ಈ ವಾರ ಚಿತ್ರಮಂದಿರಗಳಲ್ಲಿ ಹಬ್ಬ: ಯಾವೆಲ್ಲ ಸಿನಿಮಾಗಳಿವೆ?

ಕಳೆದೊಂದು ತಿಂಗಳಿನಿಂದ ಚಂದನವನದಲ್ಲಿ ಹೊಸ ಹುರುಪು ಬಂದಿದೆ. ಪ್ರತಿ ಶುಕ್ರವಾರವೂ ಕನಿಷ್ಟ ನಾಲ್ಕು ಕನ್ನಡ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಕೆಲವು ಸಿನಿಮಾಗಳು ಒಳ್ಳೆಯ ಪ್ರದರ್ಶನ ಕಾಣುತ್ತಿವೆ.

ಈ ವಾರವಂತೂ ಸಿನಿ ಪ್ರೇಮಿಗಳಿಗೆ ಹಬ್ಬದ ವಾತಾವರಣವೇ ನಿರ್ಮಾಣವಾಗಿದೆ. ಹಲವು ಒಳ್ಳೆಯ ಕನ್ನಡ ಸಿನಿಮಾಗಳು ಈ ವಾರ ಬಿಡುಗಡೆ ಆಗುತ್ತಿವೆ. ಅದರ ಜೊತೆಗೆ ಕೆಲವು ದೊಡ್ಡ ನಟರ ಪರಭಾಷೆಯ ಸಿನಿಮಾಗಳು ಸಹ ಬಿಡುಗಡೆ ಆಗುತ್ತಿವೆ.

ಕನ್ನಡದ ಯಾವೆಲ್ಲ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಪರಭಾಷೆಯ ಯಾವೆಲ್ಲ ಸಿನಿಮಾಗಳು ಬೆಂಗಳೂರು ಹಾಗೂ ರಾಜ್ಯದ ಇತರ ನಗರಗಳಲ್ಲಿ ಬಿಡುಗಡೆ ಆಗುತ್ತಿವೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

'ಏಕ್ ಲವ್ ಯಾ'

'ಏಕ್ ಲವ್ ಯಾ'

ಪ್ರೇಮ್ ನಿರ್ದೇಶನದ ಪ್ರೇಮಕಥಾ ಸಿನಿಮಾ 'ಏಕ್ ಲವ್ ಯಾ' ನಿನ್ನೆ (ಫೆಬ್ರವರಿ 24)ರಂದೇ ಬಿಡುಗಡೆ ಆಗಿದೆ. ಸಿನಿಮಾ ಅದ್ಭುತವಾದ ಓಪನಿಂಗ್ ಪಡೆದುಕೊಂಡಿದ್ದು, ಹೊಸಬರ ಸಿನಿಮಾ ಆದರೂ ಸಹ ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕ ಚಿತ್ರಮಂದಿರಕ್ಕೆ ಭೇಟಿ ನೀಡಿ ಸಿನಿಮಾ ವೀಕ್ಷಿಸಿದ್ದಾನೆ. ರಕ್ಷಿತಾ ಪ್ರೇಮ್ ನಿರ್ಮಾಣದ ಈ ಸಿನಿಮಾ ಈ ವಾರದ ದೊಡ್ಡ ರಿಲೀಸ್‌ ಸಿನಿಮಾ ಎನ್ನಬಹುದು.

ಶ್ರೀನಿ ನಟಿಸಿ, ನಿರ್ದೇಶಿಸಿರುವ 'ಓಲ್ಡ್ ಮಾಂಕ್'

ಶ್ರೀನಿ ನಟಿಸಿ, ನಿರ್ದೇಶಿಸಿರುವ 'ಓಲ್ಡ್ ಮಾಂಕ್'

ಪ್ರತಿಭಾವಂತ ನಿರ್ದೇಶಕ, ನಟ ಶ್ರೀನಿಯ 'ಓಲ್ಡ್ ಮಾಂಕ್' ಸಿನಿಮಾ ಇಂದು ಬಿಡುಗಡೆ ಆಗುತ್ತಿದೆ. ತಮ್ಮ ಈ ಹಿಂದಿನ ಸಿನಿಮಾಗಳ ಮೂಲಕ ತಮ್ಮದೇ ಆದ ಅಭಿಮಾನಿ ವರ್ಗ ಸೃಷ್ಟಿಸಿಕೊಂಡಿರುವ ಶ್ರೀನಿ ಹೊಸ ಪ್ರಯತ್ನ 'ಓಲ್ಡ್ ಮಾಂಕ್' ಆಗಿದ್ದು ಸಿನಿಮಾದ ಟ್ರೇಲರ್ ಈಗಾಗಲೇ ಬಹುವಾಗಿ ಗಮನ ಸೆಳೆದಿದೆ. ಸಿನಿಮಾದಲ್ಲಿ ಅದಿತಿ ಪ್ರಭುದೇವ ನಾಯಕಿಯಾಗಿದ್ದ ಎಸ್ ನಾರಾಯಣ್ ಸೇರಿದಂತೆ ಹಲವು ಪ್ರಮುಖ ನಟರಿದ್ದಾರೆ.

'ಬ್ಲಾಂಕ್', 'ನನ್ ಜೊತೆ ಪೂಜಾ ಲಕ್ಷ್ಮಿ'

'ಬ್ಲಾಂಕ್', 'ನನ್ ಜೊತೆ ಪೂಜಾ ಲಕ್ಷ್ಮಿ'

ಕೃಷಿ ತಾಪಂಡ, ಮೈಸೂರು ಪೂರ್ಣ, ಸುಚೇಂದ್ರ ಪ್ರಸಾದ್ ಸೇರಿದಂತೆ ಹಲವರು ನಟಿಸಿರುವ 'ಬ್ಲಾಂಕ್' ಸಿನಿಮಾ ನಿರೀಕ್ಷೆ ಹುಟ್ಟಿಸಿದೆ. ಸಿನಿಮಾದ ಟ್ರೇಲರ್‌ ಬಗ್ಗೆ ನಟಿ ರಮ್ಯಾ ಸೇರಿದಂತೆ ಹಲವು ಸೆಲೆಬ್ರಿಟಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾ ಇಂದು ಬಿಡುಗಡೆ ಆಗುತ್ತಿದೆ. ಜೊತೆಗೆ 'ನನ್ ಜೊತೆ ಪೂಜಾ ಲಕ್ಷ್ಮಿ' ಹೆಸರಿನ ಸಿನಿಮಾ ಸಹ ಇಂದು ಬಿಡುಗಡೆ ಆಗುತ್ತಿದೆ. ಸಿನಿಮಾದಲ್ಲಿ ಯಶು ನಾಯಕ, ಆರಿಕಾ ನಾಯಕಿ.

'ಸ್ಟೆಬಿಲಿಟಿ', 'ಮನಸಾಗಿದೆ'

'ಸ್ಟೆಬಿಲಿಟಿ', 'ಮನಸಾಗಿದೆ'

ಐಟಿ ಉದ್ಯೋಗಿಗಳು ಸೇರಿ ಮಾಡಿರುವ ಕನ್ನಡ ಸಿನಿಮಾ 'ಸ್ಟೆಬಿಲಿಟಿ' ಇಂದು ಬಿಡುಗಡೆ ಆಗುತ್ತಿದೆ. ಕೇವಲ ಐದು ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಇದಾಗಿದ್ದು, ಸೈನ್ಸ್ ಫಿಕ್ಷನ್ ಕತೆಯನ್ನು ಸಿನಿಮಾ ಹೊಂದಿದೆ. ಈ ಸಿನಿಮಾಕ್ಕೆ ಈಗಾಗಲೇ ಕೆಲವು ವಿದೇಶಿ ಸಿನಿಮೋತ್ಸವಗಳಲ್ಲಿ ಪ್ರಶಸ್ತಿ ಲಭಿಸಿದೆ. ಜೊತೆಗೆ ಪ್ರೀತಿಯ ಮಹತ್ವ ಸಾರುವ 'ಮನಸಾಗಿದೆ' ಸಿನಿಮಾ ಇದೇ ವಾರ ಬಿಡುಗಡೆ ಆಗುತ್ತಿದೆ. ಸಿನಿಮಾದ ನಿರ್ದೇಶಕ ಶಿಡ್ಲಘಟ್ಟ ಶ್ರೀನಿವಾಸ್. ಇದು ಹೊಸ ಕಾಲಘಟ್ಟದ ಪ್ರೇಮಕತಾ ಸಿನಿಮಾ ಎಂಬುದು ಚಿತ್ರತಂಡದ ವಾದ.

ಪರಭಾಷೆಯ ಸಿನಿಮಾಗಳು

ಪರಭಾಷೆಯ ಸಿನಿಮಾಗಳು

ಈ ಗುರುವಾರ ಎರಡು ಪ್ರಮುಖ ಪರಭಾಷೆ ಸಿನಿಮಾ ಬಿಡುಗಡೆ ಆಗುತ್ತಿವೆ. ಪವನ್ ಕಲ್ಯಾಣ್ ನಟನೆಯ 'ಭೀಮ್ಲಾ ನಾಯಕ್' ಬಿಡುಗಡೆ ಆಗುತ್ತಿದೆ. ಮಲಯಾಳಂನ 'ಅಯ್ಯಪ್ಪನುಂ ಕೋಶಿಯುಂ' ಸಿನಿಮಾದ ರೀಮೆಕ್‌ ಆದ ಈ ಸಿನಿಮಾದಲ್ಲಿ ಪವನ್ ಜೊತೆಗೆ ರಾಣಾ ದಗ್ಗುಬಾಟಿ ಸಹ ನಟಿಸಿದ್ದಾರೆ. ಆಲಿಯಾ ಭಟ್ ನಟಿಸಿರುವ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾ ಸಹ ಇದೇ ವಾರ ತೆರೆಗೆ ಬರುತ್ತಿದೆ. ಕಾಮಾಟಿಪುರದ ಗಂಗೂಬಾಯಿ ಕುರಿತಾದ ನಿಜ ಕತೆಯನ್ನು ಸಿನಿಮಾ ಒಳಗೊಂಡಿದೆ. ತಮಿಳಿನ ಸ್ಟಾರ್ ನಟ ಅಜಿತ್ ನಟನೆಯ 'ವಲಿಮೈ' ಸಿನಿಮಾ ನಿನ್ನೆಯೇ (ಫೆಬ್ರವರಿ 24)ರಂದು ಬಿಡುಗಡೆ ಆಗಿದೆ. ಈ ಸಿನಿಮಾಗಳು ಕರ್ನಾಟಕದಲ್ಲಿಯೂ ಹಲವು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿವೆ.

More from Filmibeat

English summary
This Friday many big movies releasing including some non Kannada movies. Ek Love Ya released yesterday. Today Old Monk and non Kannada movie Bheemla Nayak, Gangubhai Katiyavadi releasing.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X