twitter
    For Quick Alerts
    ALLOW NOTIFICATIONS  
    For Daily Alerts

    ಇದು ಕೇವಲ ಅಲ್ಪವಿರಾಮ ಅಷ್ಟೇ, ಫುಲ್ ಸ್ಟಾಪ್ ಅಲ್ಲ

    By Rajendra
    |
    <ul id="pagination-digg"><li class="previous"><a href="/news/relationship-is-like-broken-mirror-chandrachud-077900.html">« Previous</a>

    ಮಂಜುಳಾ ಅವರಿಗೆ ಸಂಸಾರವನ್ನು ಸರಿಪಡಿಸಿಕೊಳ್ಳಲು ದಾರಿಗಳು ಬೇರೆ ಇದ್ದವು. ಇಷ್ಟೆಲ್ಲಾ ಮಾಡಿಕೊಳ್ಳುವ ಅಗತ್ಯವಿರಲಿಲ್ಲ. ಕೋರ್ಟ್ ಗೆ ಹೋಗುವ ಬದಲು ನನ್ನ ಜೊತೆಗೇ ನೇರವಾಗಿ ಮಾತನಾಡಬಹುದಿತ್ತು. ನನ್ನ ಕುಟುಂಬದವರ ಜೊತೆ ಮಾತನಾಡಬಹುದು. ಅವರು ಏಕಾಏಕಿ ಕೋರ್ಟ್ ಗೆ ಹೋದರು. ನನ್ನ ಮಗಳ ಜೊತೆಗೆ ಮಾತನಾಡಲು ಅವಕಾಶ ಕೊಡದೆ ಕೋರ್ಟ್ ಮೆಟ್ಟಿಲೇರಿದರು.

    ಸರಿ ಕೋರ್ಟ್ ನಲ್ಲೇ ನನಗೆ ನ್ಯಾಯ ಸಿಗಲಿ ಎಂದು ಹೋರಾಡುತ್ತಿದ್ದೇನೆ. ಅವರ ಮಾರ್ಗದಲ್ಲೇ ನಡೆಯುತ್ತಿದ್ದೇನೆ. ಯಾವುದೇ ಕಾರಣಕ್ಕೂ ಮಂಜುಳಾ ಜೊತೆ ಬದುಕುವ ಪ್ರಶ್ನೆ ಈ ಜನ್ಮದಲ್ಲಿ ಇಲ್ಲ. ನನ್ನ ಜೊತೆ ಬದುಕ ಬೇಕು ಎಂಬ ಆಸೆ ಎಂಟು ವರ್ಷಗಳಲ್ಲಿ ಇಲ್ಲದ್ದು ಎಂಟು ಗಂಟೆ ಎಂಟು ನಿಮಿಷಗಳಲ್ಲಿ ಬರಲು ಸಾಧ್ಯವೇ?

    This is only coma not full stop chandrachud

    ಶ್ರುತಿ ಅವರ ಮನಸ್ಸಿಗೆ ನೋವುಂಟು ಮಾಡಿದೆನಲ್ಲಾ ಎಂಬ ಪಶ್ಚಾತ್ತಾಪ ನನಗಿದೆ. ಮಂಜುಳಾ ಅವರ ಮುಂದಿನ ಜೀವನ ಅವರು ನಿರ್ಧರಿಸಬೇಕು. ಒಂದು ಸರಿ ಕನ್ನಡಿ ಹೊಡೆದು ಹೋದರೆ ಜೋಡಿಸಲು ಸಾಧ್ಯವೇ? ಅವರು ಬಹಳ ಹಿಂದೆಯೇ ತಿಳಿದುಕೊಳ್ಳಬೇಕಾಗಿತ್ತು. ಕೋರ್ಟ್ ಹೋದರೆ ಸಂಸಾರ ಎಂಬ ಕನ್ನಡಿಯನ್ನು ಜೋಡಿಸಲು ಸಾಧ್ಯವೇ?

    ನನ್ನ ತಾಯಿ ಬಗ್ಗೆ ಏನೆಲ್ಲಾ ಮಾತನಾಡಿದರು. ನನ್ನ ಬಗ್ಗೆ ಎಷ್ಟೆಲ್ಲಾ ಮಾತನಾಡಿದರು. ನನ್ನ ಬಗ್ಗೆ ಗೌರವ ಇಟ್ಟುಕೊಂಡಿದ್ದರೆ ಬೇರೆ ತರಹ ಮಾತನಾಡುತ್ತಿದ್ದರು. ಸಂಬಂಧಗಳ ವಿಚಾರಕ್ಕೆ ಬಂದಾಗ ತುಂಬಾ ಪ್ರಬುದ್ಧವಾಗಿ ವರ್ತಿಸಬೇಕಾಗುತ್ತದೆ. ನಮ್ಮ ನಡವಳಿಕೆಗಳೆಲ್ಲವನ್ನೂ ಸಮಾಜ ಗಮನಿಸುತ್ತಿರುತ್ತದೆ. ನಾನು ನಮ್ಮ ಆತ್ಮಸಾಕ್ಷಿಗೆ ನಡೆದುಕೊಳ್ಳಬೇಕಾಗುತ್ತದೆ.

    ಮಂಜುಳಾ ಅವರು ನನ್ನ ಮನಸ್ಸಿನಿಂದ ಡಿಲೀಟ್ ಆಗಿದ್ದಾರೆ. ಇದನ್ನು ಮಾತುಕತೆ ಮೂಲಕವೇ ಪರಿಹರಿಸಿಕೊಳ್ಳೋಣ ಎಂದುಕೊಂಡಿದ್ದೆವು. ಈಗ ಅವರು ಕೋರ್ಟ್ ಗೆ ಹೋಗಿದ್ದಾರೆ. ಕೋರ್ಟ್ ನಲ್ಲೇ ಪರಿಹರಿಸಿಕೊಳ್ಳುತ್ತೇನೆ. ಈಗ ಒಂದು ಪ್ರಕರಣದ ತೀರ್ಪನ್ನು ನ್ಯಾಯಾಲಯ ಕೊಟ್ಟಿದೆ. ಇನ್ನೂ ಎರಡು ಕೇಸ್ ಗಳಿವೆ.

    ಈಗ ಬಂದಿರುವ ತೀರ್ಪು ಕೇವಲ ಅಲ್ಪ ವಿರಾಮ ಅಷ್ಟೇ. ಇದೇ ಫುಲ್ ಸ್ಟಾಪ್ ಅಲ್ಲ. ಇನ್ನೂ ಎರಡು ಪ್ರಕರಣಗಳು ಕೋರ್ಟ್ ನಲ್ಲಿವೆ. ನನ್ನ ಮತ್ತು ಮಂಜುಳಾ ನಡುವಿನ ಸಂಬಂಧ ಯಾ ಹೊತ್ತೋ ಸತ್ತು ಹೋಗಿತ್ತು. ಈಗ ಅದನ್ನು ಬಡಿದು ಎಬ್ಬಿಸಿ ನಿಲ್ಲಿಸಿದ್ದಾರೆ. ಅದನ್ನು ನ್ಯಾಯಾಲಯಲ್ಲಿ ಮುಗಿಸಿಕೊಳ್ಳಬೇಕಾಗಿತ್ತು. ಅದನ್ನು ಮಾಡದಿದ್ದಕ್ಕೇ ಇಷ್ಟೆಲ್ಲಾ ಆಯಿತು.

    <ul id="pagination-digg"><li class="previous"><a href="/news/relationship-is-like-broken-mirror-chandrachud-077900.html">« Previous</a>

    English summary
    Chandrachud and actress Shruthi marital life faced trouble from Chandrachud's first wife Manjula, who claimed that she and her husband were not divorced at the time of his second wedding. Chandrachud reacts reacts on courts judgement, his future fast present. Here is the synopsis of his chat with TV9 Kannada.
    Tuesday, October 1, 2013, 13:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X