twitter
    For Quick Alerts
    ALLOW NOTIFICATIONS  
    For Daily Alerts

    ಸೆಪ್ಟೆಂಬರ್ 29ರವರೆಗೆ ಈ ಚಿತ್ರಗಳ ಟಿಕೆಟ್ ಪಿವಿಆರ್‌ನಲ್ಲಿ ಕೇವಲ 100 ರೂಪಾಯಿಗೆ ಲಭ್ಯ

    |

    ಕಳೆದ ಶುಕ್ರವಾರ ( ಸೆಪ್ಟೆಂಬರ್ 23 ) ರಾಷ್ಟ್ರೀಯ ಸಿನಿಮಾ ದಿನವನ್ನು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಆಯೋಜನೆ ಮಾಡಿತ್ತು. ಕೊರೊನಾ ವೈರಸ್ ಸಂದರ್ಭದಲ್ಲಿ ಚಿತ್ರಮಂದಿರಗಳು ಮುಚ್ಚಿ ನಂತರ ಪುನರಾರಂಭಗೊಂಡಾಗ ಚಿತ್ರಮಂದಿರಗಳಿಗೆ ಧೈರ್ಯದಿಂದ ಬಂದು ಚಿತ್ರ ವೀಕ್ಷಿಸಿ ತಮ್ಮ ವ್ಯವಹಾರ ಮೊದಲಿನಂತಾಗುವಂತೆ ಮಾಡಿದ ಸಿನಿ ಪ್ರೇಮಿಗಳಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಈ ವಿಶೇಷ ದಿನವನ್ನು ಆಯೋಜಿಸಲಾಗಿತ್ತು.

    ಈ ದಿನದಂದು ಭಾರತದ ಮಲ್ಟಿಪ್ಲೆಕ್ಸ್‌ಗಳಾದ ಪಿವಿಆರ್, ಐನಾಕ್ಸ್, ಗೋಪಾಲನ್, ಕಾರ್ನಿವಾಲ್, ಸಿನಿಪಾಲಿಸ್ ಹಾಗೂ ಮುಂತಾದ ಕಡೆ ಟಿಕೆಟ್ ದರವನ್ನು 75 ರೂಪಾಯಿಗೆ ತಗ್ಗಿಸಲಾಗಿತ್ತು. ಹೀಗೆ ವಿನಾಯಿತಿ ದರದಲ್ಲಿ ಟಿಕೆಟ್ ದೊರೆತ ಕಾರಣ ಅಂದು ದೇಶದಾದ್ಯಂತ ಬಹುತೇಕ ಮಲ್ಟಿಪ್ಲೆಕ್ಸ್‌ಗಳು ತುಂಬಿದ ಪ್ರದರ್ಶನವನ್ನು ಕಂಡವು. ಈ ಮೂಲಕ ದುಬಾರಿ ಟಿಕೆಟ್ ದರದ ಬದಲಾಗಿ ಸರಿಯಾದ, ಜನರ ಕೈಗೆಟಕುವ ದರದಲ್ಲಿ ಟಿಕೆಟ್ ವಿತರಿಸಿದರೆ ಜನರು ಹೆಚ್ಚಿನ ಪ್ರಮಾಣದಲ್ಲಿ ಚಿತ್ರಮಂದಿರದ ಕಡೆ ಬರುತ್ತಾರೆ ಎಂಬ ವಿಷಯ ಬಹಿರಂಗವಾಯಿತ
    ಹೀಗೆ ಕಡಿಮೆ ಟಿಕೆಟ್ ದರ ಇದ್ದ ದಿನ ಜನ ತೋರಿಸಿದ ಪ್ರತಿಕ್ರಿಯೆಯಿಂದ ಖುಷಿಗೊಂಡ ಮಲ್ಟಿಪ್ಲೆಕ್ಸ್‌ಗಳು ಈಗ ದಸರಾ ವಿಶೇಷ ಎಂದು ಮತ್ತೆ ಕಡಿಮೆ ದರದಲ್ಲಿ ಟಿಕೆಟ್ ವಿತರಿಸಲು ಮುಂದಾಗಿದೆ. ಹೌದು, ಇಂದಿನಿಂದ ( ಸೆಪ್ಟೆಂಬರ್ 27 ) ಗುರುವಾರದವರೆಗೆ ( ಸೆಪ್ಟೆಂಬರ್ 29 ) ಕೆಲ ಆಯ್ದ ಚಿತ್ರಗಳ ಟಿಕೆಟ್‌ನ್ನು 100 ರೂಪಾಯಿಗೆ ವಿತರಿಸಲು ಪಿವಿಆರ್ ಮುಂದಾಗಿದೆ.

    These movie tickets are available for 100 rupees in PVR till September 29

    ಅವತಾರ್, ಬ್ರಹ್ಮಾಸ್ತ್ರ, ಕ್ರಿಮಿನಲ್, ಚುಪ್, ದೋಖಾ, ಆಧಾರ್, ಚಟ್ಟಂಬಿ, ಪ್ರೇಮ್ ಗೀತ್ 3 ಈ ಚಿತ್ರದ ಟಿಕೆಟ್‌ಗಳನ್ನು ಕೇವಲ 100 ರೂಪಾಯಿಗೆ ಖರೀದಿಸಬಹುದಾಗಿದೆ. ಆನ್‌ಲೈನ್ ಮೂಲಕ ಬುಕ್ ಮಾಡಿದರೆ ಇಂಟರ್‌ನೆಟ್ ಚಾರ್ಜಸ್ ಸೇರ್ಪಡೆಗೊಳ್ಳಲಿದ್ದು, ನೇರವಾಗಿ ಟಿಕೆಟ್ ಕೌಂಟರ್‌ನಲ್ಲಿ ಖರೀದಿಸಿದರೆ ಮಾತ್ರ 100 ರೂಪಾಯಿಗೆ ಟಿಕೆಟ್‌ಗಳು ಲಭಿಸಲಿವೆ. ಇನ್ನು ಈ ಚಿತ್ರಗಳನ್ನು ಹೊರತುಪಡಿಸಿ ಉಳಿದ ಚಿತ್ರಗಳ ಟಿಕೆಟ್ ದರದಲ್ಲಿ ಯಾವುದೇ ವಿನಾಯಿತಿ ಇರುವುದಿಲ್ಲ.

    English summary
    These movie tickets are available for 100 rupees in PVR from September 27 to September 29. Take a look
    Tuesday, September 27, 2022, 20:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X