For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್ ವುಡ್ ನ ಈ 4 ಸುಂದರಿಯರಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು

  |
  ಕನ್ನಡದ ಈ ನಾಲ್ಕು ಜನ ನಟಿಯರಿಗೆ ಸ್ಯಾಂಡಲ್ ವುಡ್ ನಲ್ಲಿ ಭಾರಿ ಬೇಡಿಕೆ | FILMIBEAT KANNADA

  'ನಾನು ಸಿನಿಮಾ ಮಾಡಬೇಕು..ನಾನು ಸ್ಟಾರ್ ಆಗಬೇಕು...' ಎನ್ನುವ ಆಸೆ ಯಾರಿಗೆ ತಾನೇ ಇರುವುದಿಲ್ಲ. ಅಂತಹ ಆಸೆ ಹೊತ್ತು ಚಿತ್ರರಂಗಕ್ಕೆ ಬರುವ ನಾಯಕಿಯರ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಲೇ ಇದೆ. ಒಂದು ವರ್ಷದಲ್ಲಿ ಅದೆಷ್ಟೋ ನಟಿಯರು ಚಿತ್ರರಂಗಕ್ಕೆ ಬರುತ್ತಾರೆ. ಇದರಲ್ಲಿ ಅನೇಕರು ಬಂದ ವೇಗದಲ್ಲಿಯೇ ವಾಪಸ್ ಹೋಗುತ್ತಾರೆ.

  ಸಿನಿಮಾವನ್ನು ಎಲ್ಲರೂ ಇಷ್ಟ ಪಡುತ್ತಾರೆ, ಆದರೆ, ಸಿನಿಮಾ ಯಾರನ್ನು ಇಷ್ಟ ಪಡುತ್ತದೆಯೋ ಅವರು ಮಾತ್ರ ಇಲ್ಲಿ ಭದ್ರವಾದ ಸ್ಥಾನ ಪಡೆದುಕೊಳ್ಳುತ್ತಾರೆ. ಅದೇ ರೀತಿ ಕನ್ನಡದ ನಾಲ್ಕು ನಟಿಯರು ಈಗ ಯುವರಾಣಿ ಪಟ್ಟ ಪಡೆಯುತ್ತಿದ್ದಾರೆ.

  ಕರ್ನಾಟಕದ ಹೊಸ ಕ್ರಶ್ 'ಕೆಮಿಸ್ಟ್ರಿ ಆಫ್ ಕರಿಯಪ್ಪ' ನಾಯಕಿಗೆ ಲಕ್ಕೋ ಲಕ್ಕು ಕರ್ನಾಟಕದ ಹೊಸ ಕ್ರಶ್ 'ಕೆಮಿಸ್ಟ್ರಿ ಆಫ್ ಕರಿಯಪ್ಪ' ನಾಯಕಿಗೆ ಲಕ್ಕೋ ಲಕ್ಕು

  ನಟಿ ಆಶಿಕಾ ರಂಗನಾಥ್, ಅದಿತಿ ಪ್ರಭುದೇವ, ತಾನ್ಯ ಹೋಪ್, ಈಗಸಂಜನಾ ಆನಂದ್ ಈ ನಾಲ್ಕು ನಟಿಯರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಶುರುವಾಗಿದೆ. ಸಾಲು ಸಾಲು ಸಿನಿಮಾಗಳು ಇವರ ಕೈ ಸೇರುತ್ತಿವೆ.

  ಪ್ರತಿಭೆ, ಅದೃಷ್ಟ ಎರಡೂ ಇರುವ ಈ ನಟಿಯರು ಬಹುಕಾಲ ಇಂಡಸ್ಟ್ರಿಯಲ್ಲಿ ಉಳಿಯುವ, ಬೆಳೆಯುವ ಸೂಚನೆ ನೀಡಿದ್ದಾರೆ. ಮುಂದೆ ಓದಿ...

  ಒಳ್ಳೆಯ ಅವಕಾಶಗಳೆಲ್ಲ ಆಶಿಕಾ ಪಾಲು

  ಒಳ್ಳೆಯ ಅವಕಾಶಗಳೆಲ್ಲ ಆಶಿಕಾ ಪಾಲು

  ಆಶಿಕಾ ರಂಗನಾಥ್ ಮೊದಲು 'ಮುಗುಳುನಗೆ' ಬೀರಿ ಬಳಿಕ ಚುಟು ಚುಟು ಅಂತ ಹುಡುಗರ ಹೃದಯಕ್ಕೆ ದಾಳಿ ಮಾಡಿದ ನಟಿ. ಸದ್ಯ, ಒಳ್ಳೆ ಒಳ್ಳೆಯ ಸಿನಿಮಾಗಳೆಲ್ಲ ಇವರ ಪಾಲಾಗಿವೆ. 'ಅವತಾರ್ ಪುರುಷ', 'ಗರುಡ', 'ರಂಗಮಂದಿರ' ಆಶಿಕಾ ಮುಂದಿನ ಸಿನಿಮಾಗಳು. ಜೊತೆಗೆ ಪವನ್ ಒಡೆಯರ್ ನಿರ್ದೇಶನದ, ಇಶಾನ್ ನಟನೆಯ 'ರೆಮೋ' ಸಿನಿಮಾಗೆ ಸಹ ಆಶಿಕಾ ನಾಯಕಿಯಾಗಿದ್ದಾರೆ. ಇಂದು (ಗುರುವಾರ) ಈ ಚಿತ್ರದ ಮುಹೂರ್ತ ಆಗಿದೆ.

  ಶಾನೆ ಟಾಪ್ ಅಗವ್ಳೆ ಅದಿತಿ ಪ್ರಭುದೇವ

  ಶಾನೆ ಟಾಪ್ ಅಗವ್ಳೆ ಅದಿತಿ ಪ್ರಭುದೇವ

  ಕಿರುತೆರೆಯಿಂದ ಹಿರಿತೆರೆಗೆ ಬಂದ ಅದಿತಿ ಪ್ರಭುದೇವ ಈಗ ಒಂದರ ನಂತರ ಒಂದು ಸಿನಿಮಾ ಮಾಡುತ್ತಲೇ ಇದ್ದಾರೆ. 'ಬ್ರಹ್ಮಾಚಾರಿ', 'ರಂಗನಾಯಕಿ', 'ತೋತಾಪುರಿ', 'ಸಿಂಗ', 'ಕುಸ್ತಿ', 'ಆಪರೇಷನ್ ನಕ್ಷತ್ರ' ಈ ಎಲ್ಲ ಅವಕಾಶಗಳು ಅದಿತಿ ಕೈ ಸೇರಿವೆ. ಒಂದೇ ಸಾಲಿನಲ್ಲಿ ಹೇಳಬೇಕು ಅಂದರೆ ಅದಿತಿ ಸ್ಯಾಂಡಲ್ ವುಡ್ ನಲ್ಲಿ ಶಾನೆ ಟಾಪ್ ಅಗವ್ಳೆ.

  ಪವನ್ ಒಡೆಯರ್ ಸಿನಿಮಾದಲ್ಲಿ ಆಶಿಕಾ ರಂಗನಾಥ್ಪವನ್ ಒಡೆಯರ್ ಸಿನಿಮಾದಲ್ಲಿ ಆಶಿಕಾ ರಂಗನಾಥ್

  ಸಂಜನಾ ಆನಂದ್ ಮೇಲೆ ಎಲ್ಲರಿಗೂ ಲವ್ವು

  ಸಂಜನಾ ಆನಂದ್ ಮೇಲೆ ಎಲ್ಲರಿಗೂ ಲವ್ವು

  ಸಹಜ ಸುಂದರಿ ಸಂಜನಾ ಆನಂದ್ 'ಕೆಮಿಸ್ಟ್ರಿ ಆಫ್ ಕರಿಯಪ್ಪ' ಸಿನಿಮಾದಿಂದ ಕನ್ನಡಿಗರಿಗೆ ಪರಿಚಯವಾದರು. ಆ ಸಿನಿಮಾದ ನಟನೆಯಿಂದ ಅವರಿಗೆ ಹೆಚ್ಚು ಅವಕಾಶಗಳು ಬಂದವು. ಇದೀಗ 'ಕುಷ್ಕ', 'ಸಲಗ', 'ಕ್ಷತ್ರಿಯಾ' ಅಜಯ್ ರಾವ್ ಹೊಸ ಸಿನಿಮಾ ಹಾಗೂ ಶಿವರಾಜ್ ಕುಮಾರ್ ಬ್ಯಾನರ್ ನ 'ಹನಿಮೂನ್' ವೆಬ್ ಸೀರಿಸ್ ನಲ್ಲಿಯೂ ಸಂಜನಾ ಕಾಣಿಸಿಕೊಳ್ಳುತ್ತಿದ್ದಾರೆ.

  ಬಜಾರ್ ನಮ್ದೆ ಇವತ್ತು ಎಂದ ತಾನ್ಯ

  ಬಜಾರ್ ನಮ್ದೆ ಇವತ್ತು ಎಂದ ತಾನ್ಯ

  'ಬಜಾರ್ ನಮ್ದೆ ಇವತ್ತು ಬಸಣ್ಣಿ ಬಾ..' ಅಂತ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಾನ್ಯ ರನ್ನು ಕರೆದಿದ್ದರು. ಅದೇ ರೀತಿ ಈಗ ತಾನ್ಯ ಕ್ರೇಜ್ ಜಾಸ್ತಿಯಾಗುತ್ತಿದೆ. 'ಯಜಮಾನ' ಹಾಗೂ 'ಅಮರ್' ರೀತಿಯ ದೊಡ್ಡ ಸಿನಿಮಾಗಳ ಮೂಲಕ ಲಾಂಚ್ ಆದ ತಾನ್ಯ, ಈಗ ಉಪೇಂದ್ರ ಜೊತೆಗೆ 'ಹೋಮ್ ಮಿನಿಸ್ಟರ್' ಸಿನಿಮಾ ಮಾಡುತ್ತಿದ್ದಾರೆ. 'ಖಾಕಿ' ಚಿತ್ರಕ್ಕೂ ಆಯ್ಕೆ ಆಗಿದ್ದಾರೆ. ಜೊತೆಗೆ ತಮಿಳು ತೆಲುಗಿನಲ್ಲು ತಾನ್ಯ ಗಮನ ಸೆಳೆಯುತ್ತಾರೆ.

  ಇನ್ನಷ್ಟು ವರ್ಷ ಉಳಿತ್ತಾರೆ, ಬೆಳಿತ್ತಾರೆ

  ಇನ್ನಷ್ಟು ವರ್ಷ ಉಳಿತ್ತಾರೆ, ಬೆಳಿತ್ತಾರೆ

  ಅದಿತಿ ಪ್ರಭುದೇವ, ಆಶಿಕಾ ರಂಗನಾಥ್, ತಾನ್ಯ ಹೋಪ್ ಹಾಗೂ ಸಂಜನಾ ಆನಂದ್ ಈ ನಾಲ್ಕು ನಟಿಯರಿಗೆ ಸಿಗುತ್ತಿರುವ ಸಿನಿಮಾಗಳನ್ನು ನೋಡಿದರೆ ಈ ನಟಿಯರು ಇನ್ನಷ್ಟು ವರ್ಷ ಚಿತ್ರರಂಗದಲ್ಲಿ ಉಳಿತ್ತಾರೆ, ಇನ್ನಷ್ಟು ಎತ್ತರಕ್ಕೆ ಬೆಳಿತ್ತಾರೆ ಎನ್ನುವ ಸೂಚನೆ ಸಿಗುತ್ತಿದೆ. ಈ ನಟಿಯರ ಕೆರಿಯರ್ ಇದೇ ರೀತಿ ಮುಂದುವರೆದರೆ, ಮುಂದೆ, ಸ್ಟಾರ್ ನಟಿಯರು ಆಗುವುದು ಅನುಮಾನವಿಲ್ಲ.

  English summary
  Kannada actress Ashika Ranganath, Sanjana Anand, Adithi Prabhudeva and Tanya Hope are on demand in sandalwood.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X