ಜಡ್ಜ್‌ನ ಇಲ್ಲೇ ಕರೆಸು ; ಕೆಡವಿದ್ದ ಕಾಂಪೌಂಡ್ ಕಟ್ಟಿಸಲು ಮುಂದಾದ ಯಶ್ ತಾಯಿ-ಹಾಸನದಲ್ಲಿ ಬೀದಿ ರಂಪ
ಬದುಕೆಂಬ ರಂಗಭೂಮಿಯಲ್ಲಿ ಮನೆ ಕೇವಲ ನಾಲ್ಕು ಗೋಡೆಗಳ ಕಟ್ಟಡವಲ್ಲ. ಬದಲಿಗೆ ಒಬ್ಬ ವ್ಯಕ್ತಿಯ ಪಾಲಿಗೆ ಸುರಕ್ಷಿತ ತಾಣ. ನೆಮ್ಮದಿಯ ಕೇಂದ್ರ. ಗೋಡೆಯಿಂದ ಕೇವಲ ಗಡಿ ಮಾತ್ರ ನಿರ್ಮಾಣವಾಗಲ್ಲ. ಬದಲಿಗೆ ನೆಮ್ಮದಿಗಾಗಿ ಕೂಡ ಈ ಗೋಡೆ ನಿರ್ಮಾಣವಾಗುತ್ತೆ. ಆದರೆ.. ಒಮ್ಮೊಮ್ಮೆ ಈ ಗಡಿಗಳೇ ತಲೆ ನೋವಾಗುತ್ತವೆ. ಬದಲಾದ ಈ ಕಾಲದಲ್ಲಿ ಒಂದು ಅಡಿ ಜಾಗಕ್ಕೂ ಕೂಡ ಇಲ್ಲಿ ಯುದ್ಧ ನಡೆಯುತ್ತೆ. ಉದಾಹರಣೆಗೆ ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ಅವರ ವಿವಾದವನ್ನೇ ತೆಗೆದುಕೊಳ್ಳಿ.
ಹೌದು, ಎಲ್ಲರಿಗೆ ಗೊತ್ತಿರುವಂತೆ ಈ ವರ್ಷದ ಆರಂಭದಲ್ಲಿಯೇ ಹಾಸನದ ವಿದ್ಯಾನಗರ ಬಡಾವಣೆಯಲ್ಲಿರುವ ಯಶ್ ಅವರ ಭವ್ಯವಾದ ಅರಮನೆ ವಿವಾದಕ್ಕೀಡಾಗಿತ್ತು. ಸುಮಾರು 1,500 ಅಡಿ ಜಾಗವನ್ನು ಒತ್ತುವರಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ನ್ಯಾಯಾಲಯದ ಆದೇಶದಂತೆ ಮನೆಯ ಕಾಂಪೌಂಡ್‌ನ್ನು ಜೆಸಿಬಿ ಮೂಲಕ ತೆರವು ಮಾಡಲಾಗಿತ್ತು.

ಆದರೆ ಇಂದು (ಫೆಬ್ರವರಿ 1) ಕೆಡವಿದ್ದ ಕಾಂಪೌಂಡ್‌ನ್ನು ಯಶ್ ಅವರ ತಾಯಿ ಪುಷ್ಪಾ ಮತ್ತೆ ಕಟ್ಟಿಸುವ ಪ್ರಯತ್ನ ಮಾಡಿದ್ದಾರೆ.ಈ ವೇಳೆ ಲಕ್ಷ್ಮ್ಯಮ್ಮ ಅವರ ಪರವಾದ ಜಿಪಿಎ ಹೋಲ್ಡರ್ ದೇವರಾಜು ಮತ್ತು ಯಶ್ ಅವರ ತಾಯಿ ಪುಷ್ಪಾ ನಡುವೆ ಮಾತಿನ ಚಕಮಕಿ ನಡೆದಿದೆ.
ಜಿಪಿಎ ಹೋಲ್ಡರ್ ದೇವರಾಜ್ ಹಾಕಿದ್ದ ತಂತಿಬೇಲಿಯನ್ನು ತೆರವು ಗೊಳಿಸಿ ಕಾಂಪೌಂಡ್ ನಿರ್ಮಾಣಕ್ಕೆ ಯಶ್ ತಾಯಿ ಮುಂದಾದಾಗ ದೇವರಾಜ್ ಅಲ್ಲಿ ಬಂದಿದ್ದಾರೆ. ಈ ಸಮಯದಲ್ಲಿ ಜಾಗದ ಮಾಲೀಕ ದೇವರಾಜು ಅವರ ಬಳಿ ದಾಖಲೆ ಕೊಡಿ ಎಂದು ವಾಗ್ವಾದ ನಡೆಸಿದ ಪುಷ್ಪಾ ಅರುಣ್ ಕುಮಾರ್, ನ್ಯಾಯಾಲಯದ ಆದೇಶದಂತೆ ನಾವು ನಡೆದುಕೊಂಡಿದ್ದೇವೆ ಎಂದು ಜಿಪಿಎ ಹೋಲ್ಡರ್ ಹೇಳಿದರೂ ಕೂಡ ಅಲ್ಲಿಂದ ಕದಲಲಿಲ್ಲ.
ಬದಲಿಗೆ ನೀನ್ಯಾರು ಸರ್ಕಾರಿ ಅಧಿಕಾರಿನಾ ಎಂದು ಪ್ರಶ್ನೆ ಮಾಡಿದ್ದಾರೆ. ಜಡ್ಜ್ ನ ಇಲ್ಲೇ ಕರೆಸು ಇಲ್ಲೇ ತೀರ್ಮಾನ ಆಗಲಿ ಎಂದು ಹೇಳಿದ್ದಾರೆ. ಕ್ಯಾಮರಾಗಳ ಮುಂದೆ ಬಿಲ್ಡಪ್ ತಗೊಳ್ಳೋಕೆ ಬಂದಿದೀಯಾ ಎಂದು ಗುಡುಗಿದ್ದಾರೆ. ನಿಮಗೆ ಒಂದು ಘನತೆ ಇದೆ ಅದನ್ನು ಹಾಳು ಮಾಡಿಕೊಳ್ಳಬೇಡಿ, ನಿಮ್ಮಿಂದ ಯಶ್ ಮರ್ಯಾದೆ ಹೋಗುತ್ತೆ ಎಂದು ಹೇಳಿದರೂ ಕೂಡ ಕೇಳದ ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಬಡಾವಣೆ ಪೊಲೀಸರ ಬಳಿಯೂ, ನೀವು ದೇವರಾಜ್ ಅವರನ್ನು ಏಕೆ ಬಂಧಿಸಿಲ್ಲ? ಎಂದು ಪ್ರಶ್ನೆ ಮಾಡಿದ್ದಾರೆ. ಜೆಸಿಬಿ ಯಾಕೆ ಸೀಜ್ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.
ಯಶ್ ತಾಯಿಯ ಈ ವರ್ತನೆಯಿಂದ ಬೇಸತ್ತ ಜಿಪಿಎ ಹೋಲ್ಡರ್ ದೇವರಾಜ್, ಅವರೇನು ಇಂಡಿಯನ್ ಪ್ರೆಸಿಡೆಂಟಾ..? ಎಂದು ಮಾಧ್ಯಮವದರ ಎದುರು ಪ್ರಶ್ನೆ ಮಾಡಿದ್ದಾರೆ. ಇಲ್ಲಿ ನಮ್ಮ ಸಂಬಂಧಿಕರೆಲ್ಲ ಬಂದಿದ್ದಾರೆ. ಆದರೆ ಅವರು ಸಂಬಂಧಿಕರು ಬಂದಿದ್ದಾರಾ..? ಯಾಕೆಂದರೆ ಅವರು ಮಾಡುತ್ತಿರುವ ವಾದವೇ ಸುಳ್ಳು ಎಂದು ಹೇಳಿರುವ ದೇವರಾಜ್ ಅಕ್ಕ-ಪಕ್ಕದ ಮನೆಯವರೇ ಅವರ ಬೆಂಬಲಕ್ಕೆ ಬರಲ್ಲ ಎಂದು ಹೇಳಿದ್ದಾರೆ.

ಆರು ವರ್ಷದಿಂದ ಈ ಸಮಸ್ಯೆ ಇದೆ. ಕೋರ್ಟ್‌ನಲ್ಲಿ ವಿಚಾರಣೆಗೆ ಕರೆದಾಗ ದಾಖಲೆ ಇದ್ದವರೂ ಯಾಕೆ ಬರಲಿಲ್ಲ..? ಕಾಪೌಂಡ್ ಇದ್ದ ಜಾಗ ನನ್ನದೇ ಎಂದು ದೇವರಾಜ್ ಹೇಳಿದ್ದಾರೆ. ಆಗ ವಿಚಾರಣೆಗೆ ಬರದವರು ಈಗ ಮತ್ತೆ ಕೋರ್ಟ್ ಮೆಟ್ಟಿಲೇರಿದ್ದಾರೆ ಆದರೆ ಅಲ್ಲಿಯೂ ಅವರಿಗೆ ಹಿನ್ನೆಡೆಯಾಗುತ್ತೆ, ಯಾಕೆಂದರೆ ನನ್ನ ಬಳಿ ದಾಖಲೆಗಳಿವೆ ಎಂದು ಹೇಳಿರುವ ದೇವರಾಜ್, ಈ ಜಾಗ ನನ್ನ ಅಪ್ಪನ್ನದ್ದು ಎನ್ನುವುದಕ್ಕೆ ನನ್ನ ಬಳಿ ಸಾಕ್ಷಿ ಇದೆ. ಪುಷ್ಪಾ ಅಪ್ಪನ್ನದ್ದು ಎಂದು ಹೇಳೋಕೆ ಏನ್ ಸಾಕ್ಷಿ ಇದೆ ಎಂದು ಕಿಡಿ ಕಾರಿದ್ದಾರೆ.


Click it and Unblock the Notifications











