For Quick Alerts
  ALLOW NOTIFICATIONS  
  For Daily Alerts

  ಪದೇ ಪದೇ ಆಗುವ ಈ ಅನ್ಯಾಯಕ್ಕೆ ಕೊನೆ ಯಾವಾಗ?

  |

  ಈ ಸಮಸ್ಯೆ ಬೇರೆ ಯಾವ ರಾಜ್ಯದಲ್ಲೂ ಇಲ್ಲ. ನಮ್ಮಲ್ಲಿ ಮಾತ್ರ ಈ ಸಮಸ್ಯೆ ಪದೇ ಪದೇ ಎದುರಾಗುತ್ತೆ. ಪ್ರತಿ ಬಾರಿಯೂ ಪರಭಾಷೆಯಲ್ಲೊಂದು ದೊಡ್ಡ ಸಿನಿಮಾ ಬಂದ್ರೆ ಕರ್ನಾಟಕದಲ್ಲಿ ಕನ್ನಡ ಚಿತ್ರಗಳು ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತೆ.

  ಸಾಮಾನ್ಯವಾಗಿ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ನಟರ ಚಿತ್ರಗಳು ಬಂದಾಗ, ಹೊಸಬರು ಸಿನಿಮಾಗಳ ಬಿಡುಗಡೆ ಹಿಂದಕ್ಕೆ ಮುಂದಕ್ಕೆ ಹೋಗುತ್ತೆ. ಹೋಗುವುದರಲ್ಲೂ ಒಂದು ಲೆಕ್ಕಾಚಾರ ಇದೆ. ಆದರೆ ಪರಭಾಷೆಯ ಚಿತ್ರ ಬಂದಾಗಲೂ ಇದೇ ಟ್ರೆಂಡ್ ಅನುಕರಣೆ ಮಾಡಬೇಕು ಅಂದ್ರೆ ಹೇಗೆ?

  Sahoo Review: ಹೊಗಳಿಕೆಗಿಂತ ತೆಗಳಿಕೆಯೇ ಹೆಚ್ಚುSahoo Review: ಹೊಗಳಿಕೆಗಿಂತ ತೆಗಳಿಕೆಯೇ ಹೆಚ್ಚು

  Recommended Video

  ಹೇಗಿದೆ ಗೊತ್ತಾ ಸಾಹೋ ಸಿನಿಮಾ..? | saaho | FILMIBEAT KANNADA

  ಇಂದು ಬಿಡುಗಡೆಯಾದ ಸಾಹೋ ಸಿನಿಮಾದಿಂದ ಕನ್ನಡದ ಕೆಲವು ಚಿತ್ರಗಳಿಗೆ ಹೊಡೆತ ಬಿದ್ದಿದೆ. ಚಿತ್ರಮಂದಿರಗಳ ಸಂಖ್ಯೆ ಕಡಿಮೆ ಆಗಿದೆ. ಉತ್ತಮ ಪ್ರತಿಕ್ರಿಯೆ ಸಿಕ್ಕಿದರೂ ಥಿಯೇಟರ್ ನಿಂದ ಸಿನಿಮಾ ಎತ್ತಂಗಡಿ ಆಗಿದೆ. ಮುಂದೆ ಓದಿ...

  'ನನ್ನ ಪ್ರಕಾರ' ಕಿಕ್ ಔಟ್

  'ನನ್ನ ಪ್ರಕಾರ' ಕಿಕ್ ಔಟ್

  ಕಳೆದ ಶುಕ್ರವಾರ ತೆರೆಕಂಡ 'ನನ್ನ ಪ್ರಕಾರ' ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಸಿನಿಮಾ ಚೆನ್ನಾಗಿದೆ ಅಂದಾಗ ಸಹಜವಾಗಿ ಚಿತ್ರಮಂದಿರಗಳ ಸಂಖ್ಯೆ ಹೆಚ್ಚಾಗುತ್ತೆ. ಆದರೆ ಸಾಹೋ ಬಂದ ಪರಿಣಾಮ ನನ್ನ ಪ್ರಕಾರ ಪ್ರದರ್ಶನವಾಗುತ್ತಿದ್ದ ಬಹುತೇಕ ಚಿತ್ರಮಂದಿರಗಳಿಂದ ಕಿಕ್ ಔಟ್ ಆಗಿದೆ.

  ಮೂರು ಚಿತ್ರಮಂದಿರದಲ್ಲಿ 'ನನ್ನ ಪ್ರಕಾರ'

  ಮೂರು ಚಿತ್ರಮಂದಿರದಲ್ಲಿ 'ನನ್ನ ಪ್ರಕಾರ'

  ಆಗಸ್ಟ್ 30 ರಂದು ಬುಕ್ ಮೈ ಶೋನಲ್ಲಿ ಚೆಕ್ ಮಾಡಿ ನೋಡಿದ್ರೆ ಕೇವಲ ಮೂರು ಚಿತ್ರಮಂದಿರದಲ್ಲಿ ಮಾತ್ರ ನನ್ನ ಪ್ರಕಾರ ಪ್ರದರ್ಶನ ಕಾಣ್ತಿದೆ. ಸಿನಿಪೋಲಿಸ್ ನಲ್ಲಿ ಒಂದು ಶೋ, ಒರೆಯಾನ್ ಮಾಲ್ ನಲ್ಲಿ ಒಂದು ಶೋ ಮತ್ತು ಮೆಜೆಸ್ಟಿಕ್ ಮುಖ್ಯಚಿತ್ರಮಂದಿರದಲ್ಲಿ ನಾಲ್ಕು ಶೋ ನಡೆಯುತ್ತಿದೆ.

  Saaho Twitter Review: ಪ್ರಭಾಸ್ ಇಷ್ಟ, ಸಾಹೋ ನೋಡೋಕೆ ಕಷ್ಟSaaho Twitter Review: ಪ್ರಭಾಸ್ ಇಷ್ಟ, ಸಾಹೋ ನೋಡೋಕೆ ಕಷ್ಟ

  ಕುರುಕ್ಷೇತ್ರಕ್ಕೂ ಸಮಸ್ಯೆ

  ಕುರುಕ್ಷೇತ್ರಕ್ಕೂ ಸಮಸ್ಯೆ

  ಹಾಗ್ನೋಡಿದ್ರೆ ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರಕ್ಕೂ ಇದರಿಂದ ಸಮಸ್ಯೆ ಆಗಿದೆ. ಸಾಹೋ ಆಗಮನದ ಕಾರಣಕ್ಕಾಗಿ ಕುರುಕ್ಷೇತ್ರ ಪ್ರದರ್ಶನವಾಗುತ್ತಿದ್ದ ಹಲವು ಚಿತ್ರಮಂದಿರಗಳು ಡಿ ಬಾಸ್ ಚಿತ್ರಕ್ಕೆ ಕೋಕ್ ಕೊಟ್ಟು ಸಾಹೋ ಪ್ರದರ್ಶಿಸಿದೆ.

  ಇದು ಬಗೆಹರಿಯದ ಸಮಸ್ಯೆ

  ಇದು ಬಗೆಹರಿಯದ ಸಮಸ್ಯೆ

  ಈ ಹಿಂದೆ ಬಾಹುಬಲಿ ಬಂದಾಗಲೂ ಇಂತಹ ಸಮಸ್ಯೆ ಎದುರಾಗಿತ್ತು. ಕಬಾಲಿ ಬಂದಾಗಲೂ ಆಗಿತ್ತು. ಕಾಲ ಚಿತ್ರ ಬಂದಾಗಲೂ ಇಂತಹದ್ದೇ ಸಮಸ್ಯೆ ಈಗ ಸಾಹೋ ಚಿತ್ರ ಬಂದಾಗಲೇ ಮತ್ತದೇ ಸಮಸ್ಯೆ. ಮುಂದಿನ ದಿನಗಳಲ್ಲು ಇಂತಹ ಸಂಕಷ್ಟ ಎದುರಾಗುತ್ತೆ. ಆಗಲೂ, ಕನ್ನಡ ಇಂಡಸ್ಟ್ರಿ ಸುಮ್ಮನೆ ಕೂತಿರುತ್ತೆ.

  English summary
  Telugu movie saaho released in huge numbers screens at karnataka. so, kannada movies facing theater problem.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X