twitter
    For Quick Alerts
    ALLOW NOTIFICATIONS  
    For Daily Alerts

    ಆಗಸ್ಟ್‌ 1 ರಿಂದ ಚಿತ್ರಮಂದಿರಗಳು ಓಪನ್: ದಟ್ಟ ಸಾಧ್ಯತೆ

    |

    ಕೊರೊನಾ ಜೊತೆಗೆ ಜೀವಿಸುವುದು ಕಲಿಯಬೇಕಿದೆ ಎಂದು ಸರ್ಕಾರವೇ ಹೇಳುತ್ತಿದೆ. ಹಾಗಾಗಿ ಕೊರೊನಾ ಉಚ್ರಾಯದಲ್ಲಿದ್ದರೂ ಲಾಕ್‌ಡೌನ್ ಗೆ ಕೈಹಾಕುತ್ತಿಲ್ಲ ಸರ್ಕಾರಗಳು, ಬದಲಿಗೆ ಹಂತಹಂತವಾಗಿ ಅನ್‌ಲಾಕ್ ಮಾಡಲಾಗುತ್ತಿದೆ.

    Recommended Video

    ದರ್ಶನ್ ಅಭಿಮಾನಿಗಳು ಫುಲ್ ಹ್ಯಾಪಿ | Roberrt Poster | Filmibeat Kannada

    ಕೊರೊನಾ ದಿಂದಾಗಿ ಭಾರಿ ದೊಡ್ಡ ಪೆಟ್ಟು ತಿಂದಿದ್ದು ಚಿತ್ರೋದ್ಯಮ. ಚಿತ್ರೀಕರಣ, ಚಿತ್ರಮಂದಿರಗಳು ದೇಶದಾದ್ಯಂತ ಅಧಿಕೃತ ಲಾಕ್‌ಡೌನ್ ಘೋಷಣೆಗೆ ಮುನ್ನವೇ ಸ್ಥಗಿತಗೊಳಿಸಲಾಗಿತ್ತು.

    ಚಿತ್ರಮಂದಿರ ತೆರೆಯಲು ಶಿಫಾರಸು: ಆದರೂ ಸಿನಿಮಾ ಹಾಲ್ ಮಾಲೀಕರ ಅಸಮಾಧಾನಚಿತ್ರಮಂದಿರ ತೆರೆಯಲು ಶಿಫಾರಸು: ಆದರೂ ಸಿನಿಮಾ ಹಾಲ್ ಮಾಲೀಕರ ಅಸಮಾಧಾನ

    ಬಹುತೇಕ ಉದ್ಯಮಗಳು ನಿಯಮಗಳನ್ವಯ ಪುನರ್‌ಪ್ರಾರಂಭವಾಗಿದೆಯಾದರೂ ಚಿತ್ರಮಂದಿರಗಳು ಮಾತ್ರ ಇನ್ನೂ ತೆರೆಯಲಾಗಿರಲಿಲ್ಲ. ಚಿತ್ರಮಂದಿರಗಳ ಮಾಲೀಕರು ಬಹುದೊಡ್ಡ ಆರ್ಥಿಕ ಪೆಟ್ಟು ತಿಂದಿದ್ದರು, ಆದರೆ ಈಗ ಭರವಸೆಯ ಬೆಳಕೊಂದು ಕಾಣಿಸಿಕೊಂಡಿದ್ದು, ಚಿತ್ರಮಂದಿರಗಳು ತೆರೆಯುವ ಮುನ್ಸೂಚನೆ ದೊರೆತಿದೆ.

    ಆಗಸ್ಟ್‌ 1 ರಿಂದ ಚಿತ್ರಮಂದಿರಗಳು ಓಪನ್!

    ಆಗಸ್ಟ್‌ 1 ರಿಂದ ಚಿತ್ರಮಂದಿರಗಳು ಓಪನ್!

    ನಂಬಲರ್ಹವಾದ ಮೂಲಗಳ ಪ್ರಕಾರ ಅನ್‌ಲಾಕ್‌ 3.0 ಭಾಗವಾಗಿ ಆಗಸ್ಟ್‌ 1 ರಿಂದ ಚಿತ್ರಮಂದಿರಗಳು ತೆರೆಯಲು ಅನುಮತಿ ನೀಡಲಾಗುತ್ತದೆಯಂತೆ. ಆದರೆ ಕೆಲವು ನಿಯಮಗಳನ್ನು ಸಹ ವಿಧಿಸಲಾಗುತ್ತದೆಯಂತೆ. ಆಗಸ್ಟ್‌ 1 ರಿಂದಲೇ ಚಿತ್ರಮಂದಿರ ತೆರೆಯಲು ಅನುಮತಿ ನೀಡಲಾಗುತ್ತದೆಯೇ? ಅಥವಾ ಎಂದಿನಿಂದ ಚಿತ್ರಮಂದಿರ ತೆರೆಯಬಹುದು ಎಂಬ ಮಾಹಿತಿಯನ್ನು ಆಗಸ್ಟ್ 1 ರಿಂದ ನೀಡಲಾಗುತ್ತದೆಯೇ ಎಂಬ ಬಗ್ಗೆ ತುಸು ಅಸ್ಪಷ್ಟತೆ ಇದೆ.

    ಜಿಮ್ ಮತ್ತು ಚಿತ್ರಮಂದಿರ ತೆರೆಯಲು ಉತ್ಸುಕವಾಗಿದೆ ಸರ್ಕಾರ

    ಜಿಮ್ ಮತ್ತು ಚಿತ್ರಮಂದಿರ ತೆರೆಯಲು ಉತ್ಸುಕವಾಗಿದೆ ಸರ್ಕಾರ

    ಕೇಂದ್ರ ಸರ್ಕಾರವು ಚಿತ್ರಮಂದಿರಗಳು, ಜಿಮ್‌ ಅನ್ನು ತೆರೆಯಲು ಅನುಮತಿ ನೀಡಲು ಉತ್ಸುಕವಾಗಿದೆ. ಆದರೆ ಕಠಿಣವಾದ ನಿಯಮಗಳನ್ನು ವಿಧಿಸಲಾಗುತ್ತದೆಯಂತೆ. ಆದರೆ ಮೆಟ್ರೋ ಸಂಚಾರ ಮತ್ತು ಶಾಲೆಗಳನ್ನು ತೆರೆಯಲು ಅನುಮತಿ ನೀಡಲಾಗುವುದಿಲ್ಲ ಎನ್ನಲಾಗಿದೆ.

    ಮುಚ್ಚಲಿದೆ ಐವತ್ತು ವರ್ಷ ಹಳೆಯ ಖ್ಯಾತ ಚಿತ್ರಮಂದಿರಮುಚ್ಚಲಿದೆ ಐವತ್ತು ವರ್ಷ ಹಳೆಯ ಖ್ಯಾತ ಚಿತ್ರಮಂದಿರ

    ಜುಲೈ 24 ರಂದು ನಡೆದಿದ್ದ ಸಭೆಯಲ್ಲಿ ಶಿಫಾರಸ್ಸು

    ಜುಲೈ 24 ರಂದು ನಡೆದಿದ್ದ ಸಭೆಯಲ್ಲಿ ಶಿಫಾರಸ್ಸು

    ಜುಲೈ 24 ರಂದು ಸಿಐಐ ಮಾಧ್ಯಮ ಸಮಿತಿಯೊಂದಿಗೆ ನಡೆದ ಸಿನಿಮಾ ಉದ್ಯಮ ಮಾತುಕತೆಯಲ್ಲಿ ಐಬಿ ಸಚಿವಾಲಯದ ಕಾರ್ಯದರ್ಶಿ ಅಮಿತ್ ಖರೆ, ದೇಶದಾದ್ಯಂತ ಸಿನಿಮಾ ಹಾಲ್‌ಗಳನ್ನು ಮತ್ತೆ ತೆರೆಯಲು ಆಗಸ್ಟ್ 1ರಿಂದ ಅನುಮತಿ ನೀಡಬಹುದು. ಅಥವಾ ಕಡೇಪಕ್ಷ ಆಗಸ್ಟ್ 31ರ ವೇಳೆಗಾದರೂ ಅವಕಾಶ ಕೊಡಬಹುದು ಎಂದು ಶಿಫಾರಸು ಮಾಡಿರುವುದಾಗಿ ಹೇಳಿದ್ದರು.

    ಸಾಲಿನ ನಡುವೆ ಅಂತರ

    ಸಾಲಿನ ನಡುವೆ ಅಂತರ

    ಮೊದಲ ಸಾಲಿನಲ್ಲಿ ಒಂದರ ನಂತರ ಒಂದು ಸೀಟ್‌ನಲ್ಲಿ ಕುಳಿತುಕೊಳ್ಳಲು ಹಾಗೂ ಅದರ ನಂತರದ ಸಾಲನ್ನು ಖಾಲಿ ಬಿಡುವ ಮೂಲಕ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡಬಹುದು. ದೇಶದಾದ್ಯಂತ ಇದೇ ಕ್ರಮವನ್ನು ಅನುಸರಿಸಬಹುದು ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಗೃಹ ಇಲಾಖೆಗೆ ನೀಡಿದ ಶಿಫಾರಸ್ಸಿನಲ್ಲಿ ಹೇಳಿದೆ.

    'ರಾಬರ್ಟ್' ಚಿತ್ರತಂಡಕ್ಕೆ ಕೈಮುಗಿದ ಚಿತ್ರಮಂದಿರ ಮಾಲೀಕ'ರಾಬರ್ಟ್' ಚಿತ್ರತಂಡಕ್ಕೆ ಕೈಮುಗಿದ ಚಿತ್ರಮಂದಿರ ಮಾಲೀಕ

    English summary
    Theaters may open by August 1st. Information and Broadcasting Ministry recommends to open theater in August.
    Wednesday, July 29, 2020, 19:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X