twitter
    For Quick Alerts
    ALLOW NOTIFICATIONS  
    For Daily Alerts

    777 ಚಾರ್ಲಿ: ಶ್ವಾನ ಪ್ರೇಮ ಕುರಿತಾದ ಸಿನಿಮಾ ನೋಡಲು ಶ್ವಾನಗಳಿಗೆ ಇಲ್ಲ ಅನುಮತಿ!

    By ದಾವಣಗೆರೆ ಪ್ರತಿನಿಧಿ
    |

    ರಕ್ಷಿತ್ ಶೆಟ್ಟಿ ಅಭಿನಯದ '777 ಚಾರ್ಲಿ' ಸಿನಿಮಾ ಎಲ್ಲರ ಮನ ಗೆದ್ದಿದೆ. ಈ ಸಿನಿಮಾದಲ್ಲಿರುವ ಶ್ವಾನ ಈಗ ಎಲ್ಲರ ಅಚ್ಚುಮೆಚ್ಚು. ಸಿನಿಮಾದಲ್ಲಿ ಕಾಣಿಸಿಕೊಂಡಿರುವ ನಾಯಿ ಚಾರ್ಲಿ ನಟನೆಗೆ ಸಿನಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಇನ್ನು ಶ್ವಾನ ಸಾಕುವ, ಪ್ರೀತಿಸುವವರು ಥಿಯೇಟರ್ ನತ್ತ ಬರುತ್ತಿದ್ದಾರೆ.

    ಕೆಲವರಂತೂ ತಾವು ಸಾಕುತ್ತಿರುವ ಮುದ್ದಿನ ಶ್ವಾನದ ಜೊತೆ ಚಿತ್ರಮಂದಿರಗಳಿಗೆ ಬಂದು ಚಿತ್ರ ವೀಕ್ಷಣೆ ಮಾಡಲು ತುದಿಗಾಲ ಮೇಲೆ ನಿಂತಿದ್ದಾರೆ. ಆದ್ರೆ, ದಾವಣಗೆರೆಯ ಗೀತಾಂಜಲಿ ಚಿತ್ರಮಂದಿರಕ್ಕೆ ತನ್ನ ಮುದ್ದಿನ "ಡಯಾನ'' ಜೊತೆ ಆಗಮಿಸಿದ್ದ ಮಾಲೀಕನಿಗೆ ಸಿನಿಮಾ ನೋಡಲು ಅನುಮತಿ ಸಿಕ್ಕಿಲ್ಲ.

    ದಾವಣಗೆರೆ ನಗರದ ಗೀತಾಂಜಲಿ ಚಿತ್ರಮಂದಿರದಲ್ಲಿ ಕೆಂಚ ಎಂಬುವವರು ಆನ್ ಲೈನ್ ನಲ್ಲಿ ಚಾರ್ಲಿ ಚಿತ್ರ ವೀಕ್ಷಿಸಲು ಮೂರು ಟಿಕೆಟ್ ಗಳನ್ನು ಬುಕ್ ಮಾಡಿದ್ದರು. ಅದರಂತೆ ಬೆಳಗಿನ ಶೋ ವೀಕ್ಷಿಸಲು ಬಂದಿದ್ದರು. ಹಸನ್ ಎಂಬುವವರೂ ಸಹ ತಾವು ಸಾಕುತ್ತಿರುವ ಶ್ವಾನದ ಜೊತೆ ಸಿನಿಮಾ ವೀಕ್ಷಿಸಲು ಬಂದಾಗ ಪ್ರವೇಶ ನಿರಾಕರಿಸಲಾಗಿದೆ.

    ಪ್ರತಿಭಟನೆ ನಡೆಸಿದ ಶ್ವಾನ ಪ್ರಿಯರು

    ಪ್ರತಿಭಟನೆ ನಡೆಸಿದ ಶ್ವಾನ ಪ್ರಿಯರು

    ಇದರಿಂದ ಆಕ್ರೋಶಗೊಂಡ ಕೆಂಚ ಹಾಗೂ ಹಸನ್ ಅವರು ಚಿತ್ರಮಂದಿರದ ಮುಂದೆ ತಮ್ಮ ಶ್ವಾನಗಳ ಜೊತೆ ಪ್ರತಿಭಟನೆ ನಡೆಸಿದರು. ಸಿನಿಮಾದ ಟ್ರೇಲರ್ ನಲ್ಲಿ ಕೆಲವು ಸೀನ್‌ ನೋಡಿದಾಗ ತುಂಬಾ ಖುಷಿಯಾಯಿತು. ಚಾರ್ಲಿ ಸಿನಿಮಾ ತುಂಬಾ ಇಷ್ಟ ಆಗಿದೆ. ಆದ್ರೆ ನಾಯಿ ಜೊತೆ ಹೋಗಿ ಸಿನಿಮಾ ವೀಕ್ಷಿಸಲಾಗಲಿಲ್ಲ ಎಂದು ಬೇಸರವಾಗಿದೆ. ಡಯಾನಾ ಜೊತೆ ನೋಡಬೇಕೆಂಬ ಆಸೆ ಇತ್ತು. ಶ್ವಾನಕ್ಕೂ ಮನರಂಜನೆ ಸಿಗುತಿತ್ತು. ಆದ್ರೆ ಇದಕ್ಕೆ ಅವಕಾಶ ಕೊಡದಿರುವುದು ಆಘಾತ ತಂದಿದೆ ಎಂದು ಕೆಂಚ ಪ್ರತಿಕ್ರಿಯೆ ನೀಡಿದರು.

    'ಡಯಾನಾ 777' ಎಂದು ನಾಮಕರಣ ಮಾಡುವ ಇಂಗಿತ

    'ಡಯಾನಾ 777' ಎಂದು ನಾಮಕರಣ ಮಾಡುವ ಇಂಗಿತ

    ಚಾರ್ಲಿ ಪೆಟ್ ಲವರ್ಸ್ ಆಧಾರಿತ ಸಿನೆಮಾ ಆಗಿದ್ದರಿಂದ ತನ್ನ ಶ್ವಾನಕ್ಕೆ ಸಿನಿಮಾ ನೋಡುವ ಉತ್ಸಾಹಕ್ಕೆ ತಡೆಯಾಗಿದೆ.‌ ಸಿನಿಮಾ ನೋಡಿದ ನಂತರ ಸಿನಿಮಾ ಪ್ರೇಕ್ಷಕರಿಗೆ ಸಿಹಿ ಹಂಚಿ ಬಳಿಕ "ಡಯಾನಾ 777'' ಎಂದು ಹೆಸರಿಡಲು ನಿರ್ಧರಿಸಿದ್ದೆ. ಜಿಲ್ಲಾಧಿಕಾರಿಯವರ ಅನುಮತಿ ತೆಗೆದುಕೊಂಡು ಸಿನಿಮಾ ತೋರಿಸುತ್ತೇವೆ ಎಂದು ಕೆಂಚ ಹೇಳಿದರು.

    ನಾಯಿಗಳ ಮಾಲೀಕರ ಅಳಲು

    ನಾಯಿಗಳ ಮಾಲೀಕರ ಅಳಲು

    ನಮಗೂ ಸಿನಿಮಾ ನೋಡುವ ಆಸೆ ಇದೆ. ಡಯಾನಗೂ ಅಷ್ಟೇ. ನಾಯಿ ಯಾರಿಗೂ ಕಡಿಯುವುದಿಲ್ಲ. ಎಸ್ ಎಸ್ ಮಾಲ್ ನಲ್ಲಿಯೂ ಸಿನಿಮಾದ ಟಿಕೆಟ್ ಬುಕ್ ಮಾಡಿದ್ದೇವೆ. ಅಲ್ಲಿಗೆ ಹೋಗುತ್ತೇವೆ. ಪ್ರಾಣಿ, ಪಕ್ಷಿಗಳನ್ನು ಒಳಗಡೆ ಬಿಡುವುದಿಲ್ಲ ಎಂಬ ಡಿಸಿ ಆದೇಶ ಹಿನ್ನೆಲೆಯಲ್ಲಿ ಬಿಡಲು ಆಗದು ಎಂದು ಚಿತ್ರಮಂದಿರದ ಮಾಲೀಕರು ಹೇಳಿದ್ದಾರೆ. ಡಯಾನಾ ಹೆಸರಿನಲ್ಲಿಯೂ ಟಿಕೆಟ್ ಬುಕ್ ಮಾಡಿದ್ದೇನೆ. ಬಾಲ್ಕನಿ ಬುಕ್ ಮಾಡಲಿಲ್ಲ. ಅಲ್ಲಿ ಪ್ರತಿಷ್ಠಿತರು ಕೂರುವುದರಿಂದ ಅವರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಮುಂಗಡವಾಗಿ ಟಿಕೆಟ್ ಕಾಯ್ದಿರಿಸಲಿಲ್ಲ. ಕೆಳಗಡೆ ಹೋದರೆ ಜನರು ಭಯಪಡುವುದಿಲ್ಲವೆಂದು ಬುಕ್ ಮಾಡಿದ್ದೇನೆ. ಗಾಂಧಿ ಕ್ಲಾಸ್ ನ ಮುಂಭಾಗದಲ್ಲಿ ಕುಳಿತು ನೋಡಬೇಕೆಂಬ ಆಸೆ ಇತ್ತು. ಈಡೇರದಿರುವುದು ತುಂಬಾನೇ ಬೇಸರ ತಂದಿದೆ ಎಂದು ಹೇಳಿದರು.

    ಶ್ವಾನ ಪ್ರೇಮದ ಬಗ್ಗೆ ಸಿನಿಮಾ

    ಶ್ವಾನ ಪ್ರೇಮದ ಬಗ್ಗೆ ಸಿನಿಮಾ

    ಕಿರಣ್ ರಾಜ್ ನಿರ್ದೇಶಿಸಿ, ರಕ್ಷಿತ್ ಶೆಟ್ಟಿ ನಟಿಸಿರುವ '777 ಚಾರ್ಲಿ' ಸಿನಿಮಾ ನಾಯಿ ಹಾಗೂ ಮನುಷ್ಯನ ನಡುವಿನ ಸಂಬಂಧದ ಕುರಿತು ಕತೆ ಹೊಂದಿದೆ. ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಹಾಗೂ ನಾಯಿಯ ನಡುವಿನ ಬಂಧನವನ್ನು ತೋರಿಸಲಾಗಿದೆ. ಸಿನಿಮಾದ ಪ್ರಚಾರದ ವೇಳೆ ಸಹ ನಾಯಿಯನ್ನು ಜೊತೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಈಗ ಶ್ವಾನ ಪ್ರಿಯರು ತಮ್ಮ ನಾಯಿಗೆ ಸಿನಿಮಾ ತೋರಿಸುವ ಆಸೆಗೆ ಮಾತ್ರ ಚಿತ್ರಮಂದಿರಗಳು ಅವಕಾಶ ನೀಡುತ್ತಿಲ್ಲ.

    English summary
    Theaters in Davangere did not allowed dongs into the theater to watch 777 Charlie movie along with their owners. Pet lovers protested.
    Sunday, June 12, 2022, 17:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X