For Quick Alerts
  ALLOW NOTIFICATIONS  
  For Daily Alerts

  ಆರು ಬಾರಿ ರಾಜ್ಯ ಪ್ರಶಸ್ತಿ ಪಡೆದಿದ್ದ ಜಯಂತಿ, ಯಾವುದು ಆ ಚಿತ್ರಗಳು?

  |

  'ಅಭಿನಯ ಶಾರದೆ' ಜಯಂತಿ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಮರಾಠಿ ಚಿತ್ರಗಳಲ್ಲಿ ಅಭಿನಯಿಸಿದ್ದರು. 1960, 70 ಹಾಗೂ 80ರ ದಶಕದಲ್ಲಿ ಜಯಂತಿ ಬೇಡಿಕೆಯ ಹಾಗೂ ಟಾಪ್ ಹೀರೋಯಿನ್ ಆಗಿದ್ದರು.

  Recommended Video

  ನನಗಿನ್ನೂ 35 ನಿನಗೆ ಹೇಗೆ 70 ಆಯ್ತು ಅಂದಿದ್ರು ಜಯಂತಿ

  ಕನ್ನಡದಲ್ಲಿ 250ಕ್ಕೂ ಹೆಚ್ಚು ಸಿನಿಮಾಗಳು, 100ಕ್ಕೂ ಹೆಚ್ಚು ತೆಲುಗು ಸಿನಿಮಾಗಳು, 50ಕ್ಕೂ ಹೆಚ್ಚು ತಮಿಳು ಸಿನಿಮಾಗಳು ಹಾಗೂ 7 ಮಲಯಾಳಂ ಸಿನಿಮಾಗಳು ಜೊತೆಗೆ ಮರಾಠಿ, ಹಿಂದಿ ಸಿನಿಮಾಗಳಲ್ಲಿಯೂ ಜಯಂತಿ ಗುರುತಿಸಿಕೊಂಡಿದ್ದರು.

  ಕಮಲಾ ಕುಮಾರಿಗೆ ಜಯಂತಿ ಹೆಸರು ಸಿಕ್ಕಿದ್ದು ಹೇಗೆ?ಕಮಲಾ ಕುಮಾರಿಗೆ ಜಯಂತಿ ಹೆಸರು ಸಿಕ್ಕಿದ್ದು ಹೇಗೆ?

  ಜಯಂತಿ ಅವರಿಗೆ ಇದುವರೆಗೂ ಆರು ಬಾರಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಲಭಿಸಿದೆ. ನಾಲ್ಕು ಬಾರಿ ಅತ್ಯುತ್ತಮ ನಟಿ ಪ್ರಶಸ್ತಿ, ಎರಡು ಬಾರಿ ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಮುಂದೆ ಓದಿ...

  ಎಡಕಲ್ಲು ಗುಡ್ಡದ ಮೇಲೆ

  ಎಡಕಲ್ಲು ಗುಡ್ಡದ ಮೇಲೆ

  1973ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಬಂದಿದ್ದ 'ಎಡಕಲ್ಲು ಗುಡ್ಡದ ಮೇಲೆ' ಚಿತ್ರದ ನಟನೆಗೆ ಮೊದಲ ಸಲ ರಾಜ್ಯ ಪ್ರಶಸ್ತಿ ಪಡೆದಿದ್ದರು. ಆರತಿ, ಚಂದ್ರಶೇಖರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಜಯಂತಿ ಅವರಿಗೆ ತಮ್ಮ ವೃತ್ತಿ ಜೀವನದಲ್ಲಿ ದೊಡ್ಡ ಬ್ರೇಕ್ ಕೊಟ್ಟಿತ್ತು.

  ಮನಸ್ಸಿನಂತೆ ಮಾಂಗಲ್ಯ

  ಮನಸ್ಸಿನಂತೆ ಮಾಂಗಲ್ಯ

  1977ರಲ್ಲಿ 'ಮನಸ್ಸಿನಂತೆ ಮಾಂಗಲ್ಯ' ಚಿತ್ರದ ನಟನೆಗಾಗಿ ಜಯಂತಿ ಎರಡನೇ ಸಲ ಅತ್ಯುತ್ತಮ ನಟಿ ರಾಜ್ಯ ಪ್ರಶಸ್ತಿ ಪಡೆದುಕೊಂಡರು. ಈ ಚಿತ್ರದಲ್ಲಿ ಅಂಬರೀಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಗಿರಿಬಾಬು ನಿರ್ದೇಶಿಸಿದ್ದರು.

  ಅಣ್ಣಾವ್ರನ್ನು 'ರಾಜ್' ಎಂದು ಕರೆಯುತ್ತಿದ್ದ ಏಕೈಕ ನಟಿ ಜಯಂತಿ!ಅಣ್ಣಾವ್ರನ್ನು 'ರಾಜ್' ಎಂದು ಕರೆಯುತ್ತಿದ್ದ ಏಕೈಕ ನಟಿ ಜಯಂತಿ!

  ಧರ್ಮ ದಾರಿ ತಪ್ಪಿತು

  ಧರ್ಮ ದಾರಿ ತಪ್ಪಿತು

  1982ರಲ್ಲಿ 'ಧರ್ಮ ದಾರಿ ತಪ್ಪಿತು' ಚಿತ್ರದ ನಟನೆಗಾಗಿ ಮೂರನೇ ಸಲ ಜಯಂತಿ ಅವರಿಗೆ ಅತ್ಯುತ್ತಮ ನಟಿ ರಾಜ್ಯ ಪ್ರಶಸ್ತಿ ಸಿಕ್ಕಿತ್ತು. ಈ ಚಿತ್ರದಲ್ಲಿ ಶಂಕರ್ ನಾಗ್, ಶ್ರೀನಾಥ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಗಿರಿಬಾಬು ನಿರ್ದೇಶಿಸಿದ್ದರು.

  ಮಸಣದ ಹೂವು

  ಮಸಣದ ಹೂವು

  1985ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಮೂಡಿಬಂದಿದ್ದ 'ಮಸಣದ ಹೂವು' ಚಿತ್ರದ ನಟನೆಗಾಗಿ ನಾಲ್ಕನೇ ಸಲ ಅತ್ಯುತ್ತಮ ನಟಿ ರಾಜ್ಯ ಪ್ರಶಸ್ತಿ ಲಭಿಸಿತು. ಈ ಚಿತ್ರದಲ್ಲಿ ಅಂಬರೀಶ್, ಹೇಮಾ ಚೌಧರಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

  ಶಿವಣ್ಣನ 'ಆನಂದ್'

  ಶಿವಣ್ಣನ 'ಆನಂದ್'

  1986ರಲ್ಲಿ ನಟ ಶಿವರಾಜ್ ಕುಮಾರ್ ನಟಿಸಿದ್ದ 'ಆನಂದ್' ಚಿತ್ರದ ನಟನೆಗಾಗಿ ಜಯಂತಿ ಅವರಿಗೆ ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿ ಸಿಕ್ಕಿತ್ತು. ಸಿಂಗೀತಂ ಶ್ರೀನಿವಾಸ್ ರಾವ್ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ತಾಯಿ ಪಾತ್ರದಲ್ಲಿ ಜಯಂತಿ ಅಭಿನಯಿಸಿದ್ದರು.

  ಟುವ್ವಿ ಟುವ್ವಿ ಟುವ್ವಿ

  ಟುವ್ವಿ ಟುವ್ವಿ ಟುವ್ವಿ

  1999ರಲ್ಲಿ ಬಿಡುಗಡೆಯಾಗಿದ್ದ 'ಟುವ್ವಿ ಟುವ್ವಿ ಟುವ್ವಿ' ಸಿನಿಮಾದ ನಟನೆಗಾಗಿ ಜಯಂತಿ ಅವರಿಗೆ ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿ ದೊರೆತಿತ್ತು. ಸಿಂಗೀತಂ ಶ್ರೀನಿವಾಸ್ ರಾವ್ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್ ನಾಯಕರಾಗಿದ್ದರು.

  English summary
  These 6 Movies of Actress Jayanthi got State Award; Here is the List.
  Monday, July 26, 2021, 17:48
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X