ನಾನು ದೊಡ್ಡವಳಾದೆ, ಜೀವನ ಮುಂದುವರಿಯಿತು. ಆದರೆ.. ; ತಂದೆ ರಘುವೀರ್ ನೆನೆದು ಕಣ್ಣೀರಾದ ಮಗಳು

ಚಿತ್ರರಂಗಕ್ಕೆ ಹಲವರು ಆಕಸ್ಮಿಕವಾಗಿ ಬಂದಿದ್ದಾರೆ. ಯಾರು ಊಹಿಸದ ಗೆಲುವನ್ನು ಕೂಡ ಕಂಡಿದ್ದಾರೆ. ಆ ಭಾಷೆ .. ಈ ಭಾಷೆ .. ಅಂತಲ್ಲ. ಎಲ್ಲಾ ಭಾಷೆಯಲ್ಲಿಯೂ ಹೀಗೆ ದಾರಿ ತಪ್ಪಿ ಬಂದು ಸಾಧನೆಯ ಶಿಖರಕ್ಕೇರಿದವರು ಸಿಕ್ಕಿಯೇ ಸಿಗುತ್ತಾರೆ. ಆ ಪೈಕಿ ಕನ್ನಡದಲ್ಲಿ ಒಬ್ಬರಾಗಿದ್ದರು ರಘುವೀರ್.

ಇವರ ''ಚೈತ್ರದ ಪ್ರೇಮಾಂಜಲಿ''.. ''ಶೃಂಗಾರ ಕಾವ್ಯ''.. ಹೇಗೆ ತಾನೇ ಕನ್ನಡಿಗರು ಮರೆಯಲು ಸಾಧ್ಯ. ''ಚೈತ್ರದ ಪ್ರೇಮಾಂಜಲಿ''ಯ ಸುಮ ಘಮ.. ಓ ಮಲೆನಾಡಿನ ಮೈಸಿರಿಯೇ.. ''ಶೃಂಗಾರ ಕಾವ್ಯ''ದ ಓ ಮೇಘವೇ ಮೇಘವೇ ಹೋಗಿ ಬಾ.. ಅಂಬರ ಚುಂಬಿತ ಪ್ರೇಮ ಪ್ರೇಮ.. ಹಾಡುಗಳನ್ನು ಕೇಳಿದರೆ ಕಾಲ ತೊಂಬತ್ತರ ದಶಕಕ್ಕೆ ಹೊರಳುತ್ತದೆ.

The Wound That Stays Quiet Moksha Soul-Stirring Tribute to Her Dad Raghuveer

ಕೇವಲ ಈ ಎರಡೇ ಚಿತ್ರಗಳ ಮೂಲಕ ಕರುನಾಡಿನೆಲ್ಲೆಡೆ ಮನೆ ಮಾತಾದ ರಘುವೀರ್ ಮನಸ್ಸು ಮಾಡಿದ್ದರೆ ಕುಬೇರನಂತೆ ಬದುಕಬಹುದಿತ್ತು. ಆದರೆ. ಅವರು ದುರಂತ ನಾಯಕನಾದರು.

ನಿನ್ನೆಗೆ ( ಮೇ8) ರಘುವೀರ್ ಇಹಲೋಕ ತ್ಯಜಿಸಿ ಹನ್ನೆರಡು ವರ್ಷಗಳಾಗಿವೆ. ಆದರೆ ಮಗಳು ಮೋಕ್ಷಾ ಪಾಲಿಗೆ ಎಲ್ಲವೂ ನಿನ್ನೆ ನಡೆದಂತೆ ಇದೆ. ಹನ್ನೆರಡು ವರ್ಷಗಳಿಂದ ತಂದೆಯ ನೆನಪಿನಲ್ಲಿರುವ, ಜನಸಂದಣಿಯಲ್ಲಿ ತಂದೆ ಮರಳಿ ಬರಬಹುದೆಂದು ಹುಡುಕುತ್ತಿರುವ ಮೋಕ್ಷಾ, ತಮ್ಮ ತಂದೆಗೆ ಅಕ್ಷರ ನಮನ ಸಲ್ಲಿಸಿದ್ದಾರೆ. ಮನದ ಮಾತುಗಳನ್ನು ಹಂಚಿಕೊಂಡು ಭಾವುಕರಾಗಿದ್ದಾರೆ.

ತಮ್ಮ ತಂದೆಯ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಮೋಕ್ಷಾ,ಇಂದಿಗೆ ನಿನ್ನನ್ನು ಕಳೆದುಕೊಂಡು 12 ವರ್ಷಗಳು ಉರುಳಿವೆ. ಆದರೆ, ಎಲ್ಲವೂ ನಿನ್ನೆ ನಡೆದಂತಿದೆ. ಸಮಯ ಎಲ್ಲವನ್ನೂ ಗುಣಪಡಿಸುತ್ತೆ ಅಂತಾರೆ. ಆದರೆ ಕೆಲವು ನೋವುಗಳು ಎಂದಿಗೂ ಮಾಯವಾಗುವುದಿಲ್ಲ, ಅವು ಮೌನವಾಗಿಯೇ ಉಳಿದುಬಿಡುತ್ತವೆ ಎಂದು ಯಾರು ಹೇಳುವುದಿಲ್ಲ ಎಂದಿದ್ದಾರೆ.

ನಾನು ದೊಡ್ಡವಳಾದೆ, ಜೀವನ ಮುಂದುವರಿಯಿತು. ಆದರೆ ನನ್ನೊಳಗಿನ ಒಂದು ಭಾಗ ಇನ್ನೂ ಜನಸ್ತೋಮದಲ್ಲಿ ಸದಾ ನಿಮ್ಮನ್ನು ಹುಡುಕುವ, ಇನ್ನೊಮ್ಮೆ ನೀವು ಮರಳಿ ಬರುತ್ತೀರಾ ಎಂದು ಆಶಿಸುವ ಚಿಕ್ಕ ಹುಡುಗಿಯಂತೆಯೇ ಇದೆ ಎಂದು ಹೇಳಿರುವ ಮೋಕ್ಷಾ ನಿಮಗೆ ಹೇಳಬೇಕಿದ್ದ ವಿಚಾರಗಳು ಎಷ್ಟೋ ಇವೆ, ನಿಮ್ಮ ಜೊತೆಯಲ್ಲಿ ಇರಬೇಕಿದ್ದ ಕ್ಷಣಗಳು ಎಷ್ಟೋ ಇವೆ, ನೀವು ಇದ್ದಿದ್ದರೆ ಜೀವನ ಹೇಗಿರುತ್ತಿತ್ತು ಎಂದು ಎಷ್ಟೋ ಬಾರಿ ಯೋಚಿಸಿದ್ದೇನೆ ಎಂದು ಹೇಳಿದ್ದಾರೆ. ನೀವು ಇದ್ದಿದ್ದರೆ ಬಹುಶಃ ನಾನು ಸ್ವಲ್ಪ ಮೃದುವಾಗಿರುತ್ತಿದ್ದೆ. ಒಂಟಿತನ ಕಾಡುತ್ತಿರಲಿಲ್ಲ ಎಂದು ಬರೆದುಕೊಂಡಿದ್ಧಾರೆ.

The Wound That Stays Quiet Moksha Soul-Stirring Tribute to Her Dad Raghuveer

ಮುಂದುವರೆದು ನಿಮ್ಮ ನಿಮ್ಮ ಧ್ವನಿ, ನಿಮ್ಮ ಉಪಸ್ಥಿತಿ, ನೀವು ಇದ್ದಾಗ ಎಲ್ಲವೂ ಸುರಕ್ಷಿತ ಅನ್ನಿಸುವ ಆ ಭಾವನೆ, ಇದನ್ನೆಲ್ಲ ನಾನು ತುಂಬಾ ಮಿಸ್ ಮಾಡುತ್ತಿದ್ದೇನೆ ಎಂದು ಹೇಳಿರುವ ಮೋಕ್ಷಾ ಈಗ ನೆನಪುಗಳನ್ನು ಹಿಡಿದುಕೊಂಡೇ ಅವು ಸಾಕು ಅಂತ ನಂಬಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

ನೀವು ಇಲ್ಲದೇ 12 ವರ್ಷಗಳು... ಒಂದು ಇಡೀ ಜನ್ಮವೇ ನಿಮ್ಮನ್ನ ಮಿಸ್‌ ಮಾಡ್ಕೊಂಡ ಹಾಗೆ ಅನ್ನಿಸ್ತಿದೆ, ನೀವು ಎಲ್ಲಿದ್ದರೂ, ನನ್ನನ್ನು ನೋಡುತ್ತಿದ್ದೀರಾ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿರುವ ಮೋಕ್ಷಾ, ನೀವು ಕಲಿಸಿದಂತೆ ಇರಲು ನಾನು ಇನ್ನೂ ಪ್ರಯತ್ನಿಸುತ್ತಿದ್ದೇನೆ ಎಂದು ತಮ್ಮ ಬರಹವನ್ನು ಅಂತ್ಯಗೊಳಿಸಿದ್ದಾರೆ.

ಅಂದ್ಹಾಗೇ ''ಶೃಂಗಾರ ಕಾವ್ಯ'' ನಟಿ ಸಿಂಧು ಜೊತೆ ಪ್ರೀತಿಯಲ್ಲಿ ಬಿದ್ದ ರಘುವೀರ್ 1995ರಲ್ಲಿ ವಿವಾಹವಾದರು. ಹತ್ತು ವರ್ಷಗಳ ಕಾಲ ಒಟ್ಟಿಗೆ ದಾಂಪತ್ಯ ನಡೆಸಿದ ಈ ದಂಪತಿಗೆ ಶ್ರೇಯಾ ಎಂಬ ಮಗಳು ಇದ್ದಾರೆ. ಆದರೆ ವಿಧಿಲಿಖಿತ, 2005ರಲ್ಲಿ ನಟಿ ಸಿಂಧು ಅನಾರೋಗ್ಯದಿಂದ ನಿಧನರಾದರು. ಅದಾದ ಮೇಲೆ ರಘುವೀರ್ ತಮ್ಮ ಸಂಬಂಧಿಕರೇ ಆಗಿದ್ದ ಗೌರಿ ಅವರ ಜೊತೆ 2006ರಲ್ಲಿ ಮದುವೆಯಾಗಿದ್ದರು. ಇವರ ಪುತ್ರಿಯೇ ಮೋಕ್ಷಾ ತಂದೆಯ ಕುರಿತು ಮನದ ಮಾತುಗಳನ್ನು ಹಂಚಿಕೊಂಡು ಬಿಕ್ಕಿದ್ದಾರೆ.

English summary
"Twelve years, a lifetime of missing him. Moksha Raghuveer shares a powerful message of love and resilience for her father, the late Kannada actor Raghuveer. 'I’m still trying, just like you taught me.'"
Read more about: raghuveer filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X