twitter
    For Quick Alerts
    ALLOW NOTIFICATIONS  
    For Daily Alerts

    'ನಷ್ಟ ಸರಿತೂಗಿಸಲು ಸಿನಿಮಾ ಟಿಕೆಟ್ ಬೆಲೆ ಹೆಚ್ಚು ಮಾಡುವುದಿಲ್ಲ'

    |

    ಕೊರೊನಾ ಕಾರಣಕ್ಕೆ ಕಳೆದ ಆರು ತಿಂಗಳಿಗಿಂತಲೂ ಹೆಚ್ಚು ಸಮಯದಿಂದ ಬಂದ್ ಆಗಿದ್ದ ಚಿತ್ರಮಂದಿರಗಳಿಗೆ ಕೊನೆಗೆ ಶಾಪಮುಕ್ತಿ ಆಗಿದೆ. ಅಕ್ಟೋಬರ್ 15 ರಿಂದ ಚಿತ್ರಮಂದಿರಗಳು ಕೆಲವು ಮಾರ್ಗಸೂಚಿಗಳನ್ನು ಅನುಸರಿಸಿ ಕಾರ್ಯ ನಿರ್ವಹಿಸಬಹುದು ಎಂದಿದೆ ಕೇಂದ್ರ ಸರ್ಕಾರ.

    Recommended Video

    ಚಿತ್ರಮಂದಿರಕ್ಕೆ ಎಂಟ್ರಿ ಕೊಡೋಕೆ ಮುಂಚೆ ಈ ಸ್ಟೋರಿ ನೋಡಿ | Filmibeat Kannada

    ಆದರೆ ಚಿತ್ರಮಂದಿರಗಳು ತೆರೆಯುವುದು ಅಷ್ಟು ಸುಲಭದ ಕಾರ್ಯವೂ ಆಗಿಲ್ಲ. ಚಿತ್ರಮಂದಿರಗಳು ಪುನರ್‌ ಪ್ರಾರಂಭಗೊಳ್ಳುವ ಮುನ್ನಾ ಸಾಕಷ್ಟು ತಯಾರಿ, ಸಾಕಷ್ಟು ಗೊಂದಲುಗಳು ಪರಿಹಾರವಾಗಬೇಕಿವೆ. ಈ ಬಗ್ಗೆ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ, ವೀರೇಶ್ ಹಾಗೂ ವಿಶಾಲ್ ಚಿತ್ರಮಂದಿರದ ಮಾಲೀಕ ಕೆ.ವಿ.ಚಂದ್ರಶೇಖರ್ ಅವರು 'ಫಿಲ್ಮೀಬೀಟ್' ಜೊತೆಗೆ ಮಾತನಾಡಿದ್ದಾರೆ.

    ಚಿತ್ರಮಂದಿರ ತೆರೆದರೂ ದೊಡ್ಡ ಬಜೆಟ್ ಚಿತ್ರಗಳು ಬಿಡುಗಡೆ ಆಗಲ್ಲ, ಕಾರಣ ಇಲ್ಲಿದೆ!ಚಿತ್ರಮಂದಿರ ತೆರೆದರೂ ದೊಡ್ಡ ಬಜೆಟ್ ಚಿತ್ರಗಳು ಬಿಡುಗಡೆ ಆಗಲ್ಲ, ಕಾರಣ ಇಲ್ಲಿದೆ!

    'ಕೇಂದ್ರವು ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ನೀಡಿರುವುದು ಸ್ವಾಗತಾರ್ಹ ಬೆಳವಣಿಗೆ. ಜುಲೈನಲ್ಲಿಯೇ ಇಂಥಹಾ ಒಂದು ಆದೇಶವನ್ನು ನಿರೀಕ್ಷೆ ಮಾಡಿದ್ದೆವು, ಆದರೆ ಅದು ತುಸು ತಡವಾಗಿ ಅನುಮತಿ ನೀಡಲಾಗಿದೆ' ಎಂದರು ಚಂದ್ರಶೇಖರ್.

    'ಚಿತ್ರಮಂದಿರ ಮಾಲೀಕರ ಮುಂದೆ ಹಲವು ಸವಾಲುಗಳಿವೆ'

    'ಚಿತ್ರಮಂದಿರ ಮಾಲೀಕರ ಮುಂದೆ ಹಲವು ಸವಾಲುಗಳಿವೆ'

    ಚಿತ್ರಮಂದಿರಗಳು ತೆರೆಯಲು ಸರ್ಕಾರ ಅವಕಾಶವನ್ನೇನೋ ನೀಡಿದೆ. ಆದರೆ ಪ್ರೇಕ್ಷಕರ ಭಯಗ್ರಸ್ತ ಮನಸ್ಥಿತಿಯನ್ನು ತಿಳಿಗೊಳಿಸಿ, ಆತನಿಗೆ ಸುರಕ್ಷತೆ ಭಾವ ಮೂಡಿಸಿ, ಚಿತ್ರಮಂದಿರದ ಒಳಕ್ಕೆ ಅಡಿಯಿಡುವಂತೆ ಮಾಡುವುದು ಚಿತ್ರಮಂದಿರಗಳ ಮಾಲೀಕರ ಮುಂದಿರುವ ಸಧ್ಯದ ಸವಾಲು. ಇದು ಸುಲಭದ ಸವಾಲಂತೂ ಅಲ್ಲ' ಎಂದರು ಪ್ರಸ್ತುತ ಸ್ಥಿತಿ ವಿಶ್ಲೇಷಿಸಿದರು ಚಂದ್ರಶೇಖರ್.

    ನಷ್ಟದ ಹೊರೆಯನ್ನು ಜನರ ಮೇಲೆ ಹೊರಿಸುವುದಿಲ್ಲ: ಚಂದ್ರಶೇಖರ್

    ನಷ್ಟದ ಹೊರೆಯನ್ನು ಜನರ ಮೇಲೆ ಹೊರಿಸುವುದಿಲ್ಲ: ಚಂದ್ರಶೇಖರ್

    ಏಳು ತಿಂಗಳ ಕಾಲ ಶೂನ್ಯ ಆದಾಯದ ಜೊತೆಗೆ ನಷ್ಟವನ್ನೂ ಚಿತ್ರಮಂದಿರಗಳ ಮಾಲೀಕರು ಕಂಡಿದ್ದಾರೆ. ಹಾಗೆಂದು ನಮ್ಮ ನಷ್ಟ ತುಂಬಿಕೊಳ್ಳಲು ಟಿಕೆಟ್ ದರ ಹೆಚ್ಚಿಸಿ, ಈಗಾಗಲೇ ಸಂಕಷ್ಟದಲ್ಲಿರುವ ಜನರ ಮೇಲೆ ಹೊರೆ ಹಾಕುವುದಿಲ್ಲ. ನಾವುಗಳು ನಷ್ಟಪಟ್ಟಂತೆ ಜನರೂ ಸಹ ನಷ್ಟಹೊಂದಿದ್ದಾರೆ. ಈ ಸಮಯದಲ್ಲಿ ಅವರ ಮೇಲೆ ನಮ್ಮ ನಷ್ಟದ ಹೊರೆ ಹಾಕುವುದು ಸೂಕ್ತವಲ್ಲ ಎಂಬುದು ನಮ್ಮ ಅಭಿಪ್ರಾಯ' ಎನ್ನುವ ಮೂಲಕ ಟಿಕೆಟ್ ದರ ಹೆಚ್ಚಿಸುವುದಿಲ್ಲ ಎಂದರು ಅವರು.

    ಚಿತ್ರಮಂದಿರ ತೆರೆಯಲು ಅವಕಾಶ: ಗೊಂದಲಗಳಿವೆ ಎಂದ ಫಿಲ್ಮಚೇಂಬರ್ ಅಧ್ಯಕ್ಷ ಜಯರಾಜ್ಚಿತ್ರಮಂದಿರ ತೆರೆಯಲು ಅವಕಾಶ: ಗೊಂದಲಗಳಿವೆ ಎಂದ ಫಿಲ್ಮಚೇಂಬರ್ ಅಧ್ಯಕ್ಷ ಜಯರಾಜ್

    ಸಣ್ಣ ವಿನಾಯಿತಿಯನ್ನಷ್ಟೆ ಸರ್ಕಾರದ ಬಳಿ ಕೇಳಿದ್ದೇವೆ: ಚಂದ್ರಶೇಕರ್

    ಸಣ್ಣ ವಿನಾಯಿತಿಯನ್ನಷ್ಟೆ ಸರ್ಕಾರದ ಬಳಿ ಕೇಳಿದ್ದೇವೆ: ಚಂದ್ರಶೇಕರ್

    'ಕೊರೊನಾ ಕಾರಣಕ್ಕೆ ಸರ್ಕಾರವೂ ಸಹ ಆರ್ಥಿಕ ಸಂಕಷ್ಟದಲ್ಲಿದೆ, ಹಾಗಾಗಿ ಅವರನ್ನೂ ನಾವು ಸಹಾಯ ಕೇಳದ ಸ್ಥಿತಿ. ಹಾಗಾಗಿ ಎಲೆಕ್ರ್ಟಿಕ್ ಹಾಗೂ ನೀರು ಬಳಕೆಯ ಕನಿಷ್ಟ ದರವನ್ನು ಕೈಬಿಡಬೇಕು ಎಂದಷ್ಟೆ ನಾವು ಮನವಿ ಸಲ್ಲಿಸಿದ್ದೇವೆ. ನಾವು ವಿದ್ಯುತ್ ಅನ್ನು ಹಾಗೂ ನೀರನ್ನು ಕಳೆದ ಏಳು ತಿಂಗಳು ಬಳಸಿಯೇ ಇಲ್ಲ, ಹಾಗಿದ್ದ ಮೇಲೆ ಕನಿಷ್ಟ ದರ ಕೊಡುವುದರಲ್ಲಿ ಅರ್ಥವಿಲ್ಲ, ಹಾಗಾಗಿ ಆ ಎರಡಕ್ಕೂ ವಿನಾಯಿತಿ ನೀಡುವಂತೆ ಮನವಿ ಮಾಡಿದ್ದೇವೆ' ಎಂದು ಹೇಳಿದರು ಚಂದ್ರಶೇಖರ್.

    ಹಣ ಹಂಚಿಕೆ ವಿಚಾರದಲ್ಲಿ ಚರ್ಚೆ ನಡೆಯಬೇಕಿದೆ: ಕೆವಿ ಚಂದ್ರಶೇಖರ್

    ಹಣ ಹಂಚಿಕೆ ವಿಚಾರದಲ್ಲಿ ಚರ್ಚೆ ನಡೆಯಬೇಕಿದೆ: ಕೆವಿ ಚಂದ್ರಶೇಖರ್

    '50% ಪ್ರೇಕ್ಷಕರಿಗಷ್ಟೆ ಅವಕಾಶ ನೀಡಲಾಗಿದೆ. ಹೀಗಿದ್ದಾಗ ಸಿನಿಮಾ ಪ್ರದರ್ಶನದಿಂದ ಎಷ್ಟು ಲಾಭ ಬರುತ್ತದೆ ಎಂಬುದು ಮಾಲೀಕರಿಗೆ ಅಂದಾಜಾಗುವುದಿಲ್ಲ. ಹಾಗಾಗಿ ನಿರ್ಮಾಪಕರೊಂದಿಗೆ ಪೂರ್ವಭಾವಿಯಾಗಿ ಮಾತನಾಡಿ, ಹಣ ಹಂಚಿಕೆ ವಿಷಯದ ಚರ್ಚೆ ಮಾಡಿಕೊಳ್ಳಬೇಕು. ಸಹಕಾರ-ಸಹಾನುಭೂತಿ ಆಧಾರದಲ್ಲಿ ಈ ಚರ್ಚೆ ನಡೆಯಬೇಕು' ಎಂದು ವಾಸ್ತವ ವಿಶ್ಲೇಷಿಸಿದರು ಚಂದ್ರಶೇಖರ್.

    ಅಕ್ಟೋಬರ್ 15ಕ್ಕೆ ಥಿಯೇಟರ್ ಓಪನ್: ಯಾವ ಸ್ಟಾರ್ಸ್ ಚಿತ್ರಗಳು ರೆಡಿಯಿದೆ?ಅಕ್ಟೋಬರ್ 15ಕ್ಕೆ ಥಿಯೇಟರ್ ಓಪನ್: ಯಾವ ಸ್ಟಾರ್ಸ್ ಚಿತ್ರಗಳು ರೆಡಿಯಿದೆ?

    'ಪ್ರೇಕ್ಷಕನಿಗೆ ಸುರಕ್ಷತಾ ಭಾವ ಮೂಡಿಸುವ ಜವಾಬ್ದಾರಿ ಮಾಲೀಕರದ್ದು'

    'ಪ್ರೇಕ್ಷಕನಿಗೆ ಸುರಕ್ಷತಾ ಭಾವ ಮೂಡಿಸುವ ಜವಾಬ್ದಾರಿ ಮಾಲೀಕರದ್ದು'

    'ಇನ್ನು ಚಿತ್ರಮಂದಿರಗಳು ಕಡ್ಡಾಯವಾಗಿ ಸ್ಯಾನಿಟೈಸ್ ಮಾಡಲೇಬೇಕು, ಮಾಸ್ಕ್ ಧರಿಸಿದ ಪ್ರೇಕ್ಷಕನಿಗಷ್ಟೆ ಟಿಕೆಟ್ ವಿತರಿಸಬೇಕು, ಸೀಟುಗಳ ನಡುವೆ ಅಂತರ ಕಾಪಾಡುವಂತೆ ನೋಡಿಕೊಳ್ಳಬೇಕು, ಸರ್ಕಾರದಿಂದ ಇನ್ನಾವುದೇ ಮಾರ್ಗಸೂಚಿ ಬಂದರೂ ಅದನ್ನು ಪಾಲನೆ ಮಾಡಿ, ಪ್ರೇಕ್ಷಕನಿಗೆ ಸುರಕ್ಷಿತ ಭಾವ ಮೂಡಿಸಬೇಕು' ಎಂದರು ಚಂದ್ರಶೇಖರ್.

    English summary
    Theater association president KV Chandrashekhar talk about re opening of theaters and its problems need to address.
    Thursday, October 1, 2020, 17:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X