ಸಂತೋಷ್ ಚಿತ್ರಮಂದಿರದಿಂದ 'ವಿಲನ್'ಗೆ ಗೇಟ್ ಪಾಸ್, ಕಾರಣವೇನು.?
Recommended Video

ಪ್ರೇಮ್ ನಿರ್ದೇಶನದಲ್ಲಿ ಮೂಡಿಬರ್ತಿರುವ 'ದಿ ವಿಲನ್' ಸಿನಿಮಾ ಅಕ್ಟೋಬರ್ 18 ರಂದು ಬಿಡುಗಡೆಯಾಗುತ್ತಿದೆ. ಇಂದಿನಿಂದ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಆರಂಭವಾಗುತ್ತಿದೆ. ಕನ್ನಡ, ತೆಲುಗು ಮತ್ತು ತಮಿಳು ಚಿತ್ರ ಸೇರಿದಂತೆ ದೇಶದಲ್ಲಿ 1000 ಚಿತ್ರಮಂದಿರಗಳಲ್ಲಿ ವಿಲನ್ ಅಬ್ಬರಿಸಲಿದೆ ಎಂದು ಹೇಳಲಾಗಿದೆ.
ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರೇಮ್ ಸಿನಿಮಾ ತೆರೆಕಾಣಲಿದೆ. ವಿಶೇಷ ಅಂದ್ರೆ, ಮೆಜೆಸ್ಟಿಕ್ ನ ಗಾಂಧಿನಗರದಲ್ಲಿ ಮೂರು ಥಿಯೇಟರ್ ನಲ್ಲಿ ವಿಲನ್ ಬಿಡುಗಡೆಯಾಗುತ್ತೆ ಎನ್ನಲಾಗಿತ್ತು. ಗಾಂಧಿನಗರದ ಪ್ರಮುಖ ಚಿತ್ರಮಂದಿರ ಸಂತೋಷ್, ನರ್ತಕಿ, ಸ್ವಪ್ನ ಥಿಯೇಟರ್ ನಲ್ಲಿ ವಿಲನ್ ರಿಲೀಸ್ ಆಗುತ್ತೆ ಎನ್ನಲಾಗಿತ್ತು.
ಆದ್ರೀಗ, ಸಂತೋಷ್ ಚಿತ್ರಮಂದಿರದಿಂದ ವಿಲನ್ ಗೆ ಕೋಕ್ ಸಿಕ್ಕಿದೆ. ಸಂತೋಷ್ ಸ್ಕ್ರೀನ್ ನಲ್ಲಿ ಪ್ರೇಮ್ ಸಿನಿಮಾ ಪ್ರದರ್ಶನವಾಗ್ತಿಲ್ಲ. ಇಷ್ಟು ದಿನ ಮುಖ್ಯ ಚಿತ್ರಮಂದಿರದಲ್ಲಿ ಬರುತ್ತೆ ಎನ್ನುತ್ತಿದ್ದವರಿಗೆ ಈಗ ಶಾಕ್ ನೀಡಿದೆ ಚಿತ್ರತಂಡ. ಮುಂದೆ ಓದಿ.....

'ನರ್ತಕಿ'ಯ ಮೇನ್ ಥಿಯೇಟರ್
ಸುದೀಪ್ ಮತ್ತು ಶಿವಣ್ಣ ಅಭಿನಯದ 'ದಿ ವಿಲನ್' ಚಿತ್ರಕ್ಕೆ ಕನಿಷ್ಠ ಅಂದ್ರೂ ಮೆಜೆಸ್ಟಿಕ್ ನಲ್ಲಿ ಮೂರ್ನಾಲ್ಕು ಚಿತ್ರಮಂದಿರ ಬೇಕು ಎಂಬ ಮಾತಿತ್ತು. ಅದರಂತೆ ಸಂತೋಷ್, ನರ್ತಕಿ, ಸ್ವಪ್ನ ಚಿತ್ರಗಳು ವಿಲನ್ ಸ್ವಾಗತಕ್ಕೆ ಸಜ್ಜಾಗಿತ್ತು. ಆದ್ರೀಗ ಅಂತಿಮ ಕ್ಷಣದಲ್ಲಿ ಸಂತೋಷ್ ಕೈತಪ್ಪಿ ಹೋಗಿದೆ. ಅಲ್ಲಿಗೆ ವಿಲನ್ ಗೆ 'ನರ್ತಕಿ' ಮಾತ್ರ ಉಳಿದುಕೊಂಡಿದೆ.

ರಾಗಿಣಿ ಪಾಲಾಯ್ತು ಸಂತೋಷ್
ಆರಂಭದಲ್ಲಿ ಸಂತೋಷ್ ಚಿತ್ರಮಂದಿರ 'ವಿಲನ್' ಸಿನಿಮಾಗೆ ಅಂತಾನೇ ಫಿಕ್ಸ್ ಆಗಿತ್ತು. ಪ್ರೇಮ್ ಕೂಡ ಜಾಹೀರಾತುಗಳಲ್ಲಿ ಸಂತೋಷ್ ಚಿತ್ರಮಂದಿರವನ್ನ ಮೇನ್ ಥಿಯೇಟರ್ ಎಂದು ಬಿಂಬಿಸಿದ್ದರು. ಆದ್ರೀಗ, ರಾಗಿಣಿ ಅಭಿನಯದ 'ದಿ ಟೆರರಿಸ್ಟ್' ಚಿತ್ರವೂ ಅದೇ ದಿನ ಬರ್ತಿರುವ ಕಾರಣ, ಸಂತೋಷ್ ಚಿತ್ರಮಂದಿರ ರಾಗಿಣಿ ಸಿನಿಮಾವನ್ನ ಬಿಡುಗಡೆ ಮಾಡುತ್ತಿದೆ.

ಸ್ವಪ್ನ ಇನ್ನು ಡೌಟ್.?
ಗಾಂಧಿನಗರದಲ್ಲಿ ಸಂತೋಷ್, ನರ್ತಕಿ ಮತ್ತು ಸ್ವಪ್ನ ಚಿತ್ರಮಂದಿರಗಳು ಒಂದೇ ಆವರಣದಲ್ಲಿದೆ. ಸುದೀಪ್ ಮತ್ತು ಶಿವಣ್ಣ ಸಿನಿಮಾಗೆ ಒಳ್ಳೆ ಜಾಗ ಇದು ಎನ್ನಲಾಗಿತ್ತು. ಈಗ ಸಂತೋಷ್ ದೂರವಾಗಿದೆ. ಇನ್ನು ಸ್ವಪ್ನ ಚಿತ್ರಮಂದಿರದ ಬಗ್ಗೆ ಇನ್ನು ಖಚಿತವಾದ ಮಾಹಿತಿ ಇಲ್ಲ. ಸದ್ಯ, ಪ್ರೇಮ್ ಪ್ರಕಟಿಸಿರುವ ಥಿಯೇಟರ್ ಲಿಸ್ಟ್ ನಲ್ಲಿ ಸ್ವಪ್ನ ಹೆಸರಿಲ್ಲ. ಹೀಗಾಗಿ, ಸ್ವಪ್ನನೂ ಇದೆಯಾ ಅಥವಾ ಇಲ್ಲವಾ ಎಂಬ ಅನುಮಾನ ಕಾಡುತ್ತಿದೆ.

ಬೇರೆ ಥಿಯೇಟರ್ ಇದೆಯಾ.?
ಸಾಮಾನ್ಯವಾಗಿ ಒಬ್ಬ ಸ್ಟಾರ್ ನಟನ ಸಿನಿಮಾ ರಿಲೀಸ್ ಆದ್ರೆನೇ ಮೊದಲ ದಿನ ಟಿಕೆಟ್ ಸಿಗಲ್ಲ. ಇನ್ನು ಇಬ್ಬರು ಸ್ಟಾರ್ ನಟರು ಅಭಿನಯಿಸಿರುವ ದೊಡ್ಡ ಸಿನಿಮಾ. ಹಾಗಾಗಿ, ಮೇನ್ ಥಿಯೇಟರ್ ನಲ್ಲಿ ನೋಡ್ಬೇಕು ಎಂಬ ಆಸೆ ಅಭಿಮಾನಿಗಳಲ್ಲಿರುತ್ತೆ. ಸದ್ಯಕ್ಕೆ ನರ್ತಕಿ ಫಿಕ್ಸ್ ಆಗಿದೆ. ಇದರ ಜೊತೆ ಬೇರೆ ಯಾವುದಾದರೂ ಚಿತ್ರಮಂದಿರ ಸಿಗುತ್ತಾ ಕಾದುನೋಡಬೇಕಿದೆ.


Click it and Unblock the Notifications











