'ದಿ ವಿಲನ್' ಬಿಡುಗಡೆ: ನರ್ತಕಿ ಚಿತ್ರಮಂದಿರದಲ್ಲಿ ನಿರ್ದೇಶಕ ಪ್ರೇಮ್ ಆಕ್ರೋಶ
Recommended Video

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅಭಿನಯದ 'ದಿ ವಿಲನ್' ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಕರ್ನಾಟಕದ ವಿವಿಧ ಭಾಗಗಳಲ್ಲಿ ನಿನ್ನೆ ಮಧ್ಯರಾತ್ರಿಯಿಂದಲೇ 'ದಿ ವಿಲನ್' ಪ್ರದರ್ಶನ ಆರಂಭಗೊಂಡಿದೆ.
ಎಲ್ಲೆಡೆ 'ದಿ ವಿಲನ್' ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಹೀಗಿರುವಾಗಲೇ, ನಿರ್ದೇಶಕ ಪ್ರೇಮ್ ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ಇಂದು ಬೆಳಗ್ಗೆ 6 ಗಂಟೆಗೆ ಮೊದಲ ಶೋ ಆರಂಭ ಆಯ್ತು.
ಆರಂಭದಿಂದಲೇ ಥಿಯೇಟರ್ ನಲ್ಲಿ ಸೌಂಡ್ ಸಮಸ್ಯೆ ಎದುರಾಯಿತು. ಇದರಿಂದ ಅಭಿಮಾನಿಗಳು ನಿರಾಸೆಗೊಂಡರು. ಚಿತ್ರಮಂದಿರ ವ್ಯವಸ್ಥಾಪಕರು ಹಾಗೂ ಮಾಲೀಕರ ವಿರುದ್ಧ ನಿರ್ದೇಶಕ ಪ್ರೇಮ್ ಕೋಪಗೊಂಡರು. ಸೌಂಡ್ ಸಮಸ್ಯೆ ಇದ್ದರೂ, ಚಿತ್ರಮಂದಿರದ ಸೌಂಡ್ ಎಂಜಿನಿಯರ್ ಪತ್ತೆ ಆಗಲಿಲ್ಲ. ಹೀಗಾಗಿ ಪ್ರೇಮ್ ಸಿಡಿಮಿಡಿಗೊಂಡರು.

''ಪ್ರಪಂಚದ ದೊಡ್ಡ ಎಂಜಿನಿಯರ್ ಗಳು ಚಿತ್ರಕ್ಕೆ ಸೌಂಡ್ ಮಿಕ್ಸ್ ಮಾಡಿದ್ದಾರೆ. ಸಿನಿಮಾದಲ್ಲಿ ಥ್ರಿಲ್ಲೇ ಸೌಂಡ್. ಇವರೆಲ್ಲ ಥಿಯೇಟರ್ ನ ಏನು ಮೇನ್ಟೇನ್ ಮಾಡ್ತಾರೆ ಅನ್ನೋದೇ ಗೊತ್ತಾಗಲ್ಲ. ಸೌಂಡ್ ಸಮಸ್ಯೆ ಎದುರಾದಾಗಲೇ ಚಿತ್ರ ನಿಲ್ಲಿಸೋಣ ಎಂದುಕೊಂಡೆ. ಆದ್ರೆ, ಅಭಿಮಾನಿಗಳು ನಿರಾಸೆ ಆಗ್ತಾರೆ ಅಂತ ಸುಮ್ಮನಿದ್ದೀನಿ'' ಎಂದು ಮಾಧ್ಯಮಗಳ ಮುಂದೆ ಪ್ರೇಮ್ ಆಕ್ರೋಶ ವ್ಯಕ್ತಪಡಿಸಿದರು.


Click it and Unblock the Notifications











