ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಆ 3 ಜನ ಕಾರಣ ; ಡೆತ್ ನೋಟ್‌ನಲ್ಲಿ ಸ್ಫೋಟಕ ಮಾಹಿತಿ...!

ಸಿನಿಮಾ ರಂಗದ ಮೇಲೆ ಅತೀವ ಪ್ರೀತಿ ಹೊಂದಿದ್ದ, ಸಿನಿ ವಲಯದಲ್ಲಿ ಎಲ್ಲರ ಸ್ನೇಹ ಸಂಪಾದಿಸಿಕೊಂಡಿದ್ದ ಸೌಂದರ್ಯ ಜಗದೀಶ್ ಅವರ ಅಕಾಲಿಕ ಅಗಲಿಕೆಯ ಸುತ್ತ ಮುತ್ತ ಹತ್ತಾರು ಅನುಮಾನ ಮನೆ ಮಾಡಿದ್ದವು. ಜೀವನೋತ್ಸಾಹದ ಚಿಲುಮೆಯಂತೆ ಇದ್ದ ವ್ಯಕ್ತಿ ಏಕಾಏಕಿ ಆತ್ಮಹತ್ಯೆಗೆ ಶರಣಾಗಿದ್ದೇಕೆ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಆ ಎಲ್ಲ ಪ್ರಶ್ನೆಗಳಿಗೆ ಈಗ ಸೌಂದರ್ಯ ಜಗದೀಶ್ ಅವರ ಪತ್ನಿ ರೇಖಾ ಉತ್ತರ ಕೊಡುವ ಪ್ರಯತ್ನ ಮಾಡಿದ್ದಾರೆ. ತಮ್ಮ ಪತಿಯ ನಿಧನಕ್ಕೆ ಅವರ ಬಿಸ್ನೆಸ್ ಪಾರ್ಟನರ್‌ಗಳಾಗಿದ್ದ ಸುರೇಶ್, ಹೊಂಬಣ್ಣ ಹಾಗೂ ಸುಧೀಂದ್ರ ಅವರೇ ನೇರಾ ನೇರ ಕಾರಣ ಎಂದು ಆರೋಪಿಸಿದ್ದಾರೆ.

ಹೌದು, ಅಸಲಿಗೆ.. ಸೌಂದರ್ಯ ಜಗದೀಶ್ ಅಗಲಿಕೆಯ ಒಂದು ತಿಂಗಳ ನಂತರ, ಸೌಂದರ್ಯ ಜಗದೀಶ್ ಬರೆದಿರುವ ಡೆತ್ ನೋಟ್ ಸಿಕ್ಕಿದೆ. ಆ ಡೆತ್ ನೋಟ್‌ನಲ್ಲಿ ವ್ಯವಹಾರ-ವ್ಯಾಪಾರದಲ್ಲಿನ 60 ಕೋಟಿಯ ನಷ್ಟ ಮತ್ತು ತಮಗಾದ ಮೋಸವನ್ನ ಸೌಂದರ್ಯ ಜಗದೀಶ್ ಉಲ್ಲೇಖಿಸಿದ್ದರು ಎಂದು ಅವರ ಪತ್ನಿ ಶಶಿರೇಖಾ ಹೇಳಿದ್ದಾರೆ.

The wife of producer and entrepreneur Soundarya Jagadish revealed an explosive twist to his suicide

ಮೊದಲು ತಾಯಿ ನಿಧನರಾದರು. ಆಮೇಲೆ 15 ದಿನಕ್ಕೆ ಯಜಮಾನರು ತೀರಿಕೊಂಡರು. ಆ ಶಾಕ್​ನಲ್ಲಿ ಏನಾಯಿತು ಎಂಬುದು ನಮಗೆ ಗೊತ್ತಿಲ್ಲ ಎಂದಿರುವ ಸೌಂದರ್ಯ ಜಗದೀಶ್ ಅವರ ಪತ್ನಿ ಶಶಿರೇಖಾ, ಈಗ ಶ್ರೀರಂಗಪಟ್ಟಣದಲ್ಲಿ ಪೂಜೆ ಮಾಡಿ ಅವರ ಬಟ್ಟೆಗಳನ್ನು ಅಲ್ಲಿ ಬಿಡಬೇಕು ಅಂತ ಅರ್ಚಕರು ಹೇಳಿದ್ದಾರೆ. ಹಾಗಾಗಿ ಹಳೇ ಬಟ್ಟೆಗಳನ್ನು ತೆಗೆಯಲು ವಾರ್ಡ್ ರೋಬ್ ತೆಗೆದಾಗ ಡೆತ್ ನೋಟ್ ಸಿಕ್ಕಿದೆ ಎಂದಿದ್ದಾರೆ.

ಸುರೇಶ್‌ ಹಾಗೂ ಹೊಂಬಣ್ಣ ಮತ್ತು ಸೌಂದರ್ಯ ಜಗದೀಶ್ ಸೇರಿಕೊಂಡು ಸೌಂದರ್ಯ ಕನ್‌ಸ್ಟ್ರಕ್ಷನ್ಸ್‌ ಕಂಪೆನಿಯನ್ನು ನಡೆಸಿಕೊಂಡು ಹೋಗುತ್ತಿದ್ದರು ಎಂದು ಹೇಳಿರುವ ಶಶಿರೇಖಾ ಜಗದೀಶ್ ಈ ವೇಳೆ ಕಂಪನಿಯು ಲಾಭದಲ್ಲಿದ್ದರು ನಷ್ಟದಲ್ಲಿದೆ ಎಂದು ಸುಳ್ಳು ಹೇಳಿ ತಮ್ಮ ಪತಿ ಜಗದೀಶ್‌ ಅವರಿಂದ ಹಣವನ್ನು ಹೂಡಿಕೆ ಮಾಡಿಸಿದ್ದರು, ಇಷ್ಟೇ ಅಲ್ಲದೇ ಸುಳ್ಳು ಹೇಳಿ ಕುಟುಂಬದ ಆಸ್ತಿಗಳನ್ನು ಬ್ಯಾಂಕ್‌ನಲ್ಲಿ ಅಡಮಾನ ಇರಿಸಿದ್ದಾರೆ. ಅದರ ಹಣವನ್ನು ವೈಯಕ್ತಿಕವಾಗಿ ಬಳಸಿಕೊಂಡಿದ್ದಾರೆ ಎಂದಿದ್ದಾರೆ ಶಶಿರೇಖಾ

ತಮಗೆ ತುಂಬ ಕಾಟ, ಕಿರುಕುಳು ಕೊಡುತ್ತಾರೆ ಅಂತ ಈ ಮೊದಲು ಒಮ್ಮೆ ನನ್ನ ಬಳಿ ಹೇಳಿದ್ದರು. ಆದರೆ ಈ ಮಟ್ಟಕ್ಕೆ ಆಗುತ್ತೆ ಅಂತ ನಮಗೆ ಗೊತ್ತಿರಲಿಲ್ಲ. ಏನೇ ಇದ್ದರೂ ನಮ್ಮ ಜೊತೆ ಹಂಚಿಕೊಳ್ಳಿ ಅಂತ ಧೈರ್ಯ ತುಂಬಿದ್ದೆವು ಎಂದು ಕೂಡ ಹೇಳಿರುವ ಸೌಂದರ್ಯ ಜಗದೀಶ್ ಅವರ ಪತ್ನಿ ಶಶಿರೇಖಾ, ನನಗೆ ಮತ್ತು ನನ್ನ ಮಗನಿಗೆ ಬೆದರಿಕೆ ಇದೆ ಎಂದಿದ್ದಾರೆ. ಹುಲಿ ರೀತಿ ಇದ್ದ ಅವರನ್ನೇ ಕೊನೆ ಕೊನೆಗೆ ಇಷ್ಟು ಸೈಲೆಂಟ್​ ಆಗುವಂತೆ ಮಾಡಿ ಈ ಹಂತಕ್ಕೆ ತೆಗೆದುಕೊಂಡು ಬಂದವರು, ನಾಳೆ ನನಗೆ ಮತ್ತು ನನ್ನ ಮಗನಿಗೆ ಏನು ಮಾಡುತ್ತಾನೋ ಗೊತ್ತಿಲ್ಲ. ನನಗೆ ಆ ಭಯ ಇದೆ. ಅವರು ಬರೆದಿದ್ದನ್ನೆಲ್ಲ ನಾನು ವೀಕ್ಷಿಸಿದ ಮೇಲೆ ಪಾರ್ಟ್ನರ್​ಗಳಿಂದ ನನ್ನ ಗಂಡನಿಗೆ ತುಂಬಾ ಕಿರುಕುಳ ಆಗಿದೆ. ಫೋರ್ಚರಿ ಕೂಡ ಮಾಡಿದ್ದಾರೆ ಎಂದು ಕಣ್ಣೀರು ಹಾಕಿದ್ದಾರೆ ಸೌಂದರ್ಯ ಜಗದೀಶ್ ಅವರ ಪತ್ನಿ ಶಶಿರೇಖಾ ಜಗದೀಶ್

The wife of producer and entrepreneur Soundarya Jagadish revealed an explosive twist to his suicide

ಪತಿ ಸೌಂದರ್ಯ ಜಗದೀಶ್‌ ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ಒಂದು ವಾರದ ಹಿಂದೆ ಸುರೇಶ್‌ ಹಾಗೂ ಹೊಂಬಣ್ಣ ನಿರಂತರವಾಗಿ ಫೋನ್‌ ಮಾಡಿದ್ದರು. ಇವರ ಕರೆ ಬಂದಾಗ ಸಂಪೂರ್ಣವಾಗಿ ಕುಗ್ಗಿ ಹೋಗಿದ್ದು, ಇದರಿಂದ ಮನನೊಂದು ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಜಗದೀಶ್‌ ಪತ್ನಿ ಶಶಿರೇಖಾ ಆರೋಪಿಸಿದ್ದಾರೆ.ಸದ್ಯಕ್ಕೆ ಶಶಿರೇಖಾ ಜಗದೀಶ್ ಅವರು ನೀಡಿದ ಡೆತ್ ನೋಟ್ ಆಧರಿಸಿ ಸೌಂದರ್ಯ ಜಗದೀಶ್ ಅವರ ಪಾರ್ಟನರ್ಸ್ ಸುರೇಶ್, ಹೊಂಬಣ್ಣ ಹಾಗೂ ಸುಧೀಂದ್ರ ಮೇಲೆ ಎಫ್ ಐ ಆರ್ ದಾಖಲಾಗಿದೆ.

More from Filmibeat

English summary
Shashirekha, the wife of producer and entrepreneur Soundarya Jagadish, revealed an explosive twist to his suicide, alleging that he was deceived by his business partner.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X