ಗಾಂಧಿನಗರದ ಮೂರು ಮುಖ್ಯ ಚಿತ್ರಮಂದಿರಗಳಲ್ಲಿ 'ದಿ ವಿಲನ್'

Recommended Video

TheVillain : ಮೂರು ಮುಖ್ಯ ಥಿಯೇಟರ್‌ಗಳಲ್ಲಿ ದಿ ವಿಲನ್..! | FIlmibeat Kannada

ನಿರ್ದೇಶಕ ಪ್ರೇಮ್ ನಿರ್ದೇಶನದ 'ದಿ ವಿಲನ್' ಸಿನಿಮಾ ಕನ್ನಡ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ತೆರೆಕಾಣುತ್ತಿದೆ. ದೇಶ ಹಾಗೂ ವಿದೇಶದಲ್ಲಿ ಅಕ್ಟೋಬರ್ 18 ರಂದು ಏಕಕಾಲದಲ್ಲಿ ಬಿಡುಗಡೆ ಮಾಡುವ ತಯಾರಿಯಲ್ಲಿದೆ.

ಇದೀಗ ಬಂದ ಸುದ್ದಿ ಏನಪ್ಪಾ ಅಂದರೆ 'ದಿ ವಿಲನ್' ಮೊಟ್ಟ ಮೊದಲ ಬಾರಿಗೆ ಒಂದೇ ಅಂಗಳದಲ್ಲಿ ಇರುವ ಸಂತೋಷ್, ನರ್ತಕಿ ಹಾಗೂ ಸ್ವಪ್ನ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಜೊತೆ ಸುಮಾರು 1000 ಥಿಯೇಟರ್ ನಲ್ಲಿ ವಿಲನ್ ಅಬ್ಬರಿಸಲು ಸಿದ್ಧವಾಗ್ತಿದೆ.

ಅಕ್ಟೋಬರ್ ಮೊದಲ ವಾರದಿಂದಲೇ ಈ ಚಿತ್ರಕ್ಕೆ ಅಡ್ವಾನ್ಸ್ ಬುಕಿಂಗ್ ಆರಂಭವಾಗುತ್ತಿದೆ. ಅರ್ಜುನ್ ಜನ್ಯ ರಾಗ ಸಂಯೋಜನೆಯ 'ದಿ ವಿಲನ್' ಚಿತ್ರದ ಆರು ಹಾಡುಗಳನ್ನು ರಚನೆ ಮಾಡಿರುವವರು ಚಿತ್ರದ ನಿರ್ದೇಶಕ ಪ್ರೇಮ್. ತಾನ್ವಿ ಹಾಗೂ ಶಾನ್ವಿ ನಿರ್ಮಾಣ ಸಂಸ್ಥೆಯಲ್ಲಿ ಡಾ ಸಿ ಆರ್ ಮನೋಹರ್ ನಿರ್ಮಾಣ ಮಾಡಿದ್ದಾರೆ.

The Villain releasing three theaters in kg road

ಸುದೀಪ್ ಮತ್ತು ಶಿವರಾಜ್ ಕುಮಾರ್ ಇದೇ ಮೊದಲ ಬಾರಿಗೆ ಒಟ್ಟಿಗೆ ಅಭಿನಯಿಸಿದ್ದು, ಬ್ರಿಟಿಷ್ ಹುಡುಗಿ ಎಮಿ ಜಾಕ್ಸನ್ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನುಳಿದಂತೆ ಮಿಥುನ್ ಚಕ್ರವರ್ತಿ, ಮುಕುಲ್ ದೇವ್, ಶ್ರೀಕಾಂತ್, ಶರಣ್ಯ, ಶರತ್ ಲೋಹಿತಾಶ್ವ ಹಾಗೂ ಇತರರು ಅಭಿನಯಿಸಿರುವ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಇಂದ ಯು/ಎ ಅರ್ಹತಾ ಪತ್ರ ಸಿಕ್ಕಿದೆ.

More from Filmibeat

English summary
Actor Shiva rajkumar and Sudeep starrer Kannada Movie 'The Villain' releasing three theaters in kg road. the movie will be releasing on september 27th 2018.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X