'ನನ್ನನ್ನು ರೇಪ್ ಮಾಡುವ ಗುಂಡಿಗೆ ಯಾರಿಗೂ ಇಲ್ಲ'
ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ 'ಕಲಾವಿದ' (1997) ಚಿತ್ರದಲ್ಲಿ "ಹೂವಾ ರೋಜಾ ಹೂವ..ಹೂವ ನನ್ನ ಜೀವ.." ಎಂದು ಮೈ ಕುಲುಕಿಸಿದ್ದ ತಾರೆ ರೋಜಾ ಈಗ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಶಾಸಕಿ ಎಂಬುದು ಗೊತ್ತೇ ಇದೆ. ಅವರು ಕೊಟ್ಟಿರುವ ಹೇಳಿಕೆ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಅವರ ಮಾತನ್ನು ಕೇಳಿದವರೂ ಗಲಿಬಿಲಿಗೊಂಡಿದ್ದಾರೆ. "ಅವರು ನನ್ನನ್ನೇನು ಮಾಡಲಾರರು, ರೇಪ್ ಮಾಡುವ ಗುಂಡಿಗೆ ಅವರಿಗಿಲ್ಲ" ಎಂದಿದ್ದಾರೆ. ಆಂಧ್ರ ವಿಧಾನಸಭೆ ಕಲಾಪದಲ್ಲಾದ ಗಲಾಟೆ ಗದ್ದಲದ ಬಗ್ಗೆ ಅವರು ಪ್ರಸ್ತಾಪಿಸುತ್ತಾ ಈ ಮಾತನ್ನು ಆಡಿದ್ದಾರೆ.

ಟಿವಿ ವಾಹಿನಿಯ ಮಹಿಳಾ ಪತ್ರಕರ್ತೆಯೊಬ್ಬರು ರೋಜಾರನ್ನು ಮಾತಿಗೆಳೆದರು. "ನೀವು ಪದೇಪದೇ ವಿಧಾನಸಭೆಯಲ್ಲಿ ಗಲಾಟೆ ಗದ್ದಲ ಮಾಡುತ್ತಿದ್ದೀರಾ. ಈ ಹಿನ್ನೆಲೆಯಲ್ಲಿ ಸಾಕಷ್ಟು ರಾದ್ಧಾಂತವಾಗಿದೆ. ನಿಮ್ಮನ್ನು ವೈಯಕ್ತಿಕವಾಗಿ ಟಾರ್ಗೆಟ್ ಮಾಡುತ್ತಿದ್ದಾರೆ ಎಂದುಕೊಳ್ಳುತ್ತಿದ್ದೀರಾ?" ಎಂದು ಮಹಿಳಾ ಪತ್ರಕರ್ತೆ ಕೇಳಿದರು.
ಈ ಪ್ರಶ್ನೆಗೆ ಉತ್ತರಿಸುತ್ತಾ ರೋಜಾ, "ಅವರೇನು ಮಾಡುತ್ತಾರೆ ನನ್ನನ್ನು, ಸಾಯಿಸ್ತಾರಾ? ರೇಪ್ ಮಾಡ್ತಾರಾ? ರೇಪ್ ಮಾಡುವ ಗುಂಡಿಗೆ ಅವರಿಗಿದೆಯೇ. ಒಂದೋ ಸಾಯಿಸಬೇಕು ಇಲ್ಲಾ ಕೇಸ್ ಹಾಕಬಹುದು. ಅದನ್ನು ಬಿಟ್ಟು ಇನ್ನೇನು ಕೀಳಕ್ಕೆ ಸಾಧ್ಯವಿಲ್ಲ" ಎಂದಿರುವುದು ಟಾಲಿವುಡ್ ನಲ್ಲಿ ಭಾರಿ ಚರ್ಚೆಯ ವಿಷಯವಾಗಿದೆ.


Click it and Unblock the Notifications











