತ್ರಿವೇಣಿ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಇದು ಚಿತ್ರದ ಕ್ರೇಜ್ ಅನ್ನು ಸಾಬೀತು ಮಾಡುತ್ತಿದೆ.

ಸಾವಿರ ಥಿಯೇಟರ್ ನಲ್ಲಿ ರಿಲೀಸ್
ದೇಶ ವಿದೇಶದಲ್ಲಿಯೂ 'ದಿ ವಿಲನ್' ಸಿನಿಮಾ ಬಿಡುಗಡೆ ಆಗಲಿದೆ. ಸಾವಿರ ಥಿಯೇಟರ್ ಗಳಲ್ಲಿ ಚಿತ್ರವನ್ನು ರಿಲೀಸ್ ಮಾಡುವ ಧೈರ್ಯ ಹಾಗೂ ಸಾಹಸಕ್ಕೆ ಶೋ ಮ್ಯಾನ್ ಮುಂದಾಗಿದ್ದಾರೆ. ಈ ರೀತಿ ಬೇರೆ ಭಾಷೆಗಳ ದೊಡ್ಡ ಚಿತ್ರಗಳಿಗೆ 'ದಿ ವಿಲನ್' ಕಡಿಮೆ ಇಲ್ಲ ಎಂದು ತೋರಿಸಿದ್ದಾರೆ.

ಚಿತ್ರಮಂದಿರದಲ್ಲಿ ಶುರುವಾಗಿದೆ ಹಬ್ಬ
ಈಗಾಗಲೇ ಅನೇಕ ಚಿತ್ರಮಂದಿರಗಳಲ್ಲಿ 'ದಿ ವಿಲನ್' ಪೋಸ್ಟರ್ ಗಳು ರಾರಾಜಿಸುತ್ತಿವೆ. ಮಾಗಡಿ ರಸ್ತೆಯ ಜಿಟಿ ಮಾಲ್ ಮುಂದೆ ಅಭಿಮಾನಿಗಳು ಸಂಭ್ರಮಾಚರಣೆ ಶುರು ಮಾಡಿಕೊಂಡಿದ್ದಾರೆ. ನಿಜಕ್ಕೂ ಸಿನಿಮಾ ರಿಲೀಸ್ ದಿನ ಶಿವಣ್ಣ ಹಾಗೂ ಸುದೀಪ್ ಇಬ್ಬರು ಅಭಿಮಾನಿಗಳಿಗೆ ಹಬ್ಬದ ದಿನವಾಗಲಿದೆ.


Click it and Unblock the Notifications











