'ದಿ ವಿಲನ್' ಸಿನಿಮಾದ ಬಿಡುಗಡೆ ಸುದ್ದಿ ಬಂದೇ ಬಿಟ್ಟಿತು!

By Naveen

'ದಿ ವಿಲನ್' ಕನ್ನಡದ ದೊಡ್ಡ ಬಜೆಟ್ ಸಿನಿಮಾಗಳಲ್ಲಿ ಒಂದು. ಈ ಸಿನಿಮಾ ಬಗ್ಗೆ ಕನ್ನಡ ಸಿನಿಮಾ ಅಭಿಮಾನಿಗಳು ದೊಡ್ಡ ನಿರೀಕ್ಷೆ ಇಟ್ಟು ಕಾಯುತ್ತಿದ್ದಾರೆ. ಸಿನಿಮಾ ಯಾವಾಗ ರಿಲೀಸ್ ಎಂದು ಕೇಳುತ್ತಿದ್ದವರಿಗೆ ನಿರ್ದೇಶಕ ಪ್ರೇಮ್ ಈಗ ಒಂದು ಸುದ್ದಿ ಕೊಟ್ಟಿದ್ದಾರೆ.

'ದಿ ವಿಲನ್' ಸಿನಿಮಾ ಚಿತ್ರೀಕರಣ ಈಗ ಕೊನೆಯ ಹಂತದಲ್ಲಿ ನಡೆಯುತ್ತಿದೆ. ಜನವರಿಯ ಅಂತ್ಯಕ್ಕೆ ಸಿನಿಮಾದ ಶೂಟಿಂಗ್ ಮುಗಿಯಲಿದ್ದು, ಏಪ್ರಿಲ್ ವೇಳೆ ಸಿನಿಮಾವನ್ನು ತೆರೆಗೆ ಬರುವ ತಯಾರಿ ನಡೆಯುತ್ತಿದೆಯಂತೆ. ಏಪ್ರಿಲ್ ನಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ಇದ್ದರೆ, ಅದು ಮುಗಿದ ಮೇಲೆ ಚಿತ್ರ ಬಿಡುಗಡೆ ಮಾಡುವ ಪ್ಲಾನ್ ಪ್ರೇಮ್ ಮಾಡಿದ್ದಾರಂತೆ. ಇನ್ನು ಇತ್ತೀಚಿಗಷ್ಟೆ ಹಾಡಿನ ಚಿತ್ರೀಕರಣ ಮೈಸೂರಿನಲ್ಲಿ ನಡೆದಿದ್ದು, ಇದರಲ್ಲಿ ನಟ ಸುದೀಪ್ ಮತ್ತು ನಟಿ ಆಮಿ ಜಾಕ್ಸನ್ ಭಾಗಿಯಾಗಿದ್ದರು.

The Villain movie will release in April 2018

ಅಂದಹಾಗೆ, 'ದಿ ವಿಲನ್' ಶಿವರಾಜ್ ಕುಮಾರ್ ಮತ್ತು ಸುದೀಪ್ ಕಾಂಬಿನೇಶನ್ ನಲ್ಲಿ ಬರುತ್ತಿರುವ ಮೊದಲ ಸಿನಿಮಾವಾಗಿದೆ. ಬಾಲಿವುಡ್ ನಟಿ ಆಮಿ ಜಾಕ್ಸನ್, ನಟ ಮಿಥುನ್ ಚಕ್ರವರ್ತಿ, ಶ್ರೀ ಕಾಂತ್ ಚಿತ್ರದಲ್ಲಿ ನಟಿಸಿದ್ದಾರೆ. ಅರ್ಜುನ್ ಜನ್ಯ 'ದಿ ವಿಲನ್'ಗೆ ಸಂಗೀತ ನೀಡಿದ್ದು, ಸದ್ಯದಲ್ಲಿಯೇ ಚಿತ್ರದ ಟೀಸರ್ ಹೊರಬರಲಿದೆ.

More from Filmibeat

English summary
Actor Sudeep and Shivarajkumar starrer Kannada Movie 'The Villain' will release in April 2018. The movie is directed by Prem.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X