For Quick Alerts
  ALLOW NOTIFICATIONS  
  For Daily Alerts

  ಹಿಸ್ಟರಿ ಕ್ರಿಯೆಟ್ ಮಾಡಲು ಸಜ್ಜಾಗಿದೆ 'ದಿ ವಿಲನ್' ಟೀಂ

  By Pavithra
  |

  ಸಾಕಷ್ಟು ದಿನಗಳು ಕಾದ ನಂತರ 'ದಿ ವಿಲನ್' ಚಿತ್ರದ ಟೀಸರ್ ಬಿಡುಗಡೆಗೆ ಇಂದು ಮುಹೂರ್ತ ಫಿಕ್ಸ್ ಆಗಿದೆ. ಸಂಜೆ 7 ಗಂಟೆಗೆ ಮಾಗಡಿ ರಸ್ತೆಯ ಜಿ ಟಿ ಮಾಲ್ ನಲ್ಲಿ 'ದಿ ವಿಲನ್' ಚಿತ್ರದ ಎರಡು ಟೀಸರ್ ಗಳು ಬಿಡುಗಡೆ ಆಗುತ್ತಿದೆ. ಟೀಸರ್ ನೋಡಲು ಟಿಕೆಟ್ ನಿಗದಿ ಮಾಡಿದ್ದು ಅದರಿಂದ ಬರುವ ಹಣವನ್ನು ಕಷ್ಟದಲ್ಲಿರುವ ನಿರ್ದೇಶಕರಿಗೆ ನೀಡಲು ಚಿತ್ರತಂಡ ನಿರ್ಧಾರ ಮಾಡಿದೆ.

  ವಿಭಿನ್ನ ರೀತಿಯಲ್ಲಿ ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆಯಲು ಚಿತ್ರತಂಡ ತಯಾರಿ ಮಾಡಿಕೊಂಡಿದೆ. ಹೌದು ಇಂದು ಬಿಡುಗಡೆ ಆಗಲಿರುವ 'ದಿ ವಿಲನ್' ಸಿನಿಮಾದ ಎರಡು ಟೀಸರ್ ನಾಳೆ ಅಂದರೆ ಶುಕ್ರವಾರದಿಂದ ರಾಜ್ಯದ ಪ್ರತಿ ಚಿತ್ರಮಂದಿರ ಹಾಗೂ ಮಲ್ಟಿಫ್ಲೆಕ್ಸ್ ನಲ್ಲಿ ಪ್ರದರ್ಶನ ಆಗಲಿದ್ಯಂತೆ.

  ದಿ ವಿಲನ್' ಟೀಸರ್ ಟಿಕೆಟ್ ಕೊಂಡವರಿಗೆ ಧನ್ಯವಾದ ಹೇಳಿದ ಕಿಚ್ಚ ದಿ ವಿಲನ್' ಟೀಸರ್ ಟಿಕೆಟ್ ಕೊಂಡವರಿಗೆ ಧನ್ಯವಾದ ಹೇಳಿದ ಕಿಚ್ಚ

  ಕನ್ನಡ ಸಿನಿಮಾರಂಗದಲ್ಲಿ ಚಿತ್ರ ಪ್ರಚಾರವನ್ನು ಪ್ರೇಮ್ ಅವರಂತೆ ಯಾರು ಮಾಡುವುದಿಲ್ಲ ಎನ್ನುವ ಮಾತಿದೆ. ಅದೇ ಮಾತಿನಂತೆ ದಿ ವಿಲನ್ ಚಿತ್ರದ ಪ್ರಚಾರವನ್ನು ಹೊಸ ರೀತಿಯಲ್ಲಿ ಮಾಡಬೇಕು ಎಂದು ನಿರ್ದೇಶಕ ಪ್ರೇಮ್ ಸಿದ್ದತೆ ಮಾಡಿಕೊಂಡಿದ್ದಾರೆ.

  The Villain teasers are playing every theater in the state from tomorrow

  ಶುಕ್ರವಾರದಿಂದ ಪ್ರದರ್ಶನವಾಗಿವ ಎಲ್ಲಾ ಚಿತ್ರಗಳ ಮುಂಚಿತವಾಗಿಯೂ ದಿ ವಿಲನ್ ಸಿನಿಮಾದ ಎರಡು ಟೀಸರ್ ಗಳು ಪ್ರದರ್ಶನವಾಗುತ್ತದೆ. ಈ ಮೂಲಕ ರಾಜ್ಯದ ಮೂಲೆ ಮೂಲೆಯಲ್ಲಿಯೂ ಸಿನಿಮಾದ ಪ್ರಚಾರವನ್ನು ಮಾಡಲು ನಿರ್ದೇಶಕ ಪ್ರೇಮ್ ಮುಂದಾಗಿದ್ದಾರೆ.

  English summary
  Two teasers of Kannada film 'The Villain' are playing every theater in the state from tommorow. Shivarajkumar and Sudeep are acting in the villain movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X