'ದಿ ವಿಲನ್' ನೋಡುವ ಅಭಿಮಾನಿಗಳಲ್ಲಿ ಮನವಿ ಮಾಡಿದ ಚಿತ್ರತಂಡ
Recommended Video

ಪ್ರೇಮ್ ನಿರ್ದೇಶನದಲ್ಲಿ ತಯಾರಾಗಿರುವ ಬಿಗ್ ಬಜೆಟ್ ಹಾಗೂ ಇಬ್ಬರು ಸ್ಟಾರ್ ನಟರು ಅಭಿನಯಿಸಿರುವ 'ದಿ ವಿಲನ್' ಸಿನಿಮಾ ಗುರುವಾರ (ಅಕ್ಟೋಬರ್ 18) ಜಗತ್ತಿನಾದ್ಯಂತ ತೆರೆಕಾಣುತ್ತಿದೆ.
ಈ ವಿಶೇಷವಾಗಿ ಶಿವರಾಜ್ ಕುಮಾರ್ ಮತ್ತು ಸುದೀಪ್ ಅಭಿಮಾನಿಗಳು ದಸರಾ ಹಬ್ಬವನ್ನ ಜೋರಾಗಿ ಆಚರಣೆ ಮಾಡ್ತಿದ್ದಾರೆ. ಈ ಮಧ್ಯೆ 'ದಿ ವಿಲನ್' ಸಿನಿಮಾದ ಬಗ್ಗೆ ಅಭಿಮಾನಿಗಳು ಮತ್ತು ವಿಲನ್ ಚಿತ್ರತಂಡ ವಿಶೇಷವಾದ ಮನವಿ ಮಾಡಿಕೊಂಡಿದೆ. ಅದೇನಪ್ಪಾ ಅಂದ್ರೆ.....
ದಿ ವಿಲನ್, ಇದು ಕೇವಲ ಶಿವಣ್ಣ, ಸುದೀಪ್, ಪ್ರೇಮ್ ಅಭಿಮಾನಿಗಳ ಸಿನಿಮಾವಲ್ಲ. ಇದು ಸಮಸ್ತ ಕನ್ನಡಿಗರ ಸಿನಿಮಾ. ಮನೋರಂಜನೆಯ ದೃಷ್ಟಿಯಲ್ಲಿ ಪರಭಾಷಾ ಚಿತ್ರಗಳಿಗೆ ಸೆಡ್ಡು ಹೊಡೆಯಲೆಂದೇ ಮೂಡಿಬಂದ ಚಿತ್ರ.

ಸತತ ಎರಡು ವರ್ಷಗಳ ಕಾಲ ಪ್ರೇಮ್ ಕಲಾ ಕುಸುರಿಯಲ್ಲಿ ಜೋಪಾನ ಮಾಡಿದ ಕೂಸು. ನಾಳೆಯಿಂದ ಅಭಿಮಾನಿಗಳ ಮಡಿಲು ಸೇರುತ್ತಿದೆ. ಇನ್ಮುಂದೆ ಸಿನಿಮಾದ ಜವಾಬ್ದಾರಿ ಸಮಸ್ತ ಕನ್ನಡಿಗರದ್ದು. ಇದರ ಲಾಲನೆ ಪಾಲನೆ ಮಾಡಿ ಪ್ರೀತಿಯಿಂದ ಕೈ ಹಿಡಿದು ಮುನ್ನಡೆಸಬೇಕಾಗಿ ನಿಮ್ಮೆಲ್ಲರಲ್ಲಿ ವಿನಂತಿ. ಈ ನಡುವೆ ಕೆಲವು ಕಿಡಿಗೇಡಿಗಳು ಶಿವಣ್ಣ ಮತ್ತು ಸುದೀಪ್ ಅಭಿಮಾನಿಗಳ ನಡುವೆ ವೈಮನಸ್ಸು ಮೂಡಿಸಿ ಚಿತ್ರದ ಕುರಿತು ಅಪಪ್ರಚಾರ ಮಾಡುತ್ತಿರುವುದು ಮತ್ತು ಮುಂದೆ ಮಾಡಲೆತ್ನಿಸುವುದು ಖಂಡನಾರ್ಹ.
ಕನ್ನಡ ಚಿತ್ರರಂಗದ ಬೆಳವಣಿಗೆಯ ದೃಷ್ಟಿಯಿಂದ ಇದು ಮಾರಕ. ಆದ ಕಾರಣ ಸಮಸ್ತ ಅಭಿಮಾನಿಗಳು ಒಗ್ಗೂಡಿ ಕನ್ನಡ ಚಿತ್ರರಂಗದ ಬೆಳವಣಿಗೆಗೆ ಪ್ರೀತಿಯಿಂದ ಸಹಕರಿಸಿ, ಈ ಚಿತ್ರವನ್ನು ಸ್ವೀಕರಿಬೇಕಾಗಿ ವಿನಂತಿ.
ವಿಶೇಷ ಸೂಚನೆ: ದಯಮಾಡಿ ಯಾರು ಕೂಡ ಈ ಸಿನಿಮಾ ದೃಶ್ಯಗಳನ್ನು ಸೆರೆ ಹಿಡಿದು ಯೂಟ್ಯೂಬ್ ಅಥವಾ ಇನ್ಯಾವುದೇ ಮಾಧ್ಯಮಗಳಲ್ಲಿ ಪ್ರಸಾರ ಮಾಡಬಾರದು, ಮಾಡಿದಲ್ಲಿ ಗೂಂಡಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಆದ ಕಾರಣ ಅಭಿಮಾನಿಗಳು ಪೈರಸಿ ತಡೆಗೆ ಸಹಕರಿಸಬೇಕಾಗಿ ವಿನಂತಿ....' ಎಂದು ಕೇಳಿಕೊಳ್ಳುತ್ತಿದ್ದಾರೆ.


Click it and Unblock the Notifications











