ಅಂಬಿ ದರ್ಶನಕ್ಕೆ ರಮ್ಯಾ ಬರ್ಲಿಲ್ಲ: ಕಾರಣ ವಿಚಿತ್ರ ಕಾಯಿಲೆ.! ಏನದು.?

ನವೆಂಬರ್ 24, ಶನಿವಾರ ರಾತ್ರಿ 10.15 ಸುಮಾರಿಗೆ ಮಂಡ್ಯದ ಗಂಡು ಅಂಬರೀಶ್ ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅಂಬರೀಶ್ ಇಹಲೋಕ ತ್ಯಜಿಸಿದರು. ಈ ಕಹಿ ಸುದ್ದಿ ಕೇಳಿದ ಕೂಡಲೆ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಯಶ್, ಸುದೀಪ್ ಸೇರಿದಂತೆ ಕನ್ನಡ ಚಿತ್ರರಂಗದ ಹಲವು ನಟ-ನಟಿಯರು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ಧಾವಿಸಿದರು.

ಅಂಬರೀಶ್ ರವರ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ಸೂಪರ್ ಸ್ಟಾರ್ ರಜನಿಕಾಂತ್, ಮೆಗಾ ಸ್ಟಾರ್ ಚಿರಂಜೀವಿ, ತೆಲುಗು ನಟ ಮೋಹನ್ ಬಾಬು ಕೂಡ ಆಗಮಿಸಿದ್ದರು.

ಪಕ್ಷ ಭೇದ ಮರೆತು ರಾಜಕಾರಣಿಗಳು ಕೂಡ ಅಂಬಿಗೆ ಅಂತಿಮ ನಮನ ಸಲ್ಲಿಸಿ ಗೌರವ ಅರ್ಪಿಸಿದರು.

ಇನ್ನೂ ಸ್ವೀಡನ್ ನಲ್ಲಿ ಶೂಟಿಂಗ್ ರದ್ದುಗೊಳಿಸಿ ನಟ ದರ್ಶನ್ ಕೂಡ ಅಂಬಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಆದ್ರೆ, 'ಸ್ಯಾಂಡಲ್ ವುಡ್ ಕ್ವೀನ್' ಅಂತ ಕರೆಯಿಸಿಕೊಳ್ಳುತ್ತಿದ್ದ ರಮ್ಯಾ ಮಾತ್ರ ಅಂಬರೀಶ್ ಅಂತಿಮ ದರ್ಶನ ಪಡೆಯಲು ಬರಲೇ ಇಲ್ಲ. ಇದರ ಹಿಂದೆ ಒಂದು ಕಾರಣ ಇದೆ. ಅದೇನು ಅಂತ ತಿಳಿಯುವ ಕುತೂಹಲ ಇದ್ದರೆ, ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ರಮ್ಯಾ ಬರಲೇಬೇಕಿತ್ತು.!

ರಮ್ಯಾ ಬರಲೇಬೇಕಿತ್ತು.!

ಚಿತ್ರ ನಟಿ ಆಗಿದ್ದ ರಮ್ಯಾ ಮಂಡ್ಯದ ಸಂಸದೆ ಆಗಿ ಆಯ್ಕೆ ಆಗುವ ಹಿಂದೆ ರೆಬೆಲ್ ಸ್ಟಾರ್ ಅಂಬರೀಶ್ ಪಾತ್ರ ಪ್ರಮುಖವಾಗಿತ್ತು. ರಮ್ಯಾ ಪರವಾಗಿ ಅಂಬರೀಶ್ ಪ್ರಚಾರ ಕೂಡ ಮಾಡಿದ್ದರು. ರಮ್ಯಾಗಾಗಿ ಅಂಬರೀಶ್ ಇಷ್ಟೆಲ್ಲಾ ಮಾಡಿರುವಾಗ, ಕೃತಜ್ಞತಾಪೂರ್ವಕವಾಗಿ ಅಂಬರೀಶ್ ಗೆ ಅಂತಿಮ ನಮನ ಸಲ್ಲಿಸಲು ರಮ್ಯಾ ಬರಲೇಬೇಕಿತ್ತು. ಆದ್ರೆ, ರಮ್ಯಾ ಗೈರಾಗಲು ಒಂದು ಕಾರಣವಿದೆ.

ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ರಮ್ಯಾ

ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ರಮ್ಯಾ

ನಟಿ ಹಾಗೂ ಮಾಜಿ ಸಂಸದೆ ರಮ್ಯಾ Osteoclastoma ಎಂಬ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ. ಕಾಲಿನಲ್ಲಿ ಸೆಲ್ ಟ್ಯೂಮರ್ ಉಂಟಾಗಿದ್ದು, ಹತ್ತು ಲಕ್ಷ ಮಂದಿ ಪೈಕಿ ಒಬ್ಬರಿಗೆ ಕಾಣಿಸಿಕೊಳ್ಳುವ ವಿಚಿತ್ರ ರೋಗ ಲಕ್ಷಣ ಇದು. ಸದ್ಯ ಈ ಕಾಯಿಲೆಗೆ ರಮ್ಯಾ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕ್ಯಾನ್ಸರ್ ಫ್ರೀ

ಕ್ಯಾನ್ಸರ್ ಫ್ರೀ

ಕಾಲಿನಲ್ಲಿ ನೋವು ಉಂಟಾದ ಕೂಡಲೆ ಚಿಕಿತ್ಸೆ ಪಡೆದ ಕಾರಣ ರಮ್ಯಾ ಕಾಲು ಸದ್ಯ ಟ್ಯೂಮರ್ ಮತ್ತು ಕ್ಯಾನ್ಸರ್ ಫ್ರೀ ಆಗಿದೆ. ಈ ಕುರಿತು ಸ್ವತಃ ರಮ್ಯಾ ಅವರೇ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.

ಇದೇ ಕಾರಣ

ಇದೇ ಕಾರಣ

ಇನ್ನೂ ಕೆಲವು ವಾರಗಳ ಕಾಲ ರಮ್ಯಾ ಓಡಾಡುವ ಹಾಗಿಲ್ಲ. ರಮ್ಯಾಗೆ ಈ ರೀತಿ ಆಗಿರುವುದರಿಂದ ಅಂಬರೀಶ್ ಗೆ ಅಂತಿಮ ನಮನ ಸಲ್ಲಿಸಲು ಸಾಧ್ಯವಾಗಿಲ್ಲ.

More from Filmibeat

English summary
This is the reason why Kannada Actress, Congress Politician Ramya missed Ambarish's last rites.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X