'ಡೆವಿಲ್' ಚಿತ್ರಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿರುವ ತಾರೆಯರು ಯಾರ‍್ಯಾರು?
ನಟ ದರ್ಶನ್ ಅಭಿನಯದ 'ಡೆವಿಲ್' ಸಿನಿಮಾ ಬಿಡುಗಡೆಗೆ ಇನ್ನು 100 ದಿನ ಬಾಕಿಯಿದೆ. ಈಗಾಗಲೇ ಅಭಿಮಾನಿಗಳು ದಿನಗಣನೆ ಆರಂಭಿಸಿದ್ದಾರೆ. 'ಇದ್ರೇ ನೆಮ್ದಿಯಾಗಿರ್ಬೇಕ್' ಸಾಂಗ್ ರಿಲೀಸ್ ಆಗಿ ಹಿಟ್ ಆಗಿದೆ. ಶೀಘ್ರದಲ್ಲೇ ಮತ್ತೊಂದು ಸಾಂಗ್ ರಿಲೀಸ್ ಪ್ರಯತ್ನ ನಡೀತಿದೆ. ಪೋಸ್ಟ್ ಪ್ರೊಡಕ್ಷನ್ಸ್ ವರ್ಕ್ ಭರದಿಂದ ಸಾಗುತ್ತಿದೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಮತ್ತೆ ಜೈಲು ಸೇರಿ 20 ದಿನ ಕಳೆದಿದೆ. ಸದ್ಯಕ್ಕೆ ದರ್ಶನ್ ಜೈಲಿನಿಂದ ಬಿಡುಗಡೆ ಆಗುವುದು ಕಷ್ಟ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಡಿಸೆಂಬರ್ 12ಕ್ಕೆ 'ಡೆವಿಲ್' ಸಿನಿಮಾ ತೆರೆಗೆ ಅಪ್ಪಳಿಸಲಿದೆ. ಅಷ್ಟರಲ್ಲಿ ಹೇಗಾದರೂ ದರ್ಶನ್ ಸಂಕಷ್ಟದಿಂದ ಪಾರಾಗಿ ಜೈಲಿನಿಂದ ಹೊರಗೆ ಬರುತ್ತಾರಾ? ಎಂದು ಅಭಿಮಾನಿಗಳು, ಆಪ್ತರು ಕಾಯುತ್ತಿದ್ದಾರೆ. ಸದ್ಯ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಮಲಗಲು ಹಾಸಿಗೆ, ದಿಂಬು ಇಲ್ಲದೇ ಸಂಕಷ್ಟಪಡುತ್ತಿದ್ದಾರೆ.

ಹಾಸಿಗೆ, ದಿಂಬು ಮತ್ತು ಕಂಬಳಿ ಸೇರಿದಂತೆ ಮೂಲಭೂತ ಸೌಲಭ್ಯಗಳಿಗೆ ಮನವಿ ಮಾಡಿ ದರ್ಶನ್ ತಮ್ಮ ವಕೀಲರು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇನ್ನು ದರ್ಶನ್‌ನ ಬಳ್ಳಾರಿ ಕೇಂದ್ರ ಜೈಲಿಗೆ ಸ್ಥಳಾಂತರಿಸುವಂತೆ ಪ್ರಾಸಿಕ್ಯೂಷನ್ ಅರ್ಜಿ ಸಲ್ಲಿಸಿದೆ. ಈ ಅರ್ಜಿಗಳ ತೀರ್ಪನ್ನು ಸಿಟಿ ಸಿವಿಲ್ ಹಾಗೂ ಸೆಷನ್ಸ್ ಕೋರ್ಟ್ ಸೆಪ್ಟೆಂಬರ್ 9ಕ್ಕೆ ಕಾಯ್ದಿರಿಸಿದೆ. ಮತ್ತೊಂದು ಜಾಮೀನು ಕೋರಿ ಪವಿತ್ರಾ ಗೌಡ ಸಲ್ಲಿಸಿದ್ದ ಅರ್ಜಿ ವಜಾ ಆಗಿದೆ.
14 ವರ್ಷಗಳ ಹಿಂದೆ ದರ್ಶನ್ ಜೈಲಿನಲ್ಲಿ ಇದ್ದಾಗಲೇ 'ಸಾರಥಿ' ಸಿನಿಮಾ ಬಿಡುಗಡೆ ಆಗಿತ್ತು. ಸಂಕಷ್ಟಕ್ಕೆ ಸಿಲುಕಿದ್ದ ದರ್ಶನ್ ಈ ಸಿನಿಮಾ ಮೂಲಕ ಮತ್ತೆ ಗೆದ್ದು ಬೀಗಿದ್ದರು. ಸಿನಿಮಾ ತೆರೆಕಂಡು ಕೆಲವೇ ದಿನಗಳಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದರು. ರಾಜ್ಯಾದ್ಯಂತ ವಿಜಯಯಾತ್ರೆ ಕೈಗೊಂಡು ಸಂಕಷ್ಟದಲ್ಲಿ ತಮ್ಮ ಕೈಹಿಡಿದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದರು. ಈ ಬಾರಿ ಕೂಡ ದರ್ಶನ್ ಜೈಲಿನಲ್ಲಿ ಇರುವಾಗಲೇ 'ಡೆವಿಲ್' ಸಿನಿಮಾ ತೆರೆಗೆ ಬರಬಹುದು ಎನ್ನುವ ಲೆಕ್ಕಾಚಾರ ಶುರುವಾಗಿದೆ.
ಪ್ರಕಾಶ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ 'ಡೆವಿಲ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಅಭಿಮಾನಿಗಳು ಮಾತ್ರವಲ್ಲ ಅವರ ಆಪ್ತರು ಸಿನಿಮಾ ನೋಡಲು ಕಾಯುತ್ತಿದ್ದಾರೆ. ನಟಿಯರಾದ ರಚಿತಾ ರಾಮ್, ರಕ್ಷಿತಾ ಪ್ರೇಮ್, ಮೇಘಾ ಶೆಟ್ಟಿ, ನಿರ್ದೇಶಕ ಪ್ರೇಮ್, ನಿರ್ದೇಶಕ ತರುಣ್ ಸುಧೀರ್, ನಟ ಲವ್ಲಿಸ್ಟಾರ್ ಪ್ರೇಮ್ ಹೀಗೆ ಹಲವರು 'ಡೆವಿಲ್' ಚಿತ್ರ ನೋಡಲು ಕಾಯುತ್ತಿದ್ದಾರೆ. ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡಿ ಸಂಭ್ರಮಿಸಲು ಎದುರು ನೋಡುತ್ತಿದ್ದಾರೆ.
'ಇದ್ರೇ ನೆಮ್ದಿಯಾಗಿರ್ಬೇಕ್' ಸಾಂಗ್ ಬಿಡುಗಡೆಯಾದ ಕೂಡಲೇ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಲಿಂಕ್ ಶೇರ್ ಮಾಡಿ ಮೆಚ್ಚಿಕೊಂಡಿದ್ದರು. ಇತ್ತೀಚೆಗೆ ನಿರ್ದೇಶಕ ಜೋಗಿ ಪ್ರೇಮ್ ಮಾತನಾಡಿ "ದರ್ಶನ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರು ಜೈಲಿಗೆ ಹೋಗಿರುವುದು ಕೆಲವರಿಗೆ ಖುಷಿಯಾಗಿದೆ. ದರ್ಶನ್ ಆದಷ್ಟು ಬೇಗ ಜೈಲಿನಿಂದ ಹೊರ ಬರುತ್ತಾರೆ. ಬಂದ ಕೂಡಲೇ ನಾನು ಅವರೊಟ್ಟಿಗೆ ಸಿನಿಮಾ ಮಾಡ್ತೀನಿ" ಎಂದಿದ್ದಾರೆ.

ನನ್ನ ಗಾಡ್ ಫಾದರ್ ದರ್ಶನ್ ಸರ್ ಎಂದು ರಚಿತಾ ರಾಮ್ ಹೇಳುತ್ತಾ ಬಂದಿದ್ದಾರೆ. 'ಡೆವಿಲ್' ಚಿತ್ರದ 100 ದಿನಗಳ ಕೌಂಟ್‌ಡೌನ್ ಪೋಸ್ಟರ್ ಅನ್ನು ಕೂಡ ಹಂಚಿಕೊಂಡಿದ್ದಾರೆ. ರಚನಾ ರೈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಅಚ್ಯುತ್ ಕುಮಾರ್, ಮಹೇಶ್ ಮಂಜ್ರೇಕರ್, ಅವಿನಾಶ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿ. ಅಜನೀಶ್ ಲೋಕನಾಥ್ ಸಂಗೀತ, ಸುಧಾಕರ್ ರಾಜ್ ಛಾಯಾಗ್ರಹಣ ಚಿತ್ರಕ್ಕಿದೆ. ಸಂತು ಮಾಸ್ಟರ್ ಕೊರಿಯೋಗ್ರಫಿಯಲ್ಲಿ ಚಿತ್ರದ 4 ಸಾಂಗ್ಸ್ ಚಿತ್ರೀಕರಣ ಮಾಡಲಾಗಿದೆ. ಥಾಯ್ಲೆಂಡ್‌ನಲ್ಲಿ ಒಂದು ಸಾಂಗ್ ಸೆರೆಹಿಡಿಯಲಾಗಿದೆ.


Click it and Unblock the Notifications











