"ದರ್ಶನ್-ವಿಜಯಲಕ್ಷ್ಮಿ ಮಧ್ಯೆ ನೀನು ಹೋಗ್ಬೇಡ ಅಂತ ಹೇಳಿದ್ದೆ, ಆಕೆ ಕೇಳಲಿಲ್ಲ"; ಓಂ ಪ್ರಕಾಶ್ ರಾವ್
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ವಿಚಾರಣಾಧೀರ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲಿದ್ದಾರೆ. ದರ್ಶನ್ ಸೇರಿದಂತೆ 14 ಜನ ಆರೋಪಿಗಳನ್ನು 12 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆದರೆ 13 ವರ್ಷಗಳ ಹಿಂದೆಯೇ ದರ್ಶನ್ ಕೌಟುಂಬಿಕ ಕಲಹ ಪ್ರಕರಣದಲ್ಲಿ ಕೇಂದ್ರ ಕಾರಾಗೃಹ ಸೇರಿದ್ದರು.
ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ದರ್ಶನ್ 28 ದಿನಗಳ ಕಾಲ ಜೈಲು ಸೇರುವಂತಾಗಿತ್ತು. ಆದರೆ ಅವರಿಬ್ಬರ ದಾಂಪತ್ಯದಲ್ಲಿ ನಟಿ ನಿಖಿತಾ ತುಕ್ರಾಲ್ ಹುಳಿ ಹಿಂಡಿದ್ದರು ಎನ್ನುವ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಇದೀ ನಿರ್ದೇಶಕ ಓಂ ಪ್ರಕಾಶ್ ರಾವ್ ಮಾತನಾಡಿದ್ದಾರೆ. ಒಂದ್ಕಾಲದಲ್ಲಿ ದರ್ಶನ್‌ಗೆ ಓಂ ಪ್ರಕಾಶ್ ಬಹಳ ಆಪ್ತರಾಗಿದ್ದರು. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಹಿಟ್ ಸಿನಿಮಾಗಳು ಬಂದಿತ್ತು. ನಾವಿಬ್ಬರು ದೂರಾಗಲೂ ನಿಖಿತಾ ಕಾರಣ ಎಂದಿದ್ದಾರೆ.

ನಟ ದರ್ಶನ್ ಜೈಲಿ ಸೇರಿರುವ ಬಗ್ಗೆ ನಿರ್ದೇಶಕ ಓಂ ಪ್ರಕಾಶ್ ರಾವ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ದರ್ಶನ್ ಜೊತೆಗಿನ ಒಡನಾಟದ ಬಗ್ಗೆ ಮಾತನಾಡಿದ್ದಾರೆ. ನ್ಯೂಸ್‌ಫಸ್ಟ್ ಸುದ್ದಿವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ನಿಖಿತಾ ತುಕ್ರಾಲ್ ಬಗ್ಗೆ ಅವರು ಪ್ರಸ್ತಾಪಿದ್ದಾರೆ. 'ಯೋಧ' ಸಿನಿಮಾ ಸಮಯದಲ್ಲಿ ಏನೆಲ್ಲಾ ಆಯಿತು ಎನ್ನುವುದನ್ನು ವಿವರಿಸಿದ್ದಾರೆ.
"ದರ್ಶನ್ ಬಹಳ ಒಳ್ಳೆಯ ವ್ಯಕ್ತಿ. ವಿಜಯಲಕ್ಷ್ಮಿ ಮೇಡಂ ಸಹ ಅಪ್ಪಟ ಚಿನ್ನದ ಮನಸ್ಸಿನವರು. ಅವರಿಬ್ಬರ ಸಂಸಾರ ತುಂಬಾ ಚೆನ್ನಾಗಿತ್ತು. ಇಬ್ಬರ ಸಂಸಾರದಲ್ಲಿ ಹುಳಿ ಹಿಂಡಬೇಡ, ನೀನು ತುಂಬಾ ದೂರ ಹೋಗ್ತಾ ಇದ್ದೀರ ಎನ್ನುವ ವಿಚಾರವನ್ನು ನಾನು ನಿಖಿತಾಗೆ ಹೇಳಿದ್ದೆ. ಕಲಾಸರಸ್ವತಿ ಮೇಲೆ ಆಣೆ ಇಟ್ಟು ಹೇಳ್ತೀನಿ. ಈ ಮಾತನ್ನು ನಾನು ನಿಖಿತಾಗೆ ಹೇಳಿದ್ದೆ. ನೀವು ಜಾಸ್ತಿ ಮುನ್ನುಗ್ಗುತ್ತಿದ್ದೀರ ಹೋಗ್ಬೇಡಿ ಎಂದಿದ್ದೆ. ಇದೇ ತಪ್ಪಾಯ್ತು"

"ಇವತ್ತಿನ ಪರಿಸ್ಥಿತಿಯಲ್ಲಿ ವಿಜಯಲಕ್ಷ್ಮಿ ಮೇಡಂ, ಅವರ ಮಗ ವಿನೀಶ್ ಇದನ್ನೆಲ್ಲಾ ಹೇಗೆ ಫೇಸ್ ಮಾಡ್ತಿದ್ದಾರೆ ಅನ್ನೋದು ಗೊತ್ತಿಲ್ಲ. ಇದನ್ನೆಲ್ಲ ತಡೆದುಕೊಳ್ಳುವ ಶಕ್ತಿ ಭಗವಂತ ಕೊಡಲಿ ಎನ್ನುವುದು ನನ್ನ ಪ್ರಾರ್ಥನೆ. ಈ ಸಂಕಷ್ಟು ಕಳೆದು ದರ್ಶನ್ ಅವರು ಬೇಗ ಹೊರಬರಲಿ, ಕುಟುಂಬ ಚೆನ್ನಾಗಿರಲಿ, ರೇಣುಕಾಸ್ವಾಮಿ ಅವರ ಕುಟುಂಬ ಕೂಡ ಚೆನ್ನಾಗಿ ಇರಬೇಕಿ ಎನ್ನುವುದು ನನ್ನ ಕೋರಿಕೆ" ಎಂದು ಓಂಪ್ರಕಾಶ್ ರಾವ್ ಹೇಳಿದ್ದಾರೆ.
"ನಾನು ಕಲಾವಿದರನ್ನು ಬಹಳ ಗೌರವಿಸುತ್ತೀನಿ. 'ಪ್ರಿನ್ಸ್' ಬಳಿಕ ನಾನು, ದರ್ಶನ್ ಒಟ್ಟಿಗೆ ಸಿನಿಮಾ ಮಾಡೋಕೆ ಸಾಧ್ಯವಾಗಲಿಲ್ಲ. ಅವರ ಬಳಿ ಯಾರು ಏನು ಮಾತನಾಡಿದರೋ ಗೊತ್ತಿಲ್ಲ. ನಮ್ಮವರೇ ಕೆಲವರು ಮಾತನಾಡಿದ್ದಾರೆ. ನಿಖಿತಾ ಕೂಡ ನನ್ನ ಮಾತುಗಳನ್ನು ತಪ್ಪಾಗಿ ದರ್ಶನ್ ಬಳಿ ಹೇಳಿ ನಮ್ಮಿಬ್ಬರನ್ನು ದೂರ ಮಾಡಿದರು. ನಾವಿಬ್ಬರು ದೂರಾಗಲು ಆಕೆ ಕೂಡ ಮುಖ್ಯ ಕಾರಣ. ಈ ಬಗ್ಗೆ ದರ್ಶನ್‌ಗೆ ಹೇಳಲು ಅವಕಾಶ ಸಿಗಲಿಲ್ಲ" ಎಂದಿದ್ದಾರೆ.
"ಒಂದೂವರೆ ವರ್ಷದ ಹಿಂದೆ ದರ್ಶನ್ ಕಾಂಬಿನೇಷನ್ ಸಿನಿಮಾ ಮಾಡಲು ಪ್ರಯತ್ನಿಸಿದ್ದೆ. ಸದ್ಯ 'ಫೀನಿಕ್ಸ್' ಅಂತ ಒಂದು ಸಿನಿಮಾ ಮಾಡ್ತಿದ್ದೀನಿ. ಅದು ದರ್ಶನ್ ಅವರಿಗಂತ್ಲೇ ಮಾಡಿದ ಕಥೆ. ಸ್ಟ್ರೈಟ್ ಸಿನಿಮಾ. ಕೆಲವೊಮ್ಮೆ ಅಲ್ಲಿ ಇಲ್ಲಿ ಕದ್ದು ಸಿನಿಮಾ ಮಾಡಿದ್ದೀನಿ. ಅದು ಸಮಯ ಸಂದರ್ಭ. ಆದರೆ ಅಂತಹ ಸಿನಿಮಾಗಳ ಬಳಿಕ ಸಾಕಷ್ಟು ಜನ ನಿರ್ಮಾಪಕರು ಅದೇ ತರಹದ ಸಿನಿಮಾ ಮಾಡೋಣ ಅಂತ ಬಂದ್ರು. ದರ್ಶನ್‌ಗೆ ಕಥೆ ಹೇಳ್ದೆ. ಆದರೆ ಸಾಧ್ಯವಾಗಲಿಲ್ಲ" ಎಂದು ವಿವರಿಸಿದ್ದಾರೆ.


Click it and Unblock the Notifications











