»   » 'ದಿ ವಿಲನ್' ಹೊಸ ಪೋಸ್ಟರ್ ವಿರುದ್ಧ ಹೀಗೊಂದು ಗಂಭೀರ ಆರೋಪ?

'ದಿ ವಿಲನ್' ಹೊಸ ಪೋಸ್ಟರ್ ವಿರುದ್ಧ ಹೀಗೊಂದು ಗಂಭೀರ ಆರೋಪ?

Posted By:
Subscribe to Filmibeat Kannada

ಕಿಚ್ಚ ಸುದೀಪ್ ಹುಟ್ಟುಹಬ್ಬದ ವಿಶೇಷವಾಗಿ 'ದಿ ವಿಲನ್' ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಈ ಪೋಸ್ಟರ್ ನೋಡಿ ಕನ್ನಡ ಚಿತ್ರಪ್ರೇಮಿಗಳು ನಿರೀಕ್ಷೆ ಡಬಲ್ ಆಗಿರುವುದಂತೂ ಸುಳ್ಳಾಲ್ಲ.

ಹೀಗೆ, 'ದಿ ವಿಲನ್' ಪೋಸ್ಟರ್ ನೋಡಿ ಅಭಿಮಾನಿಗಳು ಎಲ್ಲ ಶಬ್ಬಾಶ್ ಎನ್ನುತ್ತಿರುವಾಗಲೇ ಹೊಸ ಪೋಸ್ಟರ್ ವಿರುದ್ಧ ಒಂದು ಟೀಕೆ ಕೂಡ ಕೇಳಿ ಬಂದಿದೆ. ಹೌದು, 'ದಿ ವಿಲನ್' ಚಿತ್ರದ ಹೊಸ ಪೋಸ್ಟರ್ ಬೇರೆ ಚಿತ್ರದಿಂದ ಕಾಪಿ ಮಾಡಿದ್ದಾರೆ ಎನ್ನಲಾಗುತ್ತಿದೆ.

ದಿ ವಿಲನ್ ಚಿತ್ರದ ಪೋಸ್ಟರ್ ಮತ್ತು ಕಾಪಿ ಮಾಡಲಾಗಿದೆ ಎನ್ನಲಾಗುತ್ತಿರುವ ಚಿತ್ರದ ಪೋಸ್ಟರ್ ಹೋಲಿಕೆಯಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹಾಗಿದ್ರೆ, ಅದು ಯಾವ ಚಿತ್ರದ್ದು ಎಂದು ಮುಂದೆ ಓದಿ......

'ದಿ ವಿಲನ್' ಪೋಸ್ಟರ್ ಬಗ್ಗೆ ಚರ್ಚೆ

ದಿ ವಿಲನ್ ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿದ್ದು, ಈ ಪೋಸ್ಟರ್ ಬಗ್ಗೆ ಪರ ವಿರೋಧಗಳು ವ್ಯಕ್ತವಾಗುತ್ತಿವೆ. ಅಭಿಮಾನಿಗಳೆಲ್ಲ ಈ ಪೋಸ್ಟರ್ ಚಿಂದಿ ಎನ್ನುತ್ತಿದ್ದರೇ, ಮತ್ತೆ ಕೆಲವರು ಇದು ಕಾಪಿ ಮಾಡಿರುವ ಪೋಸ್ಟರ್ ಎನ್ನುತ್ತಿದ್ದಾರೆ.

ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ರಿಲೀಸ್ ಆದ 'ದಿ ವಿಲನ್' ಮೋಷನ್ ಪೋಸ್ಟರ್ ನೋಡಿ!

ಯಾವ ಚಿತ್ರದ ಪೋಸ್ಟರ್ ಕಾಪಿ ಇದು?

ವಿಲನ್ ಪೋಸ್ಟರ್ ಕಾಪಿ ಮಾಡಿದ್ದಾರೆ ಎನ್ನಲಾಗುತ್ತಿರುವ ಚಿತ್ರದ ಹೆಸರು 'ಫೇಸ್ ಆಫ್'. 1997ರಲ್ಲಿ ಬಿಡುಗಡೆಯಾಗಿರುವ ಸೈನ್ಸ್ ಫಿಕ್ಷನ್ ಸಿನಿಮಾ. ಜಾನ್ ವೋ ನಿರ್ದೇಶನದ ಚಿತ್ರ. ಜಾನ್ ಟ್ರಾವಲ್ಟಾ, ನಿಕೋಲಸ್ ಕೇಜ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

'ಫೇಸ್ ಬುಕ್ ಲೈವ್'ನಲ್ಲಿ ವಿಲನ್ ಬಗ್ಗೆ ಎಕ್ಸ್ ಕ್ಲೂಸಿವ್ ವಿಷ್ಯ ಕೊಟ್ಟ ಸುದೀಪ್

ಇವೆರಡು ಪೋಸ್ಟರ್ ಗಳಿಗೆ ಹೋಲಿಕೆ ಇದೆ

ಸುದೀಪ್ ಮತ್ತು ಶಿವಣ್ಣ ಅವರ ಮುಖ ಮತ್ತು ಅದಕ್ಕೊಂದು ಮುಖವಾಡದಂತಿರುವ ದಿ ವಿಲನ್ ಪೋಸ್ಟರ್ ಗೆ, ಹೋಲುವಂತಹ ಪೋಸ್ಟರ್ ಈ 'ಫೇಸ್ ಆಫ್' ಚಿತ್ರ ಹೊಂದಿದೆ.

ಇದು ಕಾಕತಾಳಿಯೋ ಅಥವಾ ನಿಜನಾ?

ಪ್ರೇಮ್ ನಿರ್ದೇಶನದ 'ದಿ ವಿಲನ್' ಚಿತ್ರದ ಪೋಸ್ಟರ್ ನಂತೆ ಹಾಲಿವುಡ್ ಚಿತ್ರದಲ್ಲಿ ಮೊದಲೇ ಡಿಸೈನ್ ಆಗಿರಬಹುದು. ಇದೊಂದು ರೀತಿಯ ಕಾಕತಾಳಿಯೋ ಇರಬಹುದು. ಅದೇನೆ ಇರಲಿ, 'ವಿಲನ್' ಚಿತ್ರದ ಮೋಷನ್ ಪೋಸ್ಟರ್ ಸ್ಯಾಂಡಲ್ ವುಡ್ ನಲ್ಲಿ ಮಾತ್ರ ಘರ್ಜಿಸುತ್ತಿದೆ.

'ಫೇಸ್ ಆಫ್' ಚಿತ್ರಕ್ಕು, 'ವಿಲನ್'ಗೂ ಲಿಂಕ್ ಇದ್ಯಾ?

ಚಿತ್ರದ ಟೈಟಲ್ ಹೇಳುವಾಗೆ ಇದೊಂದು ಸೈನ್ಸ್ ಫಿಕ್ಷನ್ ಸಿನಿಮಾ. ಪ್ರತಿಯೊಬ್ಬ ಮನುಷ್ಯನೊಳೆಗೆ ಇನ್ನೊಂದು ವ್ಯಕ್ತಿತ್ವ ಇರುತ್ತೆ ಎಂಬುದರ ಕಥಾಹಂದರ ಹೊಂದಿದೆ. ಸದ್ಯ, ಪ್ರೇಮ್ ನಿರ್ದೇಶನದ ಚಿತ್ರದಲ್ಲೂ ''ರಾಮನಲ್ಲೊಬ್ಬ ರಾವಣ, ಮತ್ತು ರಾವಣನಲ್ಲೊಬ್ಬ ರಾಮ'' ಎನ್ನುವ ಪರಿಕಲ್ಪನೆ ಎಲ್ಲೋ ಒಂದು ಕಡೆ ಈ ಚಿತ್ರಕ್ಕೆ ಸಾಮ್ಯತೆ ಇರಬಹುದು ಎಂಬ ಅನುಮಾನ ಕಾಡುತ್ತಿದೆ.

English summary
Prem Directorial 'The Villain' new poster is suspiciously similar to the poster of Hollywood movie 'Face off'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada