For Quick Alerts
  ALLOW NOTIFICATIONS  
  For Daily Alerts

  ಶ್ರೀಗಳ ಅಗಲಿಕೆ ಹಿನ್ನಲೆ ನಾಳೆ ಚಿತ್ರ ಪ್ರದರ್ಶನ ಸ್ಥಗಿತ

  |

  ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮಿಗಳು ಇಂದು ಲಿಂಗೈಕ್ಯರಾಗಿದ್ದಾರೆ. ಸಾವಿರಾರೂ ಭಕ್ತಧಿಗಳ ಪಾಲಿನ ದೇವರಾಗಿರುವ ಅವರು ಇಂದು ದೇವರ ಬಳಿ ಹೋಗಿದ್ದಾರೆ. ಶ್ರೀಗಳ ಅಗಲಿಕೆ ಎಲ್ಲರಿಗೂ ತುಂಬ ನೋವಿನ ಸಂಗತಿಯಾಗಿದೆ.

  ಶ್ರೀಗಳ ನಿಧನದ ಹಿನ್ನಲೆಯಲ್ಲಿ ನಾಳೆ ಕರ್ನಾಟಕದಲ್ಲಿ ಚಿತ್ರ ಪ್ರದರ್ಶನವನ್ನು ರದ್ದು ಮಾಡಲಾಗಿದೆ. ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಚಿನ್ನೆಗೌಡ ಸ್ಪಷ್ಟನೆ ನೀಡಿದ್ದಾರೆ.

  'ಸಿದ್ದಗಂಗಾ ಶ್ರೀಗಳಿಂದ ಈ ವಸ್ತುವನ್ನು ಕಿತ್ತುಕೊಂಡು ಬಂದಿದ್ದೆ' - ಜಗ್ಗೇಶ್

  ''ನಡೆದಾಡುವ ದೇವರು ಶಿವಕುಮಾರ್ ಸ್ವಾಮಿಜಿ ಲಿಂಗೈಕ್ಯ ರಾಗಿರುವ ಕಾರಣ ನಾಳೆ ಇಡೀ ಚಿತ್ರೋದ್ಯಮದ ಎಲ್ಲ ಕೆಲಸಗಳನ್ನು ಸ್ಥಗಿತಗೊಳಿಸುತ್ತಿದ್ದೇವೆ. ಸಿನಿಮಾ ಪ್ರದರ್ಶನ, ಶೂಟಿಂಗ್ ಸೇರಿದಂತೆ ಯಾವ ಕಾರ್ಯಕ್ರಮಗಳು ಇರುವುದಿಲ್ಲ. ಎಲ್ಲರೂ ಇದಕ್ಕೆ ಬೆಂಬಲ ನೀಡಿ ಎಂದು ಮನವಿ ಮಾಡುತ್ತೇನೆ.'' ಎಂದಿದ್ದಾರೆ ಚಿನ್ನೆಗೌಡ.

  ಶ್ರೀಗಳ ಅಗಲಿಕೆಗೆ ನಟರಾದ ಜಗ್ಗೇಶ್, ದರ್ಶನ್, ಸುದೀಪ್, ಉಪೇಂದ್ರ, ಪುನೀತ್ ರಾಜ್ ಕುಮಾರ್, ಗಣೇಶ್, ಸತೀಶ್ ನೀನಾಸಂ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

  English summary
  There will be no movie show tomorrow (January 21st) due to Shivakumara Swamiji death.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X