ಪವನ್ ಕುಮಾರ್ ರಿಗೆ 'ಗಾಳಿಪಟ 2' ಸಿನಿಮಾ ಸಿಗೋಕ್ಕೆ ಈ ಫೋಟೋನೇ ಕಾರಣ
'ಗಾಳಿಪಟ 2' ಸಿನಿಮಾದಲ್ಲಿ ಏನೆಲ್ಲ ಬದಲಾಗಿ ಹೋಯಿತು. ಆದರೆ, ಸಿನಿಮಾದ ನಾಯಕರಲ್ಲಿ ಒಬ್ಬರಾದ ಪವನ್ ಕುಮಾರ್ ಮಾತ್ರ ಚಿತ್ರತಂಡದಲ್ಲಿಯೇ ಉಳಿದುಕೊಂಡಿದ್ದಾರೆ. ಅವರಿಗೆ 'ಗಾಳಿಪಟ 2' ಸಿನಿಮಾದ ಅವಕಾಶ ಕೊಡಿಸಿದ್ದು, ಅದೇ ಸಿನಿಮಾದಲ್ಲಿ ಉಳಿಯುವಂತೆ ಮಾಡಿದ್ದು, ಒಂದು ಫೋಟೋ.
ಈ ಫೋಟೋವನ್ನು ಪವನ್ ಕುಮಾರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದೇ ಫೋಟೋ ಮೂಲಕ 'ಗಾಳಿಪಟ 2' ಸಿನಿಮಾಗೆ ಪವನ್ ಕುಮಾರ್ ಆಯ್ಕೆ ಆಗಿದ್ದಾರೆ. ಈ ಫೋಟೋ ಹಿಂದಿನ ಕಥೆಯನ್ನು ಪವನ್ ಇದೀಗ ತಿಳಿಸಿದ್ದಾರೆ.
2018ರಲ್ಲಿ ಹೈದರಾಬಾದ್ ನಲ್ಲಿ 'ಯೂ ಟರ್ನ್' ಸಿನಿಮಾದ ಚಿತ್ರೀಕರಣದಲ್ಲಿ ಪವನ್ ಬ್ಯುಸಿ ಇದ್ದರು. ಒಂದು ಮುಂಜಾನೆ ಎದ್ದು, ಒಂದು ಸೆಲ್ಫಿ ತೆಗೆದುಕೊಂಡರು. ಈ ಫೋಟೋವನ್ನು ಮೆಸೇಜ್ ಮಾಡುವ ಸಮಯದಲ್ಲಿ ಎಮೋಜಿಯಾಗಿ ಬಳಸಿ ಪ್ರತಿಕ್ರಿಯೆ ನೀಡಿದ್ದರು.

ಈ ಫೋಟೋ ನಿರ್ದೇಶಕ ಯೋಗರಾಜ್ ಕಣ್ಣಿಗೆ ಬಿತ್ತು. ಫೋಟೋ ನೋಡಿ ಸಿಕ್ಕಾಪಟ್ಟೆ ನಕ್ಕ ಯೋಗರಾಜ್ ಭಟ್, 'ಗಾಳಿಪಟ 2' ಚಿತ್ರದಲ್ಲಿ ಪವನ್ ಗಾಗಿಯೇ ಒಂದು ಪಾತ್ರ ಬರೆದರು. ಸುಮ್ಮನೆ ಕ್ಲಿಕಿಸಿದ ಈ ಫೋಟೋ ಒಂದು ಪಾತ್ರದ ಉದಯಕ್ಕೆ ಸ್ಫೂರ್ತಿ ನೀಡಿತ್ತು.
ಆ ಫೋಟೋ ನೋಡಿ ನೋಡಿ 'ಗಾಳಿಪಟ 2' ಸಿನಿಮಾದಲ್ಲಿ ಪವನ್ ಗಾಗಿಯೇ ಯೋಗರಾಜ್ ಭಟ್ ಒಂದು ಪಾತ್ರ ಬರೆದರು. ಹೀಗಾಗಿ ಚಿತ್ರದ ತಾರಗಣದಲ್ಲಿ ಏನೇ ಬದಲಾವಣೆ ಆದರೂ, ಪವನ್ ಮಾತ್ರ ಹಾಗೆಯೇ ಉಳಿದುಕೊಂಡಿದ್ದಾರೆ. ಗಣೇಶ್ ಹಾಗೂ ದಿಗಂತ್ ಸಿನಿಮಾದ ಉಳಿದ ನಾಯಕರಾಗಿದ್ದಾರೆ.


Click it and Unblock the Notifications











