twitter
    For Quick Alerts
    ALLOW NOTIFICATIONS  
    For Daily Alerts

    ಇವರು ಯಾರು ಬಲ್ಲಿರೇನು? ಇವರ ಹೆಸರು ಹೇಳಲೇನು

    By Suneetha
    |

    ರಾಮ್ ಗೋಪಾಲ್ ವರ್ಮಾ ಅವರ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾ ನೋಡಿ ಬಂದವರು 'ವೀರಪ್ಪನ್' ಪಾತ್ರ ಮಾಡಿದ ಪಾತ್ರಧಾರಿಯನ್ನು ಹೊಗಳಿದ್ದೇ ಹೊಗಳಿದ್ದು. ಇಲ್ಲಿವರೆಗೂ ಅವರ ಅಸಲಿ ಫೊಟೋವನ್ನು ಗಾಂಧಿನಗರದ ಪ್ರೇಕ್ಷಕರು ಯಾರು ನೋಡೇ ಇಲ್ಲ.

    ಆದರೆ ಇದೀಗ ಚಿತ್ರ ಯಶಸ್ವಿಯಾಗಿ ಬಾಕ್ಸಾಫೀಸ್ ನಲ್ಲಿ ಒಳ್ಳೆ ಕಲೆಕ್ಷನ್ ಮಾಡಿದ್ದು, ಎಲ್ಲಾ ಕಡೆ 'ಕಿಲ್ಲಿಂಗ್ ವೀರಪ್ಪನ್' ನಿರ್ದೇಶಕ ವರ್ಮಾ ಹಾಗೂ ಅದರಲ್ಲಿದ್ದ ವೀರಪ್ಪನ್ ಪಾತ್ರಧಾರಿಯದೇ ಮಾತು.[ಶಿವಣ್ಣ ಅವರ ಕಾಫಿ ಕಪ್ ವೈರಲ್ ಆಯ್ತು ಕಣ್ರೀ]

    ಯಾರೂಂತ ಗೊತ್ತಾಯ್ತ, ಗೊತ್ತಾಗಿಲ್ವ?, ಅವರೇ ವರ್ಮಾ ಸೃಷ್ಟಿಸಿದ ವೀರಪ್ಪನ್, ಅಲಿಯಾಸ್ ಸಂದೀಪ್ ಭಾರದ್ವಾಜ್. ಹೌದು ಮುಂಬೈ ಮೂಲದ ಮಾಡೆಲ್ ಸಂದೀಪ್ ಭಾರದ್ವಾಜ್ ಸಿನಿಮಾ ಕ್ಷೇತ್ರದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಅಲೆದಾಡುತ್ತಿದ್ದಾಗ ವರ್ಮಾ ಅವರ ಕಣ್ಣಿಗೆ ಬಿದ್ದು ತಮ್ಮ ಕನಸಿನ ವೀರಪ್ಪನ್ ಪಾತ್ರಕ್ಕೆ ಜೀವ ತುಂಬಿದರು.

    'ಕಿಲ್ಲಿಂಗ್ ವೀರಪ್ಪನ್' ಇಡೀ ಸಿನಿಮಾದಲ್ಲಿ ತುಂಬಾ ಹೈಲೈಟ್ ಆಗೋದು ವೀರಪ್ಪನ್ ಪಾತ್ರಧಾರಿ ಸಂದೀಪ್ ಭಾರದ್ವಾಜ್. ನ್ಯಾಷನಲ್ ಸ್ಕೂಲ್ ಡ್ರಾಮಾ ಆರ್ಟಿಸ್ಟ್ ಆಗಿರುವ ಸಂದೀಪ್ ಅವರು 'ವೀರಪ್ಪನ್' ಮೂಲಕ ಖಳನಾಯಕನಾಗಿ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡರು. ಮುಂದೆ ಓದಿ..

    ತಿಳಿಯಿತೇ ವರ್ಮಾ ಮಾತಿನ ಮರ್ಮ

    ತಿಳಿಯಿತೇ ವರ್ಮಾ ಮಾತಿನ ಮರ್ಮ

    ಅಂದಹಾಗೆ 'ಕಿಲ್ಲಿಂಗ್ ವೀರಪ್ಪನ್' ಪ್ರೆಸ್ ಮೀಟ್ ಆಗುವಾಗ 'ವೀರಪ್ಪನ್' ಪಾತ್ರಧಾರಿಯನ್ನು ಯಾಕೆ ಕರೆಸುತ್ತಿಲ್ಲ ಎಂಬುದು ಎಲ್ಲಾ ಮಾಧ್ಯಮದ ಪತ್ರಕರ್ತರ ಸಾಮಾನ್ಯ ಪ್ರಶ್ನೆಯಾಗಿತ್ತು. ಅದಕ್ಕೆ ವರ್ಮಾ ಅವರು 'ಆತನನ್ನು ಬೇಕೆಂದೇ ಕರೆಸುತ್ತಿಲ್ಲ ಎಂದು ಉತ್ತರ ನೀಡಿದ್ದರು. ಜೊತೆಗೆ ಅದಕ್ಕೆ ಒಂದು ಕಾರಣವನ್ನು ನೀಡಿದ್ದರು. 'ಆ ಪಾತ್ರಧಾರಿಯ ಪರಿಚಯ ನಿಮಗಾದರೆ ಆತನೇ ನಿಮಗೆ ಚಿತ್ರದುದ್ದಕ್ಕೂ ಗೋಚರಿಸುತ್ತಾನೆ. ಆದರೆ ಈಗಿನ ಇಮೇಜ್ ಮನಸ್ಸಲ್ಲಿದ್ದರೆ, ಚಿತ್ರದಲ್ಲಿ ನಿಮಗೆ ವೀರಪ್ಪನ್ ಆಗಿಯೇ ಕಾಣುತ್ತಾನೆ' ಎಂದಿದ್ದರು.

    ಎಲ್ಲರಿಂದ ಮೈಗಾಡ್ ಉದ್ಘಾರ

    ಎಲ್ಲರಿಂದ ಮೈಗಾಡ್ ಉದ್ಘಾರ

    ಈಗಾಗಲೇ ಎಲ್ಲರಿಗೂ ವೀರಪ್ಪನ್ ಪಾತ್ರಧಾರಿ ನಟ ಸಂದೀಪ್ ಭಾರದ್ವಾಜ್ ಅವರ ನಿಜವಾದ ಫೋಟೋ ಎಲ್ಲರ ಕೈಗೆ ದೊರಕಿದ್ದು, ಫೋಟೋ ನೋಡಿದವರು 'ಮೈ ಗಾಡ್' ಎಂಬ ಉದ್ಘಾರ ತೆಗೆದಿದ್ದಾರೆ.[ಕಿಲ್ಲಿಂಗ್ ವೀರಪ್ಪನ್: ಕನ್ನಡ ಚಲನಚಿತ್ರ ವಿಮರ್ಶೆ]

    ವಿಕ್ರಂ ಸೃಷ್ಟಿಸಿದ ವೀರಪ್ಪನ್

    ವಿಕ್ರಂ ಸೃಷ್ಟಿಸಿದ ವೀರಪ್ಪನ್

    ಹೌದು ಎಲ್ಲಿಯ ಚಾಕಲೇಟು ಹೀರೋ ಮಾಡೆಲ್ ಸಂದೀಪ್ ಎಲ್ಲಿಯ ಕಾಡುಗಳ್ಳ ವೀರಪ್ಪನ್. ಈ ಮುದ್ದಾದ ಹೀರೋಗೆ ವಿಲನ್ ಶೇಡ್ ಕೊಟ್ಟವರು ಮೇಕಪ್ಪ್ ಮ್ಯಾನ್ ವಿಕ್ರಂ ಗೈಕವಾಡ ಅವರು. ಒಟ್ನಲ್ಲಿ ಮೇಕಪ್ಪ್ ಮ್ಯಾನ್ ವಿಕ್ರಂ ಗೈಕವಾಡ ಅವರು ತಮ್ಮ ಕೈ ಚಳಕದಲ್ಲಿ ತದ್ರೂಪಿ ವೀರಪ್ಪನ್ ನನ್ನೇ ಸೃಷ್ಟಿ ಮಾಡಿದ್ದಾರೆ.['ವೀರಪ್ಪನ್' ಒಂದು ದಿನದಲ್ಲಿ ಮಾಡಿದ ಕಲೆಕ್ಷನ್ ಎಷ್ಟು ಗೊತ್ತಾ?]

    ವಿಕ್ರಂ ಅತ್ಯುತ್ತಮ ಮೇಕಪ್ಪ್ ಮ್ಯಾನ್

    ವಿಕ್ರಂ ಅತ್ಯುತ್ತಮ ಮೇಕಪ್ಪ್ ಮ್ಯಾನ್

    ಮುಂದಿನ ದಿನಗಳಲ್ಲಿ ಚಲನಚಿತ್ರ ಪ್ರಶಸ್ತಿ ಘೋಷಣೆ ಆಗುವ ಸಂದರ್ಭದಲ್ಲಿ ಅತ್ಯುತ್ತಮ ಮೇಕಪ್ಪ್ ಮ್ಯಾನ್ ಅಂತ ಏನಾದ್ರೂ ಪ್ರಶಸ್ತಿ ಕೊಡುವುದಾದರೆ ಅದು ಪಕ್ಕಾ ವಿಕ್ರಂ ಗೈಕವಾಡ ಅವರಿಗೆ ಕೊಡಬೇಕು. ಯಾಕೆಂದರೆ ಅವರ ಕೈಚಳಕದಲ್ಲಿ ಒಬ್ಬ ವೀರಪ್ಪನ್ ಸೃಷ್ಟಿ ಆಗಿದ್ದಾನೆ ಅಲ್ವಾ.[ಕಿಲ್ಲಿಂಗ್ ವೀರಪ್ಪನ್ Vs ಅಟ್ಟಹಾಸ: ಯಾವುದು ನಿಜವಾದ ಇತಿಹಾಸ? ]

    'ಆಕ್ಟರ್ ಮತ್ತು ಕ್ಯಾರೆಕ್ಟರ್'

    ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರೇ ಸ್ವತಃ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ನಟ ಸಂದೀಪ್ ಭಾರದ್ವಾಜ್ ಅವರ ರೀಲ್ ಮತ್ತು ರಿಯಲ್ ಫೋಟೋ ಹಾಕಿ 'ಆಕ್ಟರ್ ಮತ್ತು ಕ್ಯಾರೆಕ್ಟರ್' ಅಂತ ಬರೆದುಕೊಂಡಿದ್ದಾರೆ. ಆದ್ರೆ ಯಾರೇ ಏನೇ ಹೇಳಿದ ಈ ಎಲ್ಲಾ ಕ್ರೆಡಿಟ್ ಮಾತ್ರ ಮೇಕಪ್ಪ್ ಮ್ಯಾನ್ ವಿಕ್ರಂ ಅವರಿಗೆ ಸಲ್ಲಬೇಕು.

    ಕಾಫಿ ಕಪ್ ವೈರಲ್

    ಇನ್ನು ಸಿನಿಮಾ ಬಿಡುಗಡೆ ಆದಾಗಿನಿಂದ ಒಂದಲ್ಲಾ ಒಂದು ವಿಚಾರದಲ್ಲಿ ಸುದ್ದಿಯಾಗುತ್ತಿದ್ದು, ವೀರಪ್ಪನ್ ನ ಪೋಸ್ಟರ್ ನಲ್ಲಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಕಾಫಿ ಕಪ್ ಇಡೀ ಗಾಂಧಿನಗರದಲ್ಲಿ ಟ್ರೆಂಡ್ ಹುಟ್ಟಿಸಿ ಸುದ್ದಿಯಾಗಿತ್ತು. ಇದೀಗ ಕಾಫಿ ಕಪ್ ಲಿಸ್ಟ್ ಗೆ ಹೊಸ ಸೇರ್ಪಡೆ ನಿರ್ದೇಶಕ ಆರ್.ಜಿ.ವಿ ಅವರು.

    English summary
    National School of Drama’s Sandeep Bharadwaj play Veerappan in Ram Gopal Varma’s just released film, Killing Veerappan. The film, based on the notorious sandalwood smuggler, has been in the news for the striking similarity between the real and reel versions of the forest brigand.
    Wednesday, January 6, 2016, 10:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X