ಹೀರೋ ಆಗಿ ಪುನೀತ್ ಮೊದಲು ಹೇಳಿದ್ದು ಇದೇ ಡೈಲಾಗ್
ಮೊದಲ ಸಿನಿಮಾ, ಮೊದಲ ಶಾಟ್, ಮೊದಲ ಡೈಲಾಗ್ ಕಲಾವಿದರ ಜೀವನದಲ್ಲಿ ಒಮ್ಮೆ ಮಾತ್ರ ಬರುವ ಸಾಧ್ಯ. ಅದಕ್ಕೆ ಏನೋ ಕಲಾವಿದರು ಮೊದಲು ಎನ್ನುವುದಕ್ಕೆ ವಿಶೇಷ ಸ್ಥಾನ ನೀಡುತ್ತಾರೆ.
ಪುನೀತ್ ರಾಜ್ ಕುಮಾರ್ ಇದೀಗ ತಮ್ಮ ಮೊದಲ ಸಿನಿಮಾ 'ಅಪ್ಪು' ಬಗ್ಗೆ ಮಾತನಾಡಿದ್ದಾರೆ. ಇತ್ತೀಚಿಗಿನ ಸಂದರ್ಶನದಲ್ಲಿ 'ಅಪ್ಪು' ಸಿನಿಮಾದಲ್ಲಿ ತಾವು ಮೊದಲ ಬಾರಿಗೆ ಹೇಳಿದ ಡೈಲಾಗ್ ಅನ್ನು ನೆನಪು ಮಾಡಿಕೊಂಡಿದ್ದಾರೆ.
ಮುಹೂರ್ತದ ದಿನ ಮೊದಲ ಶಾಟ್ ನಲ್ಲಿ ಪುನೀತ್ ಒಂದು ಡೈಲಾಗ್ ಹೇಳಿದ್ದರು. ಅದು ''ನೀನು ಹಿಡಿದಿರುವುದು ಅಪ್ಪು ಅವರ ಕಾಲರ್ ಅಲ್ಲ ಕಣೋ... ಹೈ ಓಲ್ಟೊಜ್ ಪವರು'' ಎಂಬ ಡೈಲಾಗ್ ಆಗಿತ್ತು. ಹೀರೋ ಆಗಿ ಪುನೀತ್ ಮೊದಲು ಹೇಳಿದ್ದು ಇದೇ ಡೈಲಾಗ್.

ಪುನೀತ್ ಬಾಲನಟನಾಗಿ ನಟಿಸಿದ್ದರು, ಹೀರೋ ಆಗಿ ಆಕ್ಟ್ ಮಾಡುವುದು ಬಹಳ ಹೊಸದಾಗಿ ಇತಂತೆ. ಪುನೀತ್ ಡೈಲಾಗ್ ಹೇಳಿದ್ದು ಕೇಳಿ ಇವನು ಡೈಲಾಗ್ ಹೇಳಿದ್ನಾ ಎಂದು ಮನಸ್ಸಿನಲ್ಲಿಯೇ ಕೆಲವರು ಹೇಳಿಕೊಂಡಿದ್ದರಂತೆ. ಈ ರೀತಿ ತಮ್ಮ ಮೊದಲ ಸಿನಿಮಾದ ಮೊದಲ ಡೈಲಾಗ್ ಅನ್ನು ನಗುತ್ತಾ ಪುನೀತ್ ವಿವರಿಸಿದರು.
English summary
This is Puneeth Rajkumar's first movie dialogue as a hero. Power Star Puneeth Rajkumar remembers his first movie Appu dialogue in his recent interview.


Click it and Unblock the Notifications