For Quick Alerts
  ALLOW NOTIFICATIONS  
  For Daily Alerts

  ಮಗುವಿಗೆ ಹಾಲು ಕುಡಿಸುವುದನ್ನು ನಿಲ್ಲಿಸಿ ವೇದಿಕೆ ಏರಿ ನಾಟಕ ಮಾಡಿದ್ರು ಮಂಡ್ಯ ರಮೇಶ್ ಪತ್ನಿ!

  By Naveen
  |

  ದಿ ಶೋ ಮಸ್ಟ್ ಗೋ ಆನ್ (The show must go on) ಇದು ರಂಗಭೂಮಿಯ ಮೊದಲ ಪಾಠ. ಅದೇನೇ ತೊಂದರೆ ಇರಲಿ, ಅದೇನೇ ಕಷ್ಟ ಬರಲಿ ಸಮಯಕ್ಕೆ ಸರಿಯಾಗಿ ಮೂರು ಬೆಲ್ ಹೊಡೆಯಬೇಕು, ನಾಟಕ ಶುರು ಆಗಬೇಕು.

  ರಂಗಭೂಮಿ ಒಂದು ಪರಿಶುದ್ಧ ಜಗತ್ತು. ಆ ಜಗತ್ತಿನಿಂದ ಬಂದ ಒಬ್ಬ ಪ್ರತಿಭಾವಂತ, ಅಪ್ಪಟ್ಟ ರಂಗಭೂಮಿಯ ಮಗ ಮಂಡ್ಯ ರಮೇಶ್. ಮಂಡ್ಯ ರಮೇಶ್ ರಂಗಭೂಮಿಗೆ ಎಷ್ಟೊಂದು ಗೌರವ ನೀಡುತ್ತಾರೆ ಎನ್ನುವುದಕ್ಕೆ ಇಲ್ಲಿ ಹೇಳಿರುವ ಒಂದು ಘಟನೆ ಉದಾಹರಣೆಯಾಗಿದೆ.

  30 ವರ್ಷದ ಹಿಂದೆ ಡಿ ಬಾಸ್ ಮಾಡಿದ ಡ್ರಾಮಾ ಇದು 30 ವರ್ಷದ ಹಿಂದೆ ಡಿ ಬಾಸ್ ಮಾಡಿದ ಡ್ರಾಮಾ ಇದು

  ಮಂಡ್ಯ ರಮೇಶ್ ಹಾಗೂ ಅವರ ಪತ್ನಿ ಸರೋಜ ಹೆಗ್ಡೆ ಇಬ್ಬರು ರಂಗಭೂಮಿಯನ್ನು ಆರಾಧಿಸಿದರು. ಅದನ್ನೇ ನಂಬಿ ದಿನ ಊಟ ಮಾಡುತ್ತಿದ್ದರು. ಎಷ್ಟೇ ಕಷ್ಟ ಬಂದರು ರಂಗಭೂಮಿಯನ್ನು ತೊರೆಯದ ಈ ದಂಪತಿ ಇಂದು ಅದರಲ್ಲಿಯೇ ಜೀವನ ಕಂಡುಕೊಂಡಿದ್ದಾರೆ.

  ತಿಂಡಿ-ಊಟ ಇಲ್ಲ, ಪೇಮೆಂಟ್ ಕೊಡಲಿಲ್ಲ: ಯಾಮಾರಿದ್ದ ನಟ ಮಂಡ್ಯ ರಮೇಶ್ತಿಂಡಿ-ಊಟ ಇಲ್ಲ, ಪೇಮೆಂಟ್ ಕೊಡಲಿಲ್ಲ: ಯಾಮಾರಿದ್ದ ನಟ ಮಂಡ್ಯ ರಮೇಶ್

  ಅಂದಹಾಗೆ, ಇತ್ತೀಚಿಗಷ್ಟೆ ಸಂದರ್ಶನಲ್ಲಿ ಮಾತನಾಡಿರುವ ನಟ ಮಂಡ್ಯ ರಮೇಶ್ ತಮ್ಮ ರಂಗಭೂಮಿಯ ದಿನಗಳ ನೆನಪುಗಳನ್ನು ಹಂಚಿಕೊಂಡರು. ಅವರ ಮಾತುಗಳು ಮುಂದಿದೆ ಓದಿ..

  ಆರು ತಿಂಗಳುಗಳ ಕಾಲ ಸಂಬಳ ಇರಲಿಲ್ಲ

  ಆರು ತಿಂಗಳುಗಳ ಕಾಲ ಸಂಬಳ ಇರಲಿಲ್ಲ

  ''ನಾನು ನನ್ನ ಹೆಂಡತಿ ಇಬ್ಬರೂ ಮೊದಲು ರಂಗಾಯಣದಲ್ಲಿ ಇದ್ದೇವು. ಆಗ ರಂಗಾಯಣ ತುಂಬ ಬಿಕ್ಕಟ್ಟುಗಳನ್ನು ಎದುರಿಸುತ್ತಿತ್ತು. ಒಟ್ಟಿಗೆ ಸಂಬಳ ನಿಂತು ಹೋಗುತ್ತಿತ್ತು. ಆರು ತಿಂಗಳುಗಳ ಕಾಲ ಇಬ್ಬರಿಗೂ ಸಂಬಳ ಇರಲಿಲ್ಲ. ಮದುವೆ ಆದ ಮೇಲೆ ಮನೆಯಲ್ಲಿ ದುಡ್ಡು ಕೇಳುವುದಕ್ಕೆ ಸ್ವಾಭಿಮಾನ ಅಡ್ಡ ಬರುತ್ತಿತ್ತು.'' - ಮಂಡ್ಯ ರಮೇಶ್, ರಂಗಕರ್ಮಿ, ನಟ

  ಆ ಸಮಯಕ್ಕೆ ಮಗಳು ಹುಟ್ಟಿದಳು

  ಆ ಸಮಯಕ್ಕೆ ಮಗಳು ಹುಟ್ಟಿದಳು

  ''ಕಾರಂತರು ನಾಟಕಗಳಲ್ಲಿ ನಟಿಸುತ್ತಿದ್ದೇವು. ನಾನು ನನ್ನ ಹೆಂಡತಿ ಇಬ್ಬರು ತುಂಬ ಒಡ್ಡಾಡುತ್ತಿದ್ವಿ ಆ ಸಮಯಕ್ಕೆ ಮಗಳು ಹುಟ್ಟಿದಳು. ಆಗ ನಾನು ಅನಿವಾರ್ಯವಾಗಿ ಜರ್ಮನಿಗೆ ಹೋಗುವ ಪ್ರಸಂಗ ಬಂತು. ಅಲ್ಲಿ ಒಂದು ನಾಟಕದ ಪ್ರದರ್ಶನ ಇತ್ತು. ಮುಖ್ಯ ಪಾತ್ರ ಮಾಡಬೇಕಿದ್ದ ನಟಿ ಬರಲಿಲ್ಲ. ನಾಟಕ ನಿಲ್ಲಬಾರದು ಎಂಬ ಉದ್ದೇಶಕ್ಕೆ ನನ್ನ ಹೆಂಡತಿ ನನ್ನ ಜೊತೆಗೆ ಬಂದಳು. ಮಗು ಹುಟ್ಟಿ ಕೇವಲ ನಾಲ್ಕು ತಿಂಗಳು ಆಗಿತ್ತು.'' - ಮಂಡ್ಯ ರಮೇಶ್, ರಂಗಕರ್ಮಿ, ನಟ

  ಮೇಕಪ್ ಕೊಠಡಿಯಲ್ಲಿ ಮಗುವನ್ನು ಮಲಗಿಸಿ ನಾಟಕ ಮಾಡಿದ್ವಿ

  ಮೇಕಪ್ ಕೊಠಡಿಯಲ್ಲಿ ಮಗುವನ್ನು ಮಲಗಿಸಿ ನಾಟಕ ಮಾಡಿದ್ವಿ

  ''ಜರ್ಮನಿಯ ಒಂದು ರಂಗಮಂದಿರದಲ್ಲಿ ನಾಟಕದ ಪ್ರದರ್ಶನ ಇತ್ತು. ನಮ್ಮ ಜೊತೆಗೆ ಮಗುವನ್ನು ಕರೆದುಕೊಂಡು ಅಲ್ಲಿಗೆ ಹೋದೆವು. ಮಗು ಯಾವಾಗಲು ಅಳುತ್ತಿತ್ತು. ಗ್ರೀನ್ ರೂಮ್ (ಮೇಕಪ್ ಕೊಠಡಿ)ನಲ್ಲಿ ಮಗುವನ್ನು ಮಲಗಿಸಿ ನಾಟಕ ಮಾಡಿದ್ವಿ. ವೇದಿಕೆ ಮೇಲೆ ನಾನು ಇದ್ದಾಗ ಅವಳು(ಪತ್ನಿ) ಮಗುವಿನ ಬಳಿ ಇರುತ್ತಿದ್ದಳು. ಅವಳು ವೇದಿಕೆ ಮೇಲೆ ಇದ್ದಾಗ ನಾನು ಮಗು ಬಳಿ ಇರುತ್ತಿದ್ದೆ.'' - ಮಂಡ್ಯ ರಮೇಶ್, ರಂಗಕರ್ಮಿ, ನಟ

  ಇಬ್ಬರು ವೇದಿಕೆ ಮೇಲೆ ಇದ್ದಾಗ ಮಗು ಜೋರಾಗಿ ಅಳುತ್ತಿತ್ತು

  ಇಬ್ಬರು ವೇದಿಕೆ ಮೇಲೆ ಇದ್ದಾಗ ಮಗು ಜೋರಾಗಿ ಅಳುತ್ತಿತ್ತು

  ''ಇಬ್ಬರು ವೇದಿಕೆ ಮೇಲೆ ಇದ್ದಾಗ ಮಗು ಜೋರಾಗಿ ಅಳುತ್ತಿತ್ತು. ನನ್ನ ಹೆಂಡತಿ ಬಾಣಂತಿ ಆಗಿದ್ದರೂ ನಾಟಕದಲ್ಲಿ ಪಲ್ಟಿ ಹೊಡೆಯುವುದು, ಹಾರುವುದು ಎಲ್ಲ ಮಾಡುತ್ತಿದ್ದಳು. ನಾಟಕ ಮಧ್ಯೆ ಇಂಟರ್ವೆಲ್ ಅಂತ ಬಿಟ್ಟರು. ಆಗ ವೇದಿಕೆಯಿಂದ ಓಡಿ ಬಂದು ನನ್ನ ಮಡದಿ ಮಗುವನ್ನು ಎತ್ತಿಕೊಂಡಳು. ಸಮಾದಾನ ಮಾಡಿದಳು.'' - ಮಂಡ್ಯ ರಮೇಶ್, ರಂಗಕರ್ಮಿ, ನಟ

  ಹಾಲು ಕುಡಿಯುತ್ತಿದ್ದ ಮಗುವನ್ನು ಎದೆಯಿಂದ ಕಿತ್ತು ಇಟ್ಟಳು

  ಹಾಲು ಕುಡಿಯುತ್ತಿದ್ದ ಮಗುವನ್ನು ಎದೆಯಿಂದ ಕಿತ್ತು ಇಟ್ಟಳು

  ''ಮಗುವಿಗೆ ಹಾಲು ಕುಡಿಸುತ್ತ ಇದ್ದಳು. ಇಂಟರ್ ವೆಲ್ ಸಮಯ ಆದ ಮೇಲೆ ಬೆಲ್ ಹೊಡೆದರು. ಹಾಲು ಕುಡಿಯುತ್ತಿದ್ದ ಮಗುವನ್ನು ಎದೆಯಿಂದ ಕಿತ್ತು ನೆಲಕ್ಕೆ ಇಟ್ಟಳು. ಮಗು ಹಾಲು ಬೇಕು ಅಂತ ಇನ್ನೂ ಜೋರಾಗಿ ಅಳಲು ಶುರು ಮಾಡಿತು. ಅದನ್ನು ಬಿಟ್ಟು ಮತ್ತೆ ವೇದಿಕೆ ಮೇಲೆ ಓಡಿದಳು.'' - ಮಂಡ್ಯ ರಮೇಶ್, ರಂಗಕರ್ಮಿ, ನಟ

  ಅಲ್ಲಿ ಮಗುವಿಗೆ ಹಾಲೆ ಇರಲಿಲ್ಲ

  ಅಲ್ಲಿ ಮಗುವಿಗೆ ಹಾಲೆ ಇರಲಿಲ್ಲ

  ''ಮಗುವನ್ನು ಬಿಟ್ಟು ಮತ್ತೆ ಆಕ್ಟ್ ಮಾಡುವುದಕ್ಕೆ ಹೋದಾಗ ನೋಡಿದರೆ ಅವರ ಬಟ್ಟೆ ಒದ್ದೆಯಾಗಿದೆ. ಇಲ್ಲಿ ಎದೆಯಿಂದ ಹಾಲು ಇಳಿಯುತ್ತಿತ್ತು, ಅಲ್ಲಿ ಮಗುವಿಗೆ ಹಾಲೆ ಇರಲಿಲ್ಲ. ಆದರೂ ಎದ್ದು ಬರುವ ಹಾಗಿರಲಿಲ್ಲ, ಆಕ್ಟ್ ಮಾಡಲೇ ಬೇಕಿತ್ತು. ಗಂಡ ಹೆಂಡತಿ ಇಬ್ಬರು ಕಲಾವಿದರಾದರೆ ಮಕ್ಕಳನ್ನು ಬೆಳೆಸುವುದು ಎಷ್ಟು ಕಷ್ಟ ಎಂದು ಆಗ ನನಗೆ ತಿಳಿಯಿತು.'' - ಮಂಡ್ಯ ರಮೇಶ್, ರಂಗಕರ್ಮಿ, ನಟ

  ಶೋ ಮುಗಿಸಿ ಹೋಗಿ ಎಂದಿದ್ದರು ಕಾರಂತರು

  ಶೋ ಮುಗಿಸಿ ಹೋಗಿ ಎಂದಿದ್ದರು ಕಾರಂತರು

  ''ನನ್ನ ಹೆಂಡತಿ ಒಂಬತ್ತು ತಿಂಗಳು ಇದ್ದಾಗ 'ಮಿಡ್ ಸಮ್ಮರಿ ನೈಟ್ ಡ್ರೀಮ್ಸ್' ಅಂತ ಒಂದು ನಾಟಕದ ತಾಲಿಮು ಇತ್ತು. ಆಗ ನಾನು ಕಾರಂತರ ಬಳಿ ಹೋಗಿ ಸರ್, ನನ್ನ ಹೆಂಡತಿಗೆ ಡಾಕ್ಟರ್ ಡೇಟ್ ಕೊಟ್ಟಿದ್ದಾರೆ ಹೋಗಬೇಕು ಎಂದೆ. ಇಲ್ಲ ಶೋ ಮುಗಿಸಿ ಹೋಗಿ, ಆಕೆ ಈ ರೀತಿ ಓಡಾಡುತ್ತಿದ್ದರೆ ವ್ಯಾಯಾಮ ಆಗುತ್ತದೆ ಡಿಲೆವರಿ ಚೆನ್ನಾಗಿ ಆಗುತ್ತದೆ ಎಂದಿದ್ದರು. ನಾವು ನಮ್ಮ ಕೆಲಸ ಮುಗಿಸಿ ರಾತ್ರಿ ಆಸ್ಪತ್ರೆಗೆ ಹೋದೆವು. ಈ ರೀತಿಯ ಸಾವಿರ ಸಮಸ್ಯೆಗಳನ್ನು ನಾಟಕದವರು ಎದುರಿಸಿದ್ದಾರೆ.'' - ಮಂಡ್ಯ ರಮೇಶ್, ರಂಗಕರ್ಮಿ, ನಟ

  ಈ ಘಟನೆ ಯಾವಾಗಲೂ ಕಾಡುತ್ತಿರುತ್ತದೆ

  ಈ ಘಟನೆ ಯಾವಾಗಲೂ ಕಾಡುತ್ತಿರುತ್ತದೆ

  ''ನನಗೆ ಈ ಘಟನೆ ಯಾವಾಗಲೂ ಕಾಡುತ್ತಿರುತ್ತದೆ. ಎಂತಹ ಸಂಕಷ್ಟದ ಘಟನೆ ಇದು ಅಂತ ಅನಿಸುತ್ತದೆ. ನನ್ನ ಎಷ್ಟೋ ರಂಗಭೂಮಿಯ ಸ್ನೇಹಿತರು ಇದೇ ರೀತಿಯ ಕಷ್ಟಗಳನ್ನು ಅನುಭವಿಸಿದ್ದಾರೆ. ಈಗ ನನಗೆ ಆರು ತಿಂಗಳು ರಜೆ, ದುಡ್ಡು, ಪ್ರೀತಿ ಎಲ್ಲ ಇದೆ. ಆದರೆ, ಆಗ ಹಾಗೆ ಇರಲಿಲ್ಲ.'' - ಮಂಡ್ಯ ರಮೇಶ್, ರಂಗಕರ್ಮಿ, ನಟ

  English summary
  Popular Theatre artist, actor Mandya Ramesh spoke about his struggling days in his recent interview.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X