twitter
    For Quick Alerts
    ALLOW NOTIFICATIONS  
    For Daily Alerts

    ಬ್ಯಾಂಕ್ ಹೌಸ್ ಫುಲ್, ಥಿಯೇಟರ್ ಖಾಲಿ ಖಾಲಿ

    By Harshitha
    |

    ಬ್ಯಾಂಕ್ ಗಳ ಮುಂದೆ ರಶ್ಶೋ ರಶ್ಶು... ಥಿಯೇಟರ್ ಮಾತ್ರ ಖಾಲಿ ಖಾಲಿ.. ಇದು ಭಾರತದ ಮೂಲೆ ಮೂಲೆಯಲ್ಲೂ ನಿನ್ನೆಯಿಂದ ಕಂಡುಬರುತ್ತಿರುವ ಚಿತ್ರಣ.

    ದಿಢೀರ್ ಅಂತ 500, 1000 ಮುಖ ಬೆಲೆಯ ನೋಟ್ ಗಳನ್ನು ಬ್ಯಾನ್ ಮಾಡಿರುವುದರಿಂದ, ಎಲ್ಲರೂ ನೋಟುಗಳನ್ನು ಬದಲಿಸಿಕೊಳ್ಳುವ ಆತುರದಲ್ಲಿದ್ದಾರೆ. ಕೆಲವರಿಗಂತೂ ಇದೇ ದೊಡ್ಡ ಟೆನ್ಷನ್ ಆಗ್ಬಿಟ್ಟಿದೆ. ಸಹಜವಾಗಿ ಎಲ್ಲಾ ಬ್ಯಾಂಕ್ ಗಳ ಮುಂದೆ ಕ್ಯೂ ಕಿಲೋಮೀಟರ್ ಗಟ್ಟಲೆ ಇದೆ. ಹೀಗಿರುವಾಗ, ಸಿನಿಮಾ ನೋಡುವ ಮೂಡ್ ನಲ್ಲಿ ಯಾರಿದ್ದಾರೆ ಸ್ವಾಮಿ.? ನೋಡುವ ಇಚ್ಛೆ ಇದ್ದರೂ ಚೇಂಜ್ ಎಲ್ಲಿದೆ.? [ಬೆಂಗಳೂರಿನಲ್ಲಿ ಬೆಳ್ಳಂ ಬೆಳಗ್ಗೆ ಬ್ಯಾಂಕ್ ಮುಂದೆ ಮೈಲುದ್ದ ಕ್ಯೂ]

    Theatres are empty, Banks are House Full

    ಜನಸಾಮಾನ್ಯರ ನಾಡಿಮಿಡಿತ ಹಿಡಿದಿರುವ ಗಾಂಧಿನಗರದ ನಿರ್ಮಾಪಕರು ಈ ವಾರ ಯಾವುದೇ ಚಿತ್ರವನ್ನೂ ಬಿಡುಗಡೆ ಮಾಡಿಲ್ಲ. ಇಂದು (ನವೆಂಬರ್ 11) ಬಿಡುಗಡೆ ಆಗಬೇಕಿದ್ದ 'ಜಾನ್ ಜಾನಿ ಜನಾರ್ಧನ್' ಮತ್ತು 'ರಿಕ್ತ' ಚಿತ್ರಗಳ ರಿಲೀಸ್ ಪೋಸ್ಟ್ ಪೋನ್ ಆಗಿದೆ.

    'ಚಿಲ್ಲರೆ ಸಮಸ್ಯೆ' ಎದುರಾಗಿರುವ ಕಾರಣ ಈಗಾಗಲೇ ಬಿಡುಗಡೆ ಆಗಿರುವ ಚಿತ್ರಗಳನ್ನ ವೀಕ್ಷಿಸಲೂ ಪ್ರೇಕ್ಷಕರು ಬರುತ್ತಿಲ್ಲ. ಬಹುತೇಕ ಎಲ್ಲಾ ಥಿಯೇಟರ್ ಗಳೂ ಖಾಲಿ ಹೊಡೆಯುತ್ತಿವೆ.

    ಶುಕ್ರವಾರ ಹೌಸ್ ಫುಲ್ ಆಗ್ಬೇಕಿದ್ದ ಥಿಯೇಟರ್ ಗಳಲ್ಲಿ ಕೇಳೋರೇ ಇಲ್ಲ. ಆದ್ರೆ, ಬ್ಯಾಂಕ್ ಗಳು ಮಾತ್ರ ತುಂಬಿ ತುಳುಕುತ್ತಿವೆ.

    English summary
    Rs.500 and Rs.1000 Currency Note ban effect: Cinema theatres are empty but Banks are House Full this weekend.
    Friday, November 11, 2016, 18:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X