ಚಿಕಿತ್ಸೆ ಫಲಕಾರಿಯಾಗದೆ ಕಿರುತೆರೆ ನಟ ಅನಿಲ್ ನಿಧನ
ಖ್ಯಾತ ರಂಗಭೂಮಿ ಹಾಗೂ ಕಿರುತೆರೆ ಕಲಾವಿದ ಅನಿಲ್ ನಿಧನ ಹೊಂದಿದ್ದಾರೆ. ಬಹು ಅಂಗಾಂಗಗಳ ವೈಫಲ್ಯದಿಂದ ಆಸ್ಪತ್ರೆ ಸೇರಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾದರು.
ರಂಗಭೂಮಿ, ಕಿರುತೆರೆ ಹಾಗೂ ಸಿನಿಮಾ ಮೂರು ಕ್ಷೇತ್ರದಲ್ಲಿಯೂ ಅನಿಲ್ ಗುರುತಿಸಿಕೊಂಡಿದ್ದರು. ನಟ ದರ್ಶನ್ ಜೊತೆಗೆ ಸಾಗರದ ಹೆಗ್ಗೋಡಿನ ನೀನಾಸಂನಲ್ಲಿ ರಂಗ ತರಬೇತಿ ಪಡೆದಿದ್ದರು. ಅನಾರೋಗ್ಯದ ಸ್ಥಿತಿಯಲ್ಲಿ ಇದ್ದಾಗ ದರ್ಶನ್ ಸಹಾಯಕ್ಕೆ ಮನವಿ ಮಾಡಿದ್ದರು. ದರ್ಶನ್ ಕೂಡ ಸ್ನೇಹಿತನ ಆರೋಗ್ಯಕ್ಕೆ ನೆರವು ನೀಡಿದ್ದರು.
ಅನೇಕ ದಿನಗಳಿಂದ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಯುತ್ತಿದ್ದ ಅನಿಲ್ ಇಂದು ಕೊನೆಯುಸಿರೆಳೆದಿದ್ದಾರೆ. ಅವರ ನಿಧನಕ್ಕೆ ಕಿರುತೆರೆ ಹಾಗೂ ಚಿತ್ರರಂಗದ ಸ್ನೇಹಿತರು ಸಂತಾಪ ಸೂಚಿಸಿದ್ದಾರೆ. ಮುಂದೆ ಓದಿ...
ಧಾರಾವಾಹಿಗಳಲ್ಲಿ ನಟನೆ
''ಒಟ್ಟು ನನ್ನ ನಿರ್ದೇಶನದ 3 ಪ್ರಮುಖ ಸೀರಿಯಲ್ ಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದ ಮತ್ತು ಟ್ರಾಕ್ ಗಳನ್ನು ಹಂಚಿಕೊಂಡು ಸಂಭಾಷಣೆ ಬರೆಯುತ್ತಿದ್ದ ನನ್ನ 'ಏಕೆ ಹೀಗೆ ನಮ್ಮ ನಡುವೆ' ಧಾರಾವಾಹಿಯಲ್ಲಿ ನನ್ನ ಪಾತ್ರದ ಸಂಭಾಷಣೆ ಮಾತ್ರ ನೀವೆ ಬರೆಯಬೇಕು ಸರ್ ಎಂದು ಆಗ್ರಹಿಸುತ್ತಾ ಮಲೆನಾಡನ್ನು ಎಂಜಾಯ್ ಮಾಡುತ್ತಿದ್ದ ನಟ ಮಿತ್ರ ಅನಿಲ್ ನೀನಾಸಂ ಗೆ ಭಾವಪೂರ್ಣ ಶ್ರದ್ಧಾಂಜಲಿಗಳು.'' - ರಮೇಶ್ ಬೇಗರ್ ಶೃಂಗೇರಿ,
ನೀನಾಸಂ ದಿನಗಳು
''ನೀನಾಸಂ ತಿರುಗಾಟದಲ್ಲಿದ್ದಾಗಲೇ ರತ್ನಳ ಮೂಲಕ ಪರಿಚಯವಾದವನು ಅನಿಲ. ನಂತರದ ದಿನಗಳಲ್ಲಿ ನಮಗೆ ಹತ್ತಿರವಾದ. ನಮ್ಮ ಕೆಲವು ನಾಟಕಗಳಿಗೆ ಲೈಟಿಂಗ್ ಮಾಡಿದ. ನಾವಾಗಾ ತಿಪಟೂರುನಿಂದ ಲೈಟುಗಳನ್ನು ಬಾಡಿಗೆಗೆ ತರುತ್ತಿದ್ದವು. ರತ್ನ ನಮ್ಮ ಶಾಲಾ ಮಕ್ಕಳಿಗೆ ನಾಟಕ ಮಾಡಿಸಿದರೆ ಅನಿಲ ಬೆಳಕಿನ ವ್ಯವಸ್ಥೆ ಮಾಡಿದ್ದ. ಆತನ ಮೂಲಕವೇ ಕೈಲಾಸ್, ಅಚ್ಯುತ, ದೀಪಕ್ ಮುಂತಾದವರೆಲ್ಲ ನಮ್ಮಲ್ಲಿಗೆ ಬಂದರು. ''ಕರಿಯ ಕಣ್ಬಿಟ್ಟ' ಸಿನಿಮಾ ನೋಡಿ ಚೆನ್ನಾಗಿ ಮಾಡಿದ್ದ ಅನಿಲ್ ಎಂದು ಹೇಳಿದಾಗ 'ಸಾರ್ ನನ್ ಸಿನಿಮಾದ ಹೆಂಡ್ತೀರಿಗೆಲ್ಲ ಪ್ರಶಸ್ತಿ ಬರುತ್ತೆ ನನ್ ನಿಜ ಹೆಂಡ್ತೀಗಿನ್ನ ಬಂದಿಲ್ಲ' ಎಂದು ತಮಾಷೆ ಮಾಡಿದ್ದ. ಅನಿಲ ತಿರುಗಾಟ ಮುಗಿಸಿದ್ದಾನೆ ಕಲಾವಿದರು, ಬದುಕು ಎಂಬುದಿದೆ. ಅದರಲ್ಲಿ ನಮ್ಮನ್ನು ನಂಬಿದವರಿರುತ್ತಾರೆ. ಎನ್ನುವುದನ್ನು ಮರೆಯಬಾರದು.'' - ಪ್ರಸಾದ್ ರಕ್ಸಿಡೀ, ರಂಗಕರ್ಮಿ
ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ
''ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಸಾರ್. ಸುದ್ದಿ ಕೇಳಿ ನಮಗೆ ಶಾಕ್ ಆಯ್ತು. ಅನಿಲ್ ಸರ್ 'ಕವಲುದಾರಿ' ಸಿನಿಮಾದಲ್ಲಿ ಒಂದು ಪಾತ್ರ ಮಾಡಿದ್ದರು. ತಮ್ಮ ಪಾತ್ರವನ್ನು ಅವರು ತುಂಬ ಚೆನ್ನಾಗಿ ಮಾಡಿದ್ದರು. ದೇವರು ಅವರ ಕುಟುಂಬಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥನೆ ಮಾಡೋಣ.'' - ರಿಷಿ, ನಟ

'ಮೂಡಲ ಮನೆ' ಮೂಲಕ ಧಾರಾವಾಹಿಗೆ ಪ್ರವೇಶ
'ಮೂಡಲ ಮನೆ' ಅನಿಲ್ ಅವರ ಮೊದಲ ಧಾರಾವಾಹಿಯಾಗಿತ್ತು. ಉಳಿದಂತೆ, ದುನಿಯಾ ವಿಜಯ್ ಅಭಿನಯದ 'ಕರಿಯ ಕಣ್ಬಿಟ್ಟ' ಸಿನಿಮಾದಲ್ಲಿ ನಟಿಸಿದ್ದರು. ಇತ್ತೀಚಿಗೆ ಪುನೀತ್ ರಾಜ್ ಕುಮಾರ್ ನಿರ್ಮಾಣದ 'ಕವಲುದಾರಿ' ಸಿನಿಮಾದಲ್ಲಿಯೂ ಅವರು ಕಾಣಿಸಿಕೊಂಡಿದ್ದರು.


Click it and Unblock the Notifications











