ರಶ್ಮಿಕಾ ಮಂದಣ್ಣ ಬಗ್ಗೆ ಏನೇನೋ ಸುದ್ದಿ: ಯಾವುದನ್ನೂ ನಂಬಬೇಡಿ.!
ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಕೆಲ ದಿನಗಳಿಂದ ನಟಿ ರಶ್ಮಿಕಾ ಮಂದಣ್ಣ ಟ್ರೆಂಡಿಂಗ್ ನಲ್ಲಿದ್ದಾರೆ. ಈಗಾಗಲೇ ನಟ ರಕ್ಷಿತ್ ಶೆಟ್ಟಿ ಜೊತೆಗೆ ರಶ್ಮಿಕಾ ಮಂದಣ್ಣ ಎಂಗೇಜ್ ಆಗಿರುವ ಕಾರಣ, ಬೇರೆ ಹೀರೋಗಳ ಜೊತೆಗೆ ರಶ್ಮಿಕಾ ಡುಯ್ಯೆಟ್ ಹಾಡುವುದು ನೆಟ್ಟಿಗರಿಗೆ ಇಷ್ಟ ಆಗುತ್ತಿಲ್ಲ.
ಹೀಗಾಗಿ, ಕೆಲವರು ರಶ್ಮಿಕಾ ಮಂದಣ್ಣ ಬಗ್ಗೆ ಬಾಯಿಗೆ ಬಂದ ಹಾಗೆ ಕಾಮೆಂಟ್ ಮಾಡಿದ್ದರು. ಎಲ್ಲದಕ್ಕೂ ಕೂಲ್ ಆಗಿಯೇ ರಶ್ಮಿಕಾ ಕೂಡ ರಿಯಾಕ್ಟ್ ಮಾಡಿದ್ದರು.
ಈ ನಡುವೆ, ಇನ್ನು ಕೆಲವೇ ದಿನಗಳಲ್ಲಿ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಮುರಿದು ಬೀಳಲಿದೆ. ಯಾವುದೇ ಕ್ಷಣದಲ್ಲಿ ತಮ್ಮ ಬ್ರೇಕಪ್ ಸುದ್ದಿಯನ್ನ ರಶ್ಮಿಕಾ ಮಂದಣ್ಣ ಬ್ರೇಕ್ ಮಾಡಬಹುದು ಎಂಬ ಗುಸುಗುಸು ಟಾಲಿವುಡ್ ಅಂಗಳದಲ್ಲಿ ಕೇಳಿಬಂದಿತ್ತು.
ಕೆಲ ವೆಬ್ ತಾಣಗಳು, ಪತ್ರಿಕೆಗಳು ಹಾಗೂ ನ್ಯೂಸ್ ಚಾನೆಲ್ ಗಳು ಇದೇ ವಿಚಾರದ ಕುರಿತು ವರದಿ ಪ್ರಕಟಿಸಿತ್ತು. ಇದಕ್ಕೆಲ್ಲ ನಟಿ ರಶ್ಮಿಕಾ ಮಂದಣ್ಣ ತಮ್ಮ ಫೇಸ್ ಬುಕ್ ಲೈವ್ ನಲ್ಲಿ ಸ್ಪಷ್ಟ ಪಡಿಸಿದ್ದಾರೆ. ಮುಂದೆ ಓದಿರಿ...

ಐ ಲವ್ ರಕ್ಷಿತ್ ಶೆಟ್ಟಿ.!
''ರಶ್ಮಿಕಾ ಮಂದಣ್ಣ-ರಕ್ಷಿತ್ ಶೆಟ್ಟಿ ಬ್ರೇಕಪ್ ಮಾಡಿಕೊಳ್ತಾರೆ'' ಅಂತ ಯಾರ್ಯಾರೋ, ಏನೇನೋ ಮಾತನಾಡಿಕೊಳ್ಳಬಹುದು. ಆದ್ರೆ, ರಕ್ಷಿತ್ ಮೇಲೆ ರಶ್ಮಿಕಾ ಇಟ್ಟಿರುವ ಪ್ರೀತಿ ಮಾತ್ರ ಕೊಂಚ ಕೂಡ ಕಮ್ಮಿ ಆಗಿಲ್ಲ. ಅದಕ್ಕೆ ಸಾಕ್ಷಿ ಫೇಸ್ ಬುಕ್ ಲೈವ್ ನಲ್ಲಿ ರಶ್ಮಿಕಾ ಆಡಿದ ಮಾತು.

ರಶ್ಮಿಕಾ ಹೇಳಿದ್ದೇನು.?
''ನಿಮ್ಮ would be ಬಗ್ಗೆ ಏನಾದರೂ ಹೇಳಿ.?'' ಎಂದು ಅಭಿಮಾನಿಯೊಬ್ಬರು ಫೇಸ್ ಬುಕ್ ಲೈವ್ ನಲ್ಲಿ ರಶ್ಮಿಕಾ ರನ್ನ ಕೇಳಿದರು. ಅದಕ್ಕೆ ರಶ್ಮಿಕಾ ಕೊಟ್ಟ ಉತ್ತರ - ''Well, I love him''.

ಯಾವುದೂ ನಿಜ ಅಲ್ಲ.!
''ನನ್ನ ಬಗ್ಗೆ ವೆಬ್ ಸೈಟ್ ನಲ್ಲಿ, ನ್ಯೂಸ್ ಪೇಪರ್ ನಲ್ಲಿ ಸುದ್ದಿ ಬಂದರೆ, ಅದನ್ನ ನಾನಾಗಿ ನಾನೇ ಸೋಷಿಯಲ್ ಮೀಡಿಯಾದಲ್ಲಿ ಕನ್ಫರ್ಮ್ ಮಾಡುವವರೆಗೂ ನಂಬಬೇಡಿ. ಕೆಲ ವರದಿಗಳು ನಿಜ ಅಲ್ಲ'' ಎಂದು ರಶ್ಮಿಕಾ ಮಂದಣ್ಣ ಫೇಸ್ ಬುಕ್ ಲೈವ್ ನಲ್ಲಿ ಹೇಳಿದ್ದಾರೆ.

ಬ್ರೇಕಪ್ ಸುದ್ದಿ ಬಗ್ಗೆಯೇ ರಶ್ಮಿಕಾ ಹೇಳಿದ್ದು.!
''ರಶ್ಮಿಕಾ-ರಕ್ಷಿತ್ ಶೆಟ್ಟಿ ಸದ್ಯದಲ್ಲಿಯೇ ಬ್ರೇಕಪ್ ಮಾಡಿಕೊಳ್ತಾರೆ. ನಿಶ್ಚಿತಾರ್ಥ ಮುರಿದು ಬೀಳುತ್ತದೆ'' ಎಂಬ ಸುದ್ದಿ ಕೆಲ ದಿನಗಳಿಂದ ಕೇಳಿ ಬರುತ್ತಿದೆ. ಈ ಬಗ್ಗೆ ನೇರವಾಗಿ ಹೇಳದೆ, ಇನ್ ಡೈರೆಕ್ಟ್ ಆಗಿ ಫೇಸ್ ಬುಕ್ ಲೈವ್ ನಲ್ಲಿ ಸ್ಪಷ್ಟ ಪಡಿಸಿದ್ದಾರೆ ನಟಿ ರಶ್ಮಿಕಾ ಮಂದಣ್ಣ.

ಟ್ರೋಲ್ ಗಳು ಆರೋಗ್ಯಕರವಾಗಿರಲಿ...
''ಟ್ರೋಲ್ ಎಲ್ಲಾ ಓಕೆ. ಅದು ಫನ್ ಗಾಗಿ, ಕಾಲೆಳೆಯುವ ಸಲುವಾಗಿ ನಿಜ.. ಆದ್ರೆ ಆರೋಗ್ಯಕರವಾದ ಟ್ರೋಲ್ ಮಾಡಿ. ಯಾಕಂದ್ರೆ, ನಾವೂ ಮನುಷ್ಯರು. ನಮಗೂ ಹೃದಯ ಇದೆ'' ಎಂದಿದ್ದಾರೆ ನಟಿ ರಶ್ಮಿಕಾ ಮಂದಣ್ಣ.


Click it and Unblock the Notifications











