'ದಿ ವಿಲನ್' ಚಿತ್ರದ ಲೇಟೆಸ್ಟ್ ಅಪ್ಡೇಟ್ ನೀಡಿದ ಪ್ರೇಮ್
Recommended Video

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಒಟ್ಟಿಗೆ ಅಭಿನಯದ 'ದಿ ವಿಲನ್' ಸಿನಿಮಾದ ಟೀಸರ್ ಬಂತು, ಹಾಡುಗಳು ಕೂಡ ರಿಲೀಸ್ ಆಯ್ತು. ಸಿನಿಮಾ ಯಾವಾಗ ಬಿಡುಗಡೆ ಎನ್ನುವುದು ಅಭಿಮಾನಿಗಳ ದೊಡ್ಡ ಪ್ರಶ್ನೆ.?
ಈ ಮೊದಲು ನಿರ್ಧರಿಸಿದ್ದಂತೆ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಸಿನಿಮಾ ರಿಲೀಸ್ ಮಾಡಬೇಕು ಎಂಬ ಯೋಚನೆ ಇತ್ತು. ಆದ್ರೆ, ಪೋಸ್ಟ್ ಪ್ರೊಡಕ್ಷನ್ ಕೆಲಸ, ಸೆನ್ಸಾರ್, ಆಡಿಯೋ ಬಿಡುಗಡೆ ಹೀಗೆ ಮತ್ತಷ್ಟು ಕೆಲಸ ಬಾಕಿಯಿದ್ದ ಕಾರಣ ಅಗಿರಲಿಲ್ಲ.
ಈಗ, ಗೌರಿ ಗಣೇಶ ಹಬ್ಬದ ಪ್ರಯುಕ್ತ 'ದಿ ವಿಲನ್' ಸಿನಿಮಾ ಥಿಯೇಟರ್ ಗೆ ಬರಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಆದ್ರೆ, ಚಿತ್ರದ ಸೆನ್ಸಾರ್ ಇನ್ನು ಆಗಿಲ್ಲ. ಒಮ್ಮೆ ಸೆನ್ಸಾರ್ ಆದ್ರೆ, ಅಂದುಕೊಂಡ ದಿನಕ್ಕೆ ಬಿಡುಗಡೆ ಮಾಡಬಹುದು.

ಈ ಮಧ್ಯೆ 'ದಿ ವಿಲನ್' ಸಿನಿಮಾ ಸೆನ್ಸಾರ್ ಮುಗಿಸಿದೆ, ಚಿತ್ರಕ್ಕೆ ಎ ಸರ್ಟಿಫಿಕೇಟ್ ಸಿಕ್ಕಿದೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗಿದ್ವು. ಆದ್ರೆ, 'ದಿ ವಿಲನ್' ಸಿನಿಮಾ ಈಗ ಸೆನ್ಸಾರ್ ಗೆ ಹೋಗುತ್ತಿದೆ ಸ್ವತಃ ನಿರ್ದೇಶಕ ಪ್ರೇಮ್ ಅವರು ಟ್ವಿಟ್ಟರ್ ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಇನ್ನುಳಿದಂತೆ ಇನ್ನುಳಿದಂತೆ ನಿರ್ದೇಶಕ ಪ್ರೇಮ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಸಿ.ಆರ್ ಮನೋಹರ್ ನಿರ್ಮಾಣ ಮಾಡಿದ್ದಾರೆ. ಸುದೀಪ್, ಶಿವಣ್ಣ, ಆಮಿ ಜಾಕ್ಸನ್ ಜೊತೆಯಲ್ಲಿ ಮಿಥುನ್ ಚಕ್ರವರ್ತಿ, ಶ್ರೀಕಾಂತ್ ಸೇರಿದಂತೆ ಹಲವರು ಅಭಿನಯಿಸುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ಒದಗಿಸಿದ್ದಾರೆ.


Click it and Unblock the Notifications











