2018ನೇ ವರ್ಷದ 'ಬುಕ್ ಮೈ ಶೋ'ನ ಟಾಪ್ ಸಿನಿಮಾ 'ದಿ ವಿಲನ್'.!
ಯಾವುದೇ ಸಿನಿಮಾ ರಿಲೀಸ್ ಆದ್ರು ಆನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡೋಕೆ ಹುಡುಕುವ ಮೊದಲ ಆಪ್ ಬುಕ್ ಮೈ ಶೋ. ಸಿನಿಮಾ ರೇಟಿಂಗ್, ಬಾಕ್ಸ್ ಅಫೀಸ್ ಕಲೆಕ್ಷನ್, ರಿವ್ಯೂ ಎಲ್ಲವನ್ನ ಪ್ರಕಟ ಮಾಡುವ ಬುಕ್ ಮೈ ಶೋ ಆಪ್ ವರ್ಷದ ಟಾಪ್ ಸಿನಿಮಾ ಯಾವುದು ಎಂದು ಘೋಷಿಸುತ್ತೆ.
ಪ್ರತಿವರ್ಷದಂತೆ ಈ ಸಲವೂ ವರ್ಷದ ಟಾಪ್ ಸಿನಿಮಾ ಯಾವುದು ಎಂದು ಬುಕ್ ಮೈ ಶೋ ತಿಳಿಸಿದೆ. ಪ್ರಾದೇಶಿಕ ಭಾಷೆಗಳ ಅನ್ವಯ ಟಾಪ್ ಸಿನಿಮಾದ ಹೆಸರು ಬಹಿರಂಗಪಡಿಸಿದ್ದು, ಕನ್ನಡದಲ್ಲಿ 'ದಿ ವಿಲನ್' ಟಾಪ್ ಚಿತ್ರವಾಗಿ ಹೊರಹೊಮ್ಮಿದೆ. ಈ ವಿಷ್ಯವನ್ನ ಖ್ಯಾತ ವಿಶ್ಲೇಷಕ ರಮೇಶ್ ಬಾಲ ಟ್ವೀಟ್ ಮಾಡಿದ್ದಾರೆ.
ಜೋಗಿ ಪ್ರೇಮ್ಸ್ ನಿರ್ದೇಶನದಲ್ಲಿ ಬಂದಿದ್ದ 'ದಿ ವಿಲನ್' ಅಕ್ಟೋಬರ್ 18 ರಂದು ರಿಲೀಸ್ ಆಗಿತ್ತು. ಸಿನಿಮಾ ಬಿಡುಗಡೆಗೂ ಮುಂಚೆ ಭಾರಿ ಕುತೂಹಲ, ಸದ್ದು ಮಾಡಿದ್ದ ಈ ಸಿನಿಮಾ, ಟಿಕೆಟ್ ಬುಕ್ಕಿಂಗ್ ನಲ್ಲೂ ದಾಖಲೆ ನಿರ್ಮಿಸಿತ್ತು. ಹಾಗಿದ್ರೆ, ದಿ ವಿಲನ್ ಜೊತೆ ದಾಖಲೆ ನಿರ್ಮಿಸಿದ ಇತರೆ ಭಾಷೆಯ ಚಿತ್ರಗಳು ಯಾವುದು? ಮುಂದೆ ಓದಿ.....

ಅತಿ ಹೆಚ್ಚು ಟಿಕೆಟ್ ಬುಕ್ ಆದ ದಾಖಲೆ
2018ನೇ ಸಾಲಿನಲ್ಲಿ ಅತಿ ಹೆಚ್ಚು ಟಿಕೆಟ್ ಬುಕ್ ಆದ ಕನ್ನಡ ಸಿನಿಮಾ ದಿ ವಿಲನ್. ರಿಲೀಸ್ ಗೆ ಮುಂಚೆ ದೊಡ್ಡ ಹವಾ ಸೃಷ್ಟಿಸಿದ್ದ 'ದಿ ವಿಲನ್' ಸಿನಿಮಾ ಅಡ್ವಾನ್ಸ್ ಬುಕ್ಕಿಂಗ್ ನಲ್ಲೇ ಭಾರಿ ದಾಖಲೆ ನಿರ್ಮಿಸಿತ್ತು. ಸುದೀಪ್ ಮತ್ತು ಶಿವರಾಜ್ ಕುಮಾರ್ ಕಾಂಬಿನೇಷನ್ ಎಂಬ ಅಸ್ತ್ರ ಇಷ್ಟು ಕ್ರೇಜ್ ಹುಟ್ಟಿಸಲು ಕಾರಣವಾಗಿತ್ತು.

ಮೊದಲ ದಿನ ಕಲೆಕ್ಷನ್ ಎಷ್ಟು?
ಈ ಹಿಂದಿನ ಸಿನಿಮಾಗಳಿಗೆ ಹೋಲಿಸಿಕೊಂಡರೇ ಮೊದಲ ದಿನದ ಗಳಿಕೆಯಲ್ಲಿ ದಿ ವಿಲನ್ ಚಿತ್ರವೇ ಟಾಪ್ ಆಗಿತ್ತು. ಸ್ವತಃ ಪ್ರೇಮ್ ಹೇಳಿದಂತೆ ಫಸ್ಟ್ ಡೇ 20 ಕೋಟಿ ಕಲೆಕ್ಷನ್ ಆಗಿತ್ತು. ನಂತರ ಗಳಿಕೆ ಡಲ್ ಆದರೂ ಮೊದಲು ಮೂರು ದಿನ ದಿ ವಿಲನ್ ಅಬ್ಬರ ಜೋರಾಗಿಯೇ ಇತ್ತು.

'ದಿ ವಿಲನ್' ದಾಖಲೆ ಬ್ರೇಕ್ ಮಾಡ್ತಾ ಕೆಜಿಎಫ್
ದಿ ವಿಲನ್ ವರ್ಷದ ಟಾಪ್ ಸಿನಿಮಾ ಎಂದು ಬುಕ್ ಮೈ ಶೋ ಹೇಳಿದೆ. ವರ್ಷಂತ್ಯಾಕ್ಕೆ ತೆರೆಕಂಡ ಕೆಜಿಎಫ್ ಸಿನಿಮಾ ಭರ್ಜರಿ ಗಳಿಕೆ ಕಂಡಿದೆ. ಅತಿ ಹೆಚ್ಚು ಶೋಗಳು ಕೂಡ ಕಾಣ್ತಿದೆ. ಬಹುಶಃ ದಿ ವಿಲನ್ ಚಿತ್ರದ ಕಲೆಕ್ಷನ್, ಟಿಕೆಟ್ ಬುಕ್ಕಿಂಗ್ ದಾಖಲೆ ಎಲ್ಲವನ್ನ ಕೆಜಿಎಫ್ ಬ್ರೇಕ್ ಮಾಡಿರಬಹುದು ಎಂಬ ಚರ್ಚೆಯಾಗ್ತಿದೆ.

ಇತರೆ ಭಾಷೆಯಲ್ಲಿ ಯಾವ ಸಿನಿಮಾ ಇದೆ.?
ಹಿಂದಿಯಲ್ಲಿ ಪದ್ಮಾವತ್, ಇಂಗ್ಲೀಷ್ ನಲ್ಲಿ ಅವೇಂಜರ್ಸ್ ಇನ್ಫಿನಿಟಿ ವಾರ್, ತಮಿಳಿನಲ್ಲಿ 2.0, ತೆಲುಗಿನಲ್ಲಿ ಗೀತಾ ಗೋವಿಂದಂ, ಮಲಯಾಳಂನಲ್ಲಿ ಕಾಯಂಕುಳಂ ಕೊಚ್ಚುನಿ ಚಿತ್ರಗಳು ವರ್ಷದ ಟಾಪ್ ಸಿನಿಮಾ ಎನಿಸಿಕೊಂಡಿವೆ.


Click it and Unblock the Notifications











