ಅಕ್ಷಯ ತೃತೀಯದಂದು ಚಿನ್ನ ಖರೀದಿಸಲು ಹೊರಟ ತಾರೆಯರಿವರು..

By Harshitha

Recommended Video

ಬಂಗಾರ ಖರೀದಿಸ್ತಿರೋ ಸ್ಯಾಂಡಲ್ವುಡ್ ಬಂಗಾರಿಯರು |sandalwood stars special akshayatritiya| Filmibeat Kannada

ಇವತ್ತು ಅಕ್ಷಯ ತೃತೀಯ... ಚಿನ್ನ ಖರೀದಿಗೆ ಇಂದು ಯೋಗ್ಯವಾದ ದಿನ ಎಂಬ ನಂಬಿಕೆ ಹಲವರಲ್ಲಿ ಇದೆ. ಈ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡಿರುವ ಅನೇಕ ಒಡವೆ ವ್ಯಾಪಾರಿಗಳು ಇಂದು ಗ್ರಾಹಕರನ್ನು ಸೆಳೆಯಲು ತರಹೇವಾರಿ ಆಫರ್ ಗಳನ್ನು ಘೋಷಿಸಿದ್ದಾರೆ.

ಅಕ್ಷಯ ತೃತೀಯದ ದಿನ ಮನೆಗೆ ಚಿನ್ನ ತರಬೇಕೆನ್ನುವುದು ಹಲವು ಮಹಿಳೆಯರ ಬಯಕೆ. ಇದಕ್ಕೆ ಕೆಲ ನಟಿಯರೂ ಕೂಡ ಹೊರತಾಗಿಲ್ಲ. ಇಂದು ಕನ್ನಡದ ಕೆಲ ನಟಿಯರು ಕೂಡ ವಿವಿಧ ಒಡವೆ ಖರೀದಿ ಮಾಡಲು ಮುಂದಾಗಿದ್ದಾರೆ.

ಹಾಗಾದ್ರೆ, ಯಾರ್ಯಾರು ಯಾವ್ಯಾವ ಒಡವೆ ಕೊಂಡುಕೊಳ್ಳಬಹುದು ಎಂಬ ಕುತೂಹಲ ಇದ್ದರೆ, ಫೋಟೋ ಸ್ಲೈಡ್ ಗಳತ್ತ ಗಮನ ಹರಿಸಿ...

ಗೋಲ್ಡ್ ಕಾಯಿನ್ ತೆಗೆದುಕೊಳ್ತಾರೆ ಸಂಜನಾ ಗಲ್ರಾನಿ

ಗೋಲ್ಡ್ ಕಾಯಿನ್ ತೆಗೆದುಕೊಳ್ತಾರೆ ಸಂಜನಾ ಗಲ್ರಾನಿ

ನಟಿ ಸಂಜನಾ ಗರ್ಲಾನಿ ಮನೆಯಲ್ಲಿ ಅಕ್ಷಯ ತೃತೀಯ ದಿನ ಚಿನ್ನ ಖರೀದಿ ಮಾಡುವ ಅಭ್ಯಾಸ ಇದೆ. ಒಂದು ವೇಳೆ ಒಡವೆ ಖರೀದಿ ಸಾಧ್ಯ ಆಗದೇ ಇದ್ದರೂ, ಗೋಲ್ಡ್ ಕಾಯಿನ್ ನ ಮಿಸ್ ಮಾಡದೆ ಕೊಂಡುಕೊಳ್ತಾರಂತೆ ನಟಿ ಸಂಜನಾ.

ಅಕ್ಷಯ ತೃತೀಯಾ : ಚಿನ್ನ ಖರೀದಿ ಬೇಡ ಎನ್ನಲು 7 ಕಾರಣ

ವಜ್ರಾಭರಣ ಪ್ರಿಯೆ ಭಾವನಾ

ವಜ್ರಾಭರಣ ಪ್ರಿಯೆ ಭಾವನಾ

ನಟಿ ಭಾವನಾ ರಾವ್ ಗೆ ವಜ್ರಾಭರಣ ಅಂದ್ರೆ ಪ್ರಾಣ. ಅಪರೂಪಕ್ಕೆ ಆಭರಣಗಳನ್ನು ಧರಿಸುವ ಭಾವನಾಗೆ ಸರಳವಾದ ಒಡವೆಗಳೆಂದರೆ ಇಷ್ಟ. ಈ ಬಾರಿಯ ಅಕ್ಷಯ ತೃತೀಯದಂದು ಚಿನ್ನದ ಓಲೆ ಖರೀದಿ ಮಾಡ್ತಾರಂತೆ ಭಾವನಾ ರಾವ್

ಅಬ್ಬಾ! ಅಕ್ಷಯ ತೃತೀಯಕ್ಕೆ ಇಷ್ಟೆಲ್ಲ ಇತಿಹಾಸ ಇದೆಯಾ?

ಹಿತಾ ಇನ್ನೂ ಏನೂ ಡಿಸೈಡ್ ಮಾಡಿಲ್ಲ!

ಹಿತಾ ಇನ್ನೂ ಏನೂ ಡಿಸೈಡ್ ಮಾಡಿಲ್ಲ!

ಅಕ್ಷಯ ತೃತೀಯವನ್ನ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡದೇ ಇದ್ರೂ, ಚಿನ್ನವನ್ನ ಖರೀದಿ ಮಾಡ್ತಾರೆ ಹಿತಾ ಚಂದ್ರಶೇಖರ್. ಈ ಬಾರಿ ಏನು ಖರೀದಿ ಮಾಡಬೇಕು ಎಂಬುದರ ಬಗ್ಗೆ ಹಿತಾ ಇನ್ನೂ ಡಿಸೈಡ್ ಮಾಡಿಲ್ಲ. ಅಂಗಡಿಗೆ ಹೋದ ಮೇಲೆ ನಿರ್ಧಾರ ಮಾಡ್ತಾರಂತೆ.

ಮದುವೆ ಖುಷಿಯಲ್ಲಿ ಮೇಘನಾ

ಮದುವೆ ಖುಷಿಯಲ್ಲಿ ಮೇಘನಾ

ಮದುವೆ ಖುಷಿಯಲ್ಲಿ ಇರುವ ಮೇಘನಾ ರಾಜ್ ಅದಾಗಲೇ ಒಡವೆ ಖರೀದಿ ಮಾಡಿ ಮುಗಿಸಿದ್ದಾರಂತೆ. ಅಕ್ಷಯ ತೃತೀಯ ಬಗ್ಗೆ ನಂಬಿಕೆ ಇರುವ ಕಾರಣಕ್ಕೆ, ಇಂದು ಚಿಕ್ಕ ಕಿವಿಯೋಲೆ ಖರೀದಿ ಮಾಡ್ತಾರಂತೆ.

More from Filmibeat

English summary
Kannada Actress Sanjana, Bhavana Rao, Meghana Raj and Hita Chandrashekar are ready to buy gold on Akshaya tritiya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X