ಇಬ್ಬರಲ್ಲಿ ನಿಜವಾದ 'ವಿಲನ್' ಯಾರು ಎಂದು ಹೇಳುತ್ತಿದೆ ಈ ಸಾಲುಗಳು
Recommended Video

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮೊಟ್ಟ ಮೊದಲ ಬಾರಿಗೆ ಒಟ್ಟಿಗೆ ನಟಿಸಿರುವ 'ದಿ ವಿಲನ್' ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದ್ದು, ಯೂಟ್ಯೂಬ್ ನಲ್ಲಿ ಸಖತ್ ಹವಾ ಹುಟ್ಟಿಸಿದೆ.
ಚಿತ್ರದ ಮಾಸ್ ಹಾಡನ್ನೇ ಮೊದಲ ಬಿಟ್ಟಿರುವುದು 'ದಿ ವಿಲನ್' ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. 'ಐ ಯಮ್ ವಿಲನ್....' ಎಂಬ ಹೆಸರಿನ ಈ ಹಾಡು ಸಖತ್ ಮಾಸ್ ಆಗಿದೆ. ಆದ್ರೆ, ಈ ಹಾಡು ಯಾರಿಗೆ.? ಶಿವರಾಜ್ ಕುಮಾರ್ ಗೋ ಅಥವಾ ಸುದೀಪ್ ಗೋ ಅಥವಾ ಇಬ್ಬರಿಗೋ ಎಂಬ ಕುತುಹಲ ಈಗ ಅಭಿಮಾನಿಗಳಲ್ಲಿ ಕಾಡುತ್ತಿದೆ.
ಆದ್ರೂ, ಈ ಹಾಡಿನ ಸಾಲುಗಳನ್ನ ಕೇಳುತ್ತಿದ್ದರೇ ಚಿತ್ರದಲ್ಲಿ ನಿಜವಾದ ವಿಲನ್ ಯಾರು ಮತ್ತು ಈ ಹಾಡು ಯಾರಿಗೆ ಎಂಬುದರ ಬಗ್ಗೆ ಸುಳಿವು ಸಿಕ್ಕಿದಂತಿದೆ. ಅಷ್ಟಕ್ಕೂ, ಈ ಹಾಡಿನ ಸಾಹಿತ್ಯದಲ್ಲಿ ಏನಿದೆ.? ಮುಂದೆ ಓದಿ....

ಐ ಯಮ್ ವಿಲನ್...
ಮಚ್ಚು ಗಿಚ್ಚು ಹಿಡಿದವನಲ್ಲ..
ಆದ್ರೂ ಹವಾ ಇಟ್ಟವನಲ್ಲಾ..
ಕೋಟೆ ಕಟ್ಟಿ ಮೆರ್ದವ್ನ್ ಅಲ್ಲ..
ಆದ್ರೂ ರಾಜ್ಯ ಆಳ್ತನವಲ್ಲಾ..
ಓಹ್ ಕೋನ್ ರೇ ಹುನೇ?
ಐ ಯಮ್ ವಿಲನ್..
ದೇಖೋ ಇಂಡಿಯನ್..
ಗ್ಯಾಂಗ್ ಸ್ಟರ್ ಹಿ ಇಸ್ ದ ಮಾಸ್ಟರ್ ಓಹೋ
ಗ್ಯಾಂಗ್ ಸ್ಟರ್ ಹಿ ಇಸ್ ದ ರೂಲರ್ ಓಹೋ
ಗ್ಯಾಂಗ್ ಸ್ಟರ್ ಹಿ ಇಸ್ ದ ಫೈಟರ್ ಓಹೋ, ಓಹೋ , ಓಹೋ

ಕಿಂಗ್, ಹವಾ, ಎಲ್ಲವೂ ನಂದೇ
ರಾಜ್ಯ ಕಟ್ಟೋಕೆ..., ಯಾವ ಸೈನ್ಯನೂ ಬೇಕಾಗಿಲ್ಲಾ
ನನ್ನ ನೆರಳನ್ನೇ..., ನಾನು ಯಾವತ್ತು ನಂಬೋದಿಲ್ಲಾ
ಕೈಲಿ ಕಾಸಿದ್ರೆ ಇಲ್ಲಿ ಕೈಕಾಲುಗು ನೆಂಟ್ರು ಎಲ್ಲಾ...
ಖಾಲಿ ಜೇಬಲ್ಲಿ ನಿನ್ನ ನಾಯಿನೂ ಮೂಸೋದಿಲ್ಲಾ....
ಏ...ನಾನೇ ಕಿಂಗ್ ನಂದೇ ರೂಲು, ನಂಗೆ ಯಾರು ಬೇಕಾಗಿಲ್ಲ...
ಏ...ಕೈಯಲ್ ಗನ್ನು ಇದ್ರೆ ಸಾಕು ನಾನೇ ಗೌರ್ನ್ಮೆಂಟ್ ಇಲ್ಲಿ ಎಲ್ಲಾ....
ಇಲ್ಲಿ ರಾಜಾನೂ...ಮಂತ್ರಿನೂ....ಸೈನ್ಯನೂ...ನಾನೇ ಕಣೋ...ಓ
ಆಪ್ ಕಾ ನಾಮ್ ಕ್ಯಾ ದಾದಾ?
ಐ ಯಮ್ ವಿಲನ್
ದೇಖೋ ಇಂಡಿಯನ್

ಸುದೀಪ್ ಎಂಟ್ರಿ ಸಾಂಗ್ ಇರಬಹುದು.?
ನನ್ನ ಸ್ಟೋರಿ ಕೇಳೋಕೆ ಇಲ್ಲಿ ಯಾರ್ ಗೂನು ಇಷ್ಟ ಇಲ್ಲಾ
ಹೇಳ್ತಾ ಕೂರೋಕೆ ಈಗ ನಂಗೂನು ಟೈಮು ಇಲ್ಲಾ...
ಮೀನ ಹೆಜ್ಜೇನಾ ಕಂಡು ಹಿಡಿಬೋದು ಅಂತಾರೆಲ್ಲಾ...
ನನ್ನ ಹೆಜ್ಜೇನಾ ಕಂಡು ಹಿಡಿಯೋರು ಹುಟ್ಟೇ ಇಲ್ಲಾ...
ಏ ಒಂದೇ ಏಟು, ಒಂಟಿ ಸಲಗ ಸಿಂಗಲಾಗೇ ನುಗ್ತೀನಲ್ಲಾ
ಹೆಜ್ಜೆ ಒಟ್ರೆ ಸೋಲೇ ಇಲ್ಲ, ಸಾವಿಗಂತು ಎದುರೋನಲ್ಲಾ
ಇಲ್ಲಿ ಕೇಡಿನೂ, ರೌಡಿನೂ, ವಿಲನ್ನೂ ನಾನೇ ಕಣೋ ಓ....
ಎವಡ್ರು ನುವ್ವು
ಐ ಯಮ್ ವಿಲನ್...
ದೇಖೋ ಇಂಡಿಯನ್...

'ದಿ ವಿಲನ್' ಆಲ್ಬಂ ರೆಡಿ
ಕಂಪ್ಲೀಟ್ ಶೂಟಿಂಗ್ ಮುಗಿಸಿರವ ದಿ ವಿಲನ್ ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸ ಮಾಡುತ್ತಿದೆ. ಈ ಮಧ್ಯೆ ಚಿತ್ರದ ಒಂದೊಂದೆ ಹಾಡುಗಳನ್ನ ರಿಲೀಸ್ ಮಾಡಲು ಮುಂದಾಗಿದ್ದು, ಮೊದಲ ಹಾಡು ಇದಾಗಿದೆ. ಇನ್ನುಳಿದಂತೆ ಶಂಕರ್ ಮಹಾದೇವನ್ ಹಾಡಿದ್ದು, ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ಜೋಗಿ ಪ್ರೇಮ್ ಸಾಹಿತ್ಯ ಬರೆದಿದ್ದಾರೆ. ಇನ್ನುಳಿದಂತೆ ಸಿ ಮನೋಹರ್ ಈ ಚಿತ್ರವನ್ನ ನಿರ್ಮಾಣ ಮಾಡಿದ್ದು, ಶಿವಣ್ಣ ಸುದೀಪ್ ಜೊತೆಯಲ್ಲಿ ಆಮಿ ಜಾಕ್ಸನ್, ಮಿಥುನ್ ಚಕ್ರವರ್ತಿ, ಶ್ರೀಕಾಂತ್, ಸೇರಿದಂತೆ ಹಲವರು ಅಭಿನಯಿಸಿದ್ದಾರೆ.


Click it and Unblock the Notifications











