For Quick Alerts
  ALLOW NOTIFICATIONS  
  For Daily Alerts

  ಕೊರೊನಾ ಎಂಬುದು ಮೆಡಿಕಲ್ ಮಾಫಿಯಾ, ನಾನು ವ್ಯಾಕ್ಸಿನ್ ತಗೊಂಡಿಲ್ಲ: ಅಗ್ನಿ ಶ್ರೀಧರ್

  |

  ಕೊರೊನಾ ಎಂಬ ಕಾಯಿಲೆ ಬಗ್ಗೆ ಆರಂಭದಿಂದಲೂ ಹಲವರು ಅನುಮಾನ ವ್ಯಕ್ತಪಡಿಸುತ್ತಲೇ ಇದ್ದಾರೆ. ಇದು ಲ್ಯಾಬ್‌ನಲ್ಲಿ ಸೃಷ್ಟಿಸಲಾದ ವೈರಸ್ ಎಂದು ಕೆಲವರು ವಾದಿಸಿದರು, ಮೆಡಿಕಲ್ ಮಾಫಿಯಾಗಳು ಹಣ ಮಾಡಿಕೊಳ್ಳಲು ಸುಖಾ ಸುಮ್ಮನೆ ಕೊರೊನಾ ಭೀತಿ ಹರಡಿಸುತ್ತಿವೆ ಎಂಬ ಮಾತುಗಳೂ ಅಲ್ಲಲ್ಲಿ ಕೇಳಿ ಬರುತ್ತಲೇ ಇದೆ.

  ಇದೀಗ ಚಿತ್ರಕತೆ ಬರಹಗಾರ ಅಗ್ನಿ ಶ್ರೀಧರ್ ಅವರು ಕೊರೊನಾ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ''ಕೋವಿಡ್ ಎಂಬುದು ಇಲ್ಲ, ಇದು ಕೇವಲ ಮೆಡಿಕಲ್ ಮಾಫಿಯಾ'' ಎಂದಿದ್ದಾರೆ.

  'ಕ್ರೀಂ' ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ವೈದ್ಯಕೀಯ ವಿಭಾಗದವರು ಹಣ ಮಾಡಿಕೊಳ್ಳಲು ಕೊರೊನಾದ ಭೀತಿ ಹಬ್ಬಿಸಿದ್ದಾರೆ. ನಾನು ಈವರೆಗೆ ವ್ಯಾಕ್ಸಿನ್ ತೆಗೆದುಕೊಂಡಿಲ್ಲ. ನನ್ನ ಕುಟುಂಬವರೂ ಸಹ ವ್ಯಾಕ್ಸಿನ್ ತೆಗೆದುಕೊಂಡಿಲ್ಲ'' ಎಂದರು.

  ಕೊರೊನಾ ಲಾಕ್‌ಡೌನ್ ಇನ್ನಿತರೆಗಳಿಂದ ರಾಜಕಾರಣಿಗಳು ತಳವರ್ಗದವರನ್ನು ಬದುಕಿರುವಾಗಲೆ ಕೊಂದಿದ್ದಾರೆ. ಇತ್ತೀಚೆಗೆ ನಾನು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾಗಲೂ ಇದೇ ಮಾತುಗಳನ್ನು ಹೇಳಿದ್ದೆ'' ಎಂದರು.

  ''ಶೇ. 60 ವೈದ್ಯರು ಈ ವರೆಗೆ ಕೊರೊನಾ ಲಸಿಕೆ ಪಡೆದಿಲ್ಲ. ಇದು ಸತ್ಯ​. ಯಾರೂ ಕೊವಿಡ್​ನಿಂದ ಸತ್ತಿಲ್ಲ. ಸತ್ತ ವ್ಯಕ್ತಿಯಲ್ಲಿ ನೂರಾರು ವೈರಸ್​ ಇದೆ. ಇದನ್ನು ಹೈಲೈಟ್​ ಮಾಡಲಾಗಿದೆ. ಇದು ನನ್ನ ಅಭಿಪ್ರಾಯ'' ಎಂದು ಅಗ್ನಿ ಶ್ರೀಧರ್​​ ಹೇಳಿದ್ದಾರೆ.

  ರಾಜಕಾರಣಿಗಳ ಮೇಲೆ ತೀವ್ರ ವಾಗ್ದಾಳಿ ನಡೆಸಿರುವ ಅಗ್ನಿ ಶ್ರೀಧರ್, ''ಕೆಜಿಎಫ್ 2' ಸಿನಿಮಾ ಮುಗಿಸಿ ಎರಡು ವರ್ಷಗಳಾಗಿದೆ. ನೂರಾರು ಕೋಟಿ ಬಂಡವಾಳ ಹೂಡಿ ಎರಡು ವರ್ಷದಿಂದ ಸುಮ್ಮನೆ ಇಟ್ಟುಕೊಂಡಿರುವುದೆಂದರೆ ಸಾಮಾನ್ಯವೇ. ಈ ರಾಜಕಾರಣಿಗಳು ತಮಗೆ ಬೇಕಾದಾಗ ಅನ್‌ಲಾಕ್ ಮಾಡುತ್ತಾರೆ. ರಾಜಕೀಯ ಸಭೆ, ಮೋಜು ಮಸ್ತಿ ಮಾಡುತ್ತಾರೆ. ಸಿನಿಮಾ ಬಿಡುಗಡೆ ಎಂದ ಕೂಡಲೇ ಕೊರೊನಾ ಭೀತಿ ಎನ್ನುತ್ತಾರೆ. ಇವರೆಲ್ಲ ಕೊಳಕು ಜನ, ದುಷ್ಟ ಜನ'' ಎಂದು ಅಗ್ನಿ ಶ್ರೀಧರ್ ಹೇಳಿದ್ದಾರೆ.

  English summary
  Director, Movie writer Agni Shridhar said there is no coronavirus, Medical mafia created this fear to gain money.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X