'ದಿ ವಿಲನ್' ಚಿತ್ರೀಕರಣಕ್ಕಾಗಿ ಲಂಡನ್ ಗೆ ಹಾರಲಿದೆ ಪ್ರೇಮ್ ಅಂಡ್ ಟೀಂ.!
'ಜೋಗಿ' ಪ್ರೇಮ್ ನಿರ್ದೇಶನದ 'ದಿ ವಿಲನ್' ಸಿನಿಮಾದ ಶೂಟಿಂಗ್ ಈಗಾಗಲೇ ಶುರುವಾಗಿದೆ. ಬೆಂಗಳೂರು, ಶಿವಮೊಗ್ಗ ಸೇರಿದಂತೆ ಕೆಲವು ಕಡೆ ಈಗಾಗಲೇ ಸಿನಿಮಾದ ಚಿತ್ರೀಕರಣ ನಡೆದಿದೆ. ಮುಂದೆ 'ದಿ ವಿಲನ್' ಚಿತ್ರದ ಉಳಿದ ಭಾಗದ ಚಿತ್ರೀಕರಣ ಲಂಡನ್ ನಲ್ಲಿ ನಡೆಯಲಿದೆ.
ಲಂಡನ್ ನಲ್ಲಿ ಸಿನಿಮಾದ ಕೆಲ ಮುಖ್ಯ ಭಾಗಗಳ ಚಿತ್ರೀಕರಣ ನಡೆಯಲಿದೆ. ಈ ದೃಶ್ಯಗಳಲ್ಲಿ ನಟ ಶಿವರಾಜ್ ಕುಮಾರ್ ಮತ್ತು ಸುದೀಪ್ ಸಹ ಭಾಗಿಯಾಗಲಿದ್ದಾರೆ. ಜೊತೆಗೆ ಸಿನಿಮಾದ ನಾಯಕಿ ಪಾತ್ರದ ಚಿತ್ರೀಕರಣ ಸಹ ಅಲ್ಲಿಯೇ ನಡೆಯಲಿದೆ. ಇದೇ ಕಾರಣದಿಂದ ಲಂಡನ್ ಗೆ ತೆರಳುವ ಮುನ್ನ ನಾಯಕಿಯ ಆಯ್ಕೆಯನ್ನ ಚಿತ್ರತಂಡ ಮಾಡಿಕೊಂಡಿದೆ.
ಸದ್ಯ ಸಿನಿಮಾದಲ್ಲಿ ನಟಿ ಆಮಿ ಜಾಕ್ಸನ್ ಕಾಣಿಸಿಕೊಳುವುದು ಪಕ್ಕಾ ಆಗಿದೆ. ಇತ್ತ 'ದಿ ವಿಲನ್' ತಂಡ ಲಂಡನ್ ನಲ್ಲಿ ಶೂಟಿಂಗ್ ಮಾಡಲು ಎಲ್ಲ ತಯಾರಿ ಮಾಡಿಕೊಂಡಿದೆ. ಮುಂದೆ ಓದಿ...

ಲಂಡನ್ ನಲ್ಲಿ ಚಿತ್ರೀಕರಣ
'ದಿ ವಿಲನ್' ಸಿನಿಮಾದ ಕೆಲ ಮುಖ್ಯ ದೃಶ್ಯಗಳನ್ನ ಲಂಡನ್ ನಲ್ಲಿ ಚಿತ್ರೀಕರಣ ಮಾಡುವುದಕ್ಕಾಗಿ ನಿರ್ದೇಶಕ ಪ್ರೇಮ್ ಪ್ಲಾನ್ ಮಾಡಿದ್ದಾರೆ.

ಚಿತ್ರೀಕರಣದಲ್ಲಿ ಶಿವಣ್ಣ, ಸುದೀಪ್
ಶಿವರಾಜ್ ಕುಮಾರ್ ಮತ್ತು ಸುದೀಪ್ ಇಬ್ಬರು ಇರುವ ದೃಶ್ಯಗಳ ಚಿತ್ರೀಕರಣ ಲಂಡನ್ ನಲ್ಲಿ ನಡೆಯಬೇಕಿದೆ. ಶಿವಣ್ಣ ಮತ್ತು ಸುದೀಪ್ ಇಬ್ಬರು ಸಹ ಸದ್ಯದಲ್ಲೇ ಲಂಡನ್ ಗೆ ತೆರಳಲಿದ್ದಾರೆ.

20 ಜನರ ತಂಡ
ನಿರ್ದೇಶಕ ಪ್ರೇಮ್, ನಿರ್ಮಾಪಕ ಸಿ.ಆರ್.ಮನೋಹರ್ ಸೇರಿದಂತೆ 20 ಜನರ ತಂಡ ಲಂಡನ್ ವಿಮಾನವೇರಲಿದ್ದಾರೆ.

ಆಮಿ ಜಾಕ್ಸನ್ ಕೂಡ ಭಾಗಿ
ಲಂಡನ್ ನಲ್ಲಿ ನಡೆಯುವ ಚಿತ್ರೀಕರಣದಲ್ಲಿ ಆಮಿ ಜಾಕ್ಸನ್ ಸಹ ಭಾಗಿಯಾಗಲಿದ್ದಾರೆ. ಅದೇ ಕಾರಣಕ್ಕೆ ಲಂಡನ್ ಗೆ ಹೋಗುವುದಕ್ಕೂ ಮುಂಚೆ ಪ್ರೇಮ್ ನಾಯಕಿಯ ಆಯ್ಕೆಯನ್ನ ಫೈನಲ್ ಮಾಡಿದ್ದಾರೆ.

ಮೇ ಅಂತ್ಯಕ್ಕೆ ಆಮಿ ಹಾಜರಿ
ಸದ್ಯ ಲಂಡನ್ ನಲ್ಲಿಯೇ ಇರುವ ಆಮಿ ಜಾಕ್ಸನ್ ಚಿತ್ರತಂಡವನ್ನ ಸೇರಿಕೊಳ್ಳಲಿದ್ದಾರೆ. ಮೇ ತಿಂಗಳ ಕೊನೆಯಲ್ಲಿ ಅವರ ಪಾತ್ರದ ಚಿತ್ರೀಕರಣ ನಡೆಯಲಿದೆ.

ಬಹುನಿರೀಕ್ಷಿತ ಸಿನಿಮಾ
'ದಿ ವಿಲನ್' ಕನ್ನಡ ಚಿತ್ರರಂಗದ ಬಿಗ್ ಬಜೆಟ್ ಸಿನಿಮಾಗಳಲ್ಲಿ ಒಂದಾಗಿದೆ. ಮೊದಲ ಬಾರಿ ಚಿತ್ರದಲ್ಲಿ ಶಿವಣ್ಣ ಮತ್ತು ಸುದೀಪ್ ನಟಿಸಿದ್ದು, 'ದಿ ವಿಲನ್' ಬಗ್ಗೆ ಗಾಂಧಿನಗರದಲ್ಲಿ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಇದೆ.


Click it and Unblock the Notifications











