"ಇರೋದು ಇಬ್ರೇ ಬಾಸ್, ಒಬ್ರು ಅಪ್ಪು ಬಾಸ್, ಇನ್ನೊಬ್ರು.." ಇಬ್ಬರು ಬಾಸ್‌ಗಳ ಹೆಸರು ಹೇಳಿದ ಗೇಲ್!

ರಾಯಲ್ ಚಾಲೆಂಜರ್ಸ್ ಬೆಂಗಳೂರು.. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುತ್ತಿರುವ ತಂಡ. ಹೀಗಾಗಿಯೇ ನಮ್ಮ ರಾಜ್ಯದ ತಂಡ ಎಂದು ಪ್ರತಿಯೊಬ್ಬ ಕನ್ನಡಿಗರೂ ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬೆಂಬಲವನ್ನು ದೊಡ್ಡಮಟ್ಟದಲ್ಲಿ ಸೂಚಿಸುತ್ತಾರೆ. ಇನ್ನು ಆರ್‌ಸಿಬಿ ಎಂದರೆ ಕೇವಲ ಸಾಮಾನ್ಯ ಜನರು ಮಾತ್ರವಲ್ಲದೇ ಕನ್ನಡ ಚಲನಚಿತ್ರರಂಗದ ಹಲವು ಸ್ಟಾರ್ ನಟರು, ನಟಿಯರು, ನಿರ್ದೇಶಕರು ಹಾಗೂ ಇನ್ನತರೆ ಸಿನಿಮಾ ಕಲಾವಿದರೂ ಸಹ ಬೃಹತ್ ಬೆಂಬಲ ನೀಡ್ತಾರೆ.

ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೂ ಕನ್ನಡ ಚಿತ್ರರಂಗಕ್ಕೂ ಈ ಹಿಂದಿನಿಂದಲೂ ಸಹ ಒಂದು ರೀತಿಯ ಅವಿನಾಭಾವ ಸಂಬಂಧವಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆರಂಭದ ದಿನಗಳಲ್ಲಿ ಇದೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಪ್ರಚಾರದ ಬ್ರಾಂಡ್ ಅಂಬಾಸಿಡರ್ ಆಗಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್, ಮೋಹಕ ತಾರೆ ರಮ್ಯಾ ಹಾಗೂ ದೀಪಿಕಾ ಪಡುಕೋಣೆ ಕೆಲಸ ನಿರ್ವಹಿಸಿದ್ದರು.

There are only 2 boss one is universe boss and another one is Appu boss says Chris Gayle

ಅತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ವಿಶೇಷ ಸಂದರ್ಶನಗಳಲ್ಲಿ ಭಾಗವಹಿಸಿದ್ದಾಗ ಕನ್ನಡ ಚಲಚಿತ್ರರಂಗದ ಸ್ಟಾರ್ ನಟರ ಬಗ್ಗೆ ಮಾತನಾಡಿದ ಉದಾಹರಣೆಗಳಿವೆ. ಈ ಹಿಂದೆ ಎಬಿ ಡಿ ವಿಲಿಯರ್ಸ್ ವರನಟ ಡಾ ರಾಜ್‌ಕುಮಾರ್ ಬಗ್ಗೆ ಮಾತನಾಡಿದ್ದರು. ರಾಜ್‌ಕುಮಾರ್ ಅವರ ಹಾಡುಗಳನ್ನು ಹೇಳಿ ಮನರಂಜನೆ ನೀಡಿದ್ದರು. ಅಲ್ಲದೇ ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ವೇಳೆ ಕನ್ನಡದ ಬೃಹತ್ ಹಿಟ್ ಯಶ್ ನಟನೆಯ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎಲ್ಲಾ ಆಟಗಾರರು ವೀಕ್ಷಿಸಿದ್ದರು.

ಈಗ ಕ್ರಿಸ್ ಗೇಲ್ ಆರ್‌ಸಿಬಿ ಇನ್‌ಸೈಡರ್ ಸಂದರ್ಶನದಲ್ಲಿ ಭಾಗವಹಿಸಿದ್ದು, ಈ ಸಂದರ್ಶನದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರನ್ನು ನೆನೆದಿದ್ದಾರೆ. ಹೌದು, ಡ್ಯಾನಿಶ್ ಸೇಠ್ ನಡೆಸಿಕೊಡುವ ಈ ಸಂದರ್ಶನದಲ್ಲಿ ಭಾಗವಹಿಸಿರುವ ಆರ್‌ಸಿಬಿ ಮಾಜಿ ಆಟಗಾರ ಕ್ರಿಸ್ ಗೇಲ್ ಆರ್‌ಸಿಬಿ ಬಗ್ಗೆ ಹಾಗೂ ವಿಶೇಷವಾಗಿ ಕಲಬುರಗಿ ಊರಿನ ಬಗ್ಗೆ ಮಾತಾನಾಡಿದ್ದಾರೆ.

ತಮ್ಮ ಇಷ್ಟದ ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದ ಕ್ರಿಸ್ ಗೇಲ್ ಅವರಿಗೆ ಮಿಸ್ಟರ್ ನ್ಯಾಗ್ಸ್ "ಕ್ರಿಸ್ ಗೇಲ್ ಅವರೇ ನೀವು ಕಲಬುರ್ಗಿಯಲ್ಲಿ ಯಾವುದಾದರೂ ಮ್ಯೂಸಿಕ್ ಪ್ಲೇ ಮಾಡ್ತೀರಾ?" ಎಂದು ಪ್ರಶ್ನೆಯನ್ನು ಹಾಕಿದರು. ಈ ಪ್ರಶ್ನೆಗೆ ಉತ್ತರಿಸಿದ ಕ್ರಿಸ್ ಗೇಲ್ "ಅಲ್ಲಿ ಕೇವಲ ಇಬ್ಬರು ಬಾಸ್ ಇದ್ದಾರೆ. ಯೂನಿವರ್ಸ್ ಬಾಸ್ ಹಾಗೂ ಅಪ್ಪು ಬಾಸ್.. ಅಪ್ಪು ಬಾಸ್ ರಿಯಲ್ ಬಾಸ್, ಅಷ್ಟೇ" ಎಂದರು. ಮುಂದುವರಿದು ನಮಗಾಗಿ ಯಾವುದಾದರೂ ಹಾಡು ಹಾಡ್ತೀರ ಎಂದಾಗ ಕ್ರಿಸ್ ಗೇಲ್ ಪುನೀತ್ ರಾಜ್‌ಕುಮಾರ್ ನಟನೆಯ ದೊಡ್ಮನೆ ಹುಡ್ಗ ಚಿತ್ರದ ತ್ರಾಸ್ ಆಕ್ಕೇತಿ ಹಾಡನ್ನು ಹಾಡಿದರು.

There are only 2 boss one is universe boss and another one is Appu boss says Chris Gayle

ಮುಂದುವರಿದು ಮಾತನಾಡಿದ ಕ್ರಿಸ್ ಗೇಲ್ ಅಪ್ಪು ಮಿಸ್ ಯೂ ಮ್ಯಾನ್ ಎಂದು ಹೇಳಿ ಪುನೀತ್ ರಾಜ್‌ಕುಮಾರ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದರು. ಅಲ್ಲದೇ ಕಲಬುರ್ಗಿಯ ಜೋಳದ ರೊಟ್ಟಿ ಹಾಗೂ ಶೇಂಗಾ ಚಟ್ನಿ ಎಂದರೆ ನನಗೆ ಬಲು ಇಷ್ಟ ಎಂದೂ ಸಹ ಕ್ರಿಸ್ ಗೇಲ್ ತಿಳಿಸಿದರು. ಸದ್ಯ ಅಂತರರಾಷ್ಟ್ರೀಯ ಕ್ರಿಕೆಟ್ ಅನ್ನು ಹಲವು ವರ್ಷಗಳ ಕಾಲ ಆಳಿ ಯೂನಿವರ್ಸ್ ಬಾಸ್ ಎನಿಸಿಕೊಂಡ ಮಹಾನ್ ಕ್ರಿಕೆಟಿಗ ಪುನೀತ್ ರಾಜ್‌ಕುಮಾರ್ ಅವರನ್ನು ಬಾಸ್ ಎಂದು ಕರೆದಿರುವ ವಿಡಿಯೊವನ್ನು ಅಪ್ಪು ಫ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಭಾವುಕರಾಗಿದ್ದಾರೆ.

More from Filmibeat

English summary
There are only 2 boss one is universe boss and another one is Appu boss says Chris Gayle. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X