ಮುಂದಿನ ವಾರದಿಂದ 'ದಿ ವಿಲನ್' ಟಿಕೆಟ್ ಬುಕ್ಕಿಂಗ್
Recommended Video

ಶಿವರಾಜ್ ಕುಮಾರ್ ಮತ್ತು ಸುದೀಪ್ ಅಭಿನಯದ 'ದಿ ವಿಲನ್' ಸಿನಿಮಾ ಅಕ್ಟೋಬರ್ 18 ರಂದು ಬಿಡುಗಡೆಯಾಗುತ್ತಿದೆ. ಮೊದಲ ದಿನ ಟಿಕೆಟ್ ಸಿಗುತ್ತಾ ಇಲ್ವಾ ಎಂದು ಈಗಲೇ ಲೆಕ್ಕಾಚಾರ ಹಾಕ್ತಿದ್ದಾರೆ ಪ್ರೇಕ್ಷಕರು.
ಅದಕ್ಕಾಗಿಯೇ ಅಡ್ವಾನ್ಸ ಟಿಕೆಟ್ ಬುಕ್ಕಿಂಗ್ ಯಾವಾಗ ಆರಂಭವಾಗುತ್ತೆ ಎಂದು ಕಾಯ್ತಿದ್ದಾರೆ. ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಶುರುವಾಗುತ್ತಿದ್ದಂತೆ ಮೊದಲು ಟಿಕೆಟ್ ಬುಕ್ ಮಾಡ್ಬೇಕು ಎಂದು ಚಿತ್ರಪ್ರೇಮಿಗಳು ನಿರೀಕ್ಷಿಸುತ್ತಿದ್ದಾರೆ.
ಅಕ್ಟೋಬರ್ ಮೊದಲ ವಾರ 'ದಿ ವಿಲನ್' ಟಿಕೆಟ್ ಬುಕ್ಕಿಂಗ್ ಆರಂಭವಾಗಲಿದೆ ಎನ್ನಲಾಗಿತ್ತು. ಆದ್ರೆ, ಅದು ಇನ್ನೊಂದು ವಾರಕ್ಕೆ ಮುಂದಕ್ಕೆ ಹೋಗಿದೆ. ಹೌದು, ಅಕ್ಟೋಬರ್ 11 ರಂದು 'ವಿಲನ್' ಚಿತ್ರದ ಅಡ್ವಾನ್ಸ್ ಟಿಕೆಟ್ ಆರಂಭವಾಗುತ್ತಿದೆ.

ಇತ್ತೀಚಿಗಷ್ಟೆ 'ದಿ ವಿಲನ್' ಸಿನಿಮಾದ ಪ್ರೀ-ಟೀಸರ್ ರಿಲೀಸ್ ಆಗಿದ್ದು, ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಮೊದಲ ಸ್ಥಾನದಲ್ಲಿದೆ. ಮಿಲಿಯನ್ ಸಂಖ್ಯೆಯಲ್ಲಿ ವೀಕ್ಷಕಕರು ಈ ಟೀಸರ್ ನೋಡಿ ಖುಷಿ ಪಟ್ಟಿದ್ದಾರೆ.
ಪ್ರೇಮ್ ನಿರ್ದೇಶನದ ಈ ಸಿನಿಮಾವನ್ನ ಸಿಆರ್ ಮನೋಹರ್ ನಿರ್ಮಾಣ ಮಾಡಿದ್ದಾರೆ. ಶಿವಣ್ಣ, ಸುದೀಪ್ ಜೊತೆ ಆಮಿ ಜಾಕ್ಸನ್, ಮಿಥುನ್ ಚಕ್ರವರ್ತಿ, ಶ್ರೀಕಾಂತ್ ಸೇರಿದಂತೆ ಹಲವರು ಅಭಿನಯಸಿದ್ದಾರೆ.


Click it and Unblock the Notifications











