'ದಿ ವಿಲನ್' ಟೀಸರ್ ಬರೋ ಮೊದಲೇ ಪ್ರೇಮ್ ಕೊಟ್ಟ ಗುಡ್ ನ್ಯೂಸ್

By Naveen

'ದಿ ವಿಲನ್' ಸಿನಿಮಾದ ಟೀಸರ್ ಯಾವಗ ಬರುತ್ತದೆ ಎಂದ ಶಿವರಾಜ್ ಕುಮಾರ್ ಮತ್ತು ಸುದೀಪ್ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಟೀಸರ್ ಬರುವುದಕ್ಕೆ ಮೊದಲೇ ನಿರ್ದೇಶಕ ಪ್ರೇಮ್ ಒಂದು ಸಿಹಿ ಸುದ್ದಿ ನೀಡಿದ್ದಾರೆ. ಅಂದಹಾಗೆ, 'ದಿ ವಿಲನ್' ಸಿನಿಮಾ ಬಿಡುಗಡೆಯ ದಿನಾಂಕ ಇದೀಗ ನಿಗದಿ ಆಗಿದೆ.

ಆಗಸ್ಟ್ ತಿಂಗಳಿನಲ್ಲಿ ಅಂದರೆ ಈ ವರ ಮಹಾಲಕ್ಷ್ಮಿ ಹಬ್ಬದ ವಿಶೇಷವಾಗಿ 'ದಿ ವಿಲನ್' ಸಿನಿಮಾ ತೆರೆಗೆ ಬರಲಿದೆ. ಸದ್ಯ ಸಿನಿಮಾದ ಡಬ್ಬಿಂಗ್ ಕೆಲಸಗಳು ನಡೆಯುತ್ತಿದೆ. ಸುದೀಪ್ ಈಗ ತಮ್ಮ ದೃಶ್ಯಗಳಿಗೆ ಡಬ್ ಮಾಡುತ್ತಿದ್ದಾರೆ. ಇದರ ನಂತರ ಸುದೀಪ್ ಅವರ ಒಂದು ಹಾಡಿನ ಚಿತ್ರೀಕರಣ ಮತ್ತು ಶಿವಣ್ಣನ ಒಂದು ಹಾಡಿನ ಶೂಟಿಂಗ್ ಬಾಕಿ ಇದೆ. ಈ ಎರಡು ಹಾಡುಗಳ ಚಿತ್ರೀಕರಣದ ನಂತರ ಎರಡು ಟೀಸರ್ ಅನ್ನು ಪ್ರೇಮ್ ಬಿಡುಗಡೆ ಮಾಡಲಿದ್ದಾರೆ.

ಸದ್ಯ ಐ ಪಿ ಎಲ್ ಪಂದ್ಯಗಳು ಮತ್ತು ಚುನಾವಣೆ ಇರುವ ಕಾರಣ ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಒಂದು ಕಡೆ 'ದಿ ವಿಲನ್' ಸಿನಿಮಾದ ಕೆಲಸಗಳು ಬಾಕಿ ಇದ್ದರೆ, ಇನ್ನೊಂದು ಕಡೆ ಚುನಾವಣೆ ಹಾಗೂ ಐ ಪಿ ಎಲ್ ನಂತರ ಚಿತ್ರ ಬರುವುದು ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆ ಪೆಟ್ಟು ಬೀಳುವುದಿಲ್ಲ.

The Villain movie will release in August 2018

ಉಳಿದಂತೆ, 'ದಿ ವಿಲನ್' ಸಿನಿಮಾದ ಮೇಲೆ ದೊಡ್ಡ ನಿರೀಕ್ಷೆ ಇದೆ. ಆಮಿ ಜಾಕ್ಸನ್ ಈ ಚಿತ್ರದ ಮೂಲಕ ಕನ್ನಡಕ್ಕೆ ಬಂದಿದ್ದಾರೆ. ಸಿ ಆರ್ ಮನೋಹರ್ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ಅರ್ಜುನ್ ಜನ್ಯ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

More from Filmibeat

English summary
Actor Sudeep and Shivarajkumar starrer Kannada Movie 'The Villain' will release in August 2018. The movie is directed by Prem.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X